ವಿಶ್ವ ತಂಬಾಕು ರಹಿತ ದಿನ: ತಂಬಾಕು ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ? .
ವಿಶ್ವ ‘ತಂಬಾಕು ರಹಿತ ದಿನ’. ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಎಂದು ಹಿರಿಯ ನ್ಯಾಯಾಧೀಶರಾದ ವಿಜಯ್ ಕುಮಾರ್ ಕಾನ್ಪುರ್ ಅವರು ಹೇಳಿದರು, ಯಲಬುರ್ಗಾ ಪಟ್ಟಣದ ಪದವಿ ಪೂರ್ವ ಕಾಲೇಜನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ತಂಬಾಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಯುವಜನರನ್ನು ಈ ಚಟದಿಂದ ದೂರವಿಡುವುದೇ ದೊಡ್ಡ ಸವಾಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ (ಕಾರ್ಖಾನೆ), ಶಾಲಾ, ಕಾಲೇಜು ವಠಾರ, ರೈಲು, ಬಸ್ಸು, ವಿಮಾನಗಳಲ್ಲಿ ಕಟ್ಟುನಿಟ್ಟಾಗಿ ಧೂಮಪಾನ ನಿಯಂತ್ರಣ ಮಾಡಲಾಗುತ್ತದೆ. ಆ ಮೂಲಕ ಪರ್ಯಾಯ ಧೂಮಪಾನ ದಿಂದ ಸಾವಿರಾರು ಜನರನ್ನು ರಕ್ಷಿಸಲಾಗುತ್ತದೆ ಎಂದರು, ಸಿವಿಲ್ ನ್ಯಾಯಾಧೀಶರಾದ ಆಯಿಷಾಬಿ ಮಷಿದ ಅವರು ಮಾತನಾಡಿ, ತಂಬಾಕು ಸೇವನೆಯ ದುಶ್ಚಟಕ್ಕೆ ದಾಸರಾಗಿ ವಿಶ್ವದಲ್ಲಿ ಪ್ರತಿವರ್ಷ ಸುಮಾರು 80 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಭಾರತದಲ್ಲಿ 13 ಲಕ್ಷಕ್ಕೂ ಹೆಚ್ಚು ಜನರು ತಂಬಾಕಿನ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ. ಯುವ ಪೀಳಿಗೆಯು ತಂಬಾಕಿನ ದುಶ್ಚಟಕ್ಕೆ ಬೀಳುವುದನ್ನು ತಡೆಯುವುದು ಒಂದು ಸವಾಲಾಗಿದ್ದರೆ, ಈಗಾಗಲೇ ಈ ದುಶ್ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವುದು ಇನ್ನೂ ದೊಡ್ಡ ಸವಾಲು ಎಂದರು, ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನವು ಸಂತೋಷ ಹೆಚ್ಚಿಸುತ್ತದೆ, ಧೈರ್ಯ ತುಂಬುತ್ತದೆ’ ಎಂಬೆಲ್ಲ ಹುಸಿ ಕಲ್ಪನೆಗಳು ಜನರಲ್ಲಿ ಮೂಡಿರುವುದು ದುರದೃಷ್ಟಕರ. ಬೀಡಿ, ಸಿಗರೇಟು, ಗುಟ್ಕಾ, ಜರ್ದಾ, ಹೀಗೆ ಅನೇಕ ರೀತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಲಾಗುತ್ತಿದೆ. ತಂಬಾಕಿನಲ್ಲಿರುವ 100 ವಿಷಕಾರಕ ಹಾಗೂ 70 ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಶ್ವಾಸಕೋಷದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ನಾಲಗೆ, ಗಂಟಲಿನ ಕ್ಯಾನ್ಸರ್, ದೀರ್ಘಕಾಲದ ಕೆಮ್ಮು, ಶ್ವಾಸಕೋಶದ ಸೋಂಕು, ಹೀಗೆ ಹಲವಾರು ಗುಣಪಡಿಸಲಾಗದ ಭಯಂಕರ ರೋಗಗಳಿಗೆ ಕಾರಣವಾಗುತ್ತದೆ ಎಂದರು, ಹಿರಿಯ ಆರೋಗ್ಯ ಅಧಿಕಾರಿಗಳಾದ ಚನ್ನಬಸಯ್ಯ ಅವರು ತಂಬಾಕು ಮುಕ್ತ ರಹಿತ ಆರೋಗ್ಯ ಕಾಪಾಡುವುದರ ಜತೆಗೆ ಕುಟುಂಬದವರನ್ನೂ ಈ ಚಟದಿಂದ ದೂರ ಇರಿಸುವ ಉದ್ದೇಶದಿಂದಲಾದರೂ ತಂಬಾಕಿನ ಚಟಕ್ಕೆ ಒಳಗಾಗಿರುವವರು ‘ತಂಬಾಕು ರಹಿತ ದಿನ’ದಂದ ಈ ತ್ಯಜಿಸುವ ಪಣ ತೊಡಬೇಕು ಎಂದರು, ಇದೇ ಸಂದರ್ಭದಲ್ಲಿ ದಂತ ವೈದ್ಯಾಧಿಕಾರಿಗಳಾದ ಡಾ, ಮಾರುತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಆನಂದ ಉಳ್ಳಾಗಡ್ಡಿ, ವಿ ಐ ಹಾದಿಮನಿ, ಎ ಎಂ ಶಂಕರ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೌನೇಶ್ ಬಡಿಗೇರ್, ದುರ್ಗಪ್ಪ ಹಿರೇಮನಿ, ಗುಲಾಮ ಅಹ್ಮದ್ ಎ ಎಸ್ ಐ, ರಾಜು ನಿಂಗೋಜಿ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯವರು ಸಿಬ್ಬಂದಿ ವರ್ಗದ ಉಪಸ್ಥಿತರಿದ್ದರು,
ವರದಿ – ಹುಸೇನ ಭಾಷ ಮೋತೆಖಾನ್