ಕರ್ನಾಟಕ ಗ್ರಾಮೀಣ ಬ್ಯಾಂಕ್  ಕರಿಸಿದ್ದಪ್ಪ ಸಿಳ್ಳಿನ ಅವರಿಗೆ ಬೀಳ್ಕೊಡುಗೆ …

Spread the love

ಕರ್ನಾಟಕ ಗ್ರಾಮೀಣ ಬ್ಯಾಂಕ್  ಕರಿಸಿದ್ದಪ್ಪ ಸಿಳ್ಳಿನ ಅವರಿಗೆ ಬೀಳ್ಕೊಡುಗೆ …

ಕರ್ನಾಟಕ ಗ್ರಾಮೀಣ ಬ್ಯಾಂಕ್ 41 ವರ್ಷಗಳ ಸೇವಾ ನಿವೃತ್ತಿ ಹೊಂದಿದ ಕರಿಸಿದ್ದಪ್ಪ ಸಿಳ್ಳಿನ ಅವರಿಗೆ ಸನ್ಮಾನ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಶ್ರೀ ಕರಿಸಿದ್ದಪ್ಪ ಶಿಳ್ಳಿನ ಅವರು 1980 ರಲ್ಲಿ ದಿನಗೂಲಿ ಸಹಾಯಕರಾಗಿ ಬ್ಯಾಂಕ್ ಕೆಲಸಕ್ಕೆ ಸೇರಿದರು, ಅದೇ ಕೆಲಸ  ೬ ತಿಂಗಳ ನಂತರ ಖಾಯಂ ಆಯಿತು. ಮುಧೋಳ ದಿಂದ ಪ್ರಾರಂಭವಾಗಿ ವರ್ಗಾವಣೆ ಮುಕಾಂತರ ಕೊಪ್ಪಳ ಜಿಲ್ಲೆಯ ಮಂಗಳೂರು, ಯಲಬುರ್ಗಾ, ಬಂಡಿ ಗ್ರಾಮಗಳಿಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸಿದರು. ನಂತರ ಕ್ಲರ್ಕ್ ಆಗಿ ಪದೋನ್ನತಿ ಪದೋನ್ನತಿ ಹುದ್ದೆ ಪಡೆದು ಹೀಗೆ ವಿವಿಧ ಶಾಖೆಗಳಲ್ಲಿ ದಕ್ಷತೆಯಿಂದ ಕೆಲಸ ಕಾರ್ಯನಿರ್ವಹಿಸಿದ್ದಾರೆ. ನಾಗರಾಜ್ ಜಾದವ್ ಆಫೀಸರ್ ಮಾತನಾಡಿ ಸದಾ ಕ್ರಿಯಾಶೀಲತೆಯಿಂದ ಇರುವ ಸಹನೆಯ ವ್ಯಕ್ತಿತ್ವದವರು ಮುಂದೆಯೂ ಸಮಾಜಮುಖಿಯಾಗಿ ತಮ್ಮ ಸೇವೆಯನ್ನು ಒದಗಿಸುವುದು ಎಂದು ಆಶಿಸಿ ಶುಭಹಾರೈಸಿದರು ಹಾಗೂ ಮುಧೋಳ ಬ್ರಾಂಚ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪ್ರಥಮ ಹುದ್ದೆಯಿಂದ ನಿವೃತ್ತಿ ಯವರೆಗೂ ಇದೆ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸಿದರು. ಮುಖ್ಯವಾಗಿ ಕರೆಸಿದ್ದಪ್ಪ ನವರು ಮುಧೋಳ ಗ್ರಾಮದಲ್ಲಿ ಸಂಯಮಗುಣ ಹಾಗೂ ಜನರ ಒಡನಾಟದ ಕಾರಣ ಎಲ್ಲರಿಗೂ ಅಚ್ಚುಮೆಚ್ಚಿನ ಕರಸಿದ್ದಪ್ಪಣ್ಣ.ಬ್ಯಾಂಕ್ ಸಹೋದ್ಯೋಗಿಗಳು ಸಹ ಇವರ ಸ್ನೇಹಪರ ವ್ಯಕ್ತಿತ್ವ ಸದಾ ಸ್ಮರಿಸುತ್ತಾರೆ ಎಂದು ಹೇಳಿದರು, ೪೧ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು, ಕರಿಸಿದ್ದಪ್ಪ ಸಿಳ್ಳಿನ ಇವರ ಸೇವಾ ನಿವೃತ್ತಿ ಹೊಂದಿದ್ದರಿಂದ ಆದರ್ಶ ದಂಪತಿಗಳಿಗೆ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಹಾಗೂ ಗುಂಪು ಸಂಘಗಳು, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ವರ್ಗದವರು, ಊರಿನ ನಾಗರಿಕರೆಲ್ಲರೂ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು, ಇದೇ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಆದ ನಾಗರಾಜ್ ನಾಸಿ, ಗ್ರಾಮದ ಮುಖಂಡರು ಅಪ್ಪಣ್ಣ ಪಲ್ಲೇದ, ಬಸಪ್ಪ ಅಕ್ಕಿ ಡಾ, ಅಂದಾನಯ್ಯ, ಉಮೇಶ್ ವಿವೇಕಿ, ಮೌಲಾಸಾಬ್ ಮೋತೆಖಾನ್, ಸುರೇಶ್ ರೆಡ್ಡೇರ, ಬ್ಯಾಂಕಿನ ಸಿಬ್ಬಂದಿ ವರ್ಗದವರು, ಲಿಂಗನ ಬಸಯ್ಯ, ಹಂಚಳಪ್ಪ ಪೂಜಾರ, ಸುಭಾಸ್, ಮುಧೋಳದ ಶಾಖೆಯಲ್ಲಿ ವಯೋ ನಿವೃತ್ತಿ ಹೊಂದಲಿರುವ ಕರಿಸಿದ್ದಪ್ಪ ಶಿಳ್ಳಿನ ಇವರ ಮುಂದಿನ ಜೀವನ ಸಂತೋಷದಾಯಕ ವಾಗಿರಲೆಂದು ಮುಧೋಳದ ಜನತೆ ಇವರ ನಿವೃತ್ತಿ ಜೀವನ ಸಂತೋಷವಾಗಿರಲಿ ಎಂದು  ಶುಭ ಹಾರೈಸಿದರು,

ವರದಿ – ಹುಸೇನ್ ಭಾಷ ಮೋತೆಖಾನ್

Leave a Reply

Your email address will not be published. Required fields are marked *