ಭಾರೀ ಗಾಳಿ ಮಳೆಗೆ ಭಾರೀ ನಷ್ಟ,ಬಾಲಕಿಗೆ ಗಾಯ,,,,,

Spread the love

ಭಾರೀ ಗಾಳಿ ಮಳೆಗೆ ಭಾರೀ ನಷ್ಟ,ಬಾಲಕಿಗೆ ಗಾಯ,,,,,

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ರಾತ್ರಿ ಸುರಿದ ಭಿರು ಗಾಳಿ ಮಿಶ್ರಿತ ಮೆಳೆಯಿಂದಾಗಿ ಹೊರವಲಯದ ಮನೆಗಳೆರೆಡು ಹಾಗೂ ಪ್ರಾರ್ಥನಾ ಮಂದಿರ ಜಖಂ ಗೊಂಡಿವೆ. ಪರಿಣಾಮ ಬಾಲಕಿಯೋರ್ವಳು ಗಾಯಗೊಂಡಿದ್ದು,ಅಪಾರ ನಷ್ಟ ಸಂಭವಿಸಿರುವ ಘಟನೆ ಮೆ31ರ ರಾತ್ರಿ ಜರುಗಿದೆ. ದಿಢೀರ್ ಸುರಿದ ಬಿರಿಗಾಳಿ ಸಹಿತ ಭಾರೀ ಮಳೆಗೆ ಹನಸಿ ರಸ್ತೆಯಲ್ಲಿರವ, ಎರೆಡು ಮನೆಗಳು ಹಾಗೂ ಪ್ರಾರ್ಥನಾ ಮಂದಿರ ಸಂಪೂರ್ಣ ಜಖಂಗೊಂಡಿವೆ.ಮೆನೆ ಹಾಗೂ ಪ್ರಾರ್ಥನಾ ಮಂದಿರಕ್ಕೆ ಮೇಲೊದಿಕೆಯಾಗಿದ್ದ ತಗಡುಗಳು ಗಾಳಿಯ ರಬಸಕ್ಕೆ, ಪೇಪರ್ ತರ ಗಾಳಿಯಲ್ಲಿ ತೇಲಿಕೊಂಡು ಕಿಲೋ ಮೀಟರ್ ದೂರ ಹಾರಿಹೋಗಿವೆ. ಮನೆಯಲ್ಲಿದ್ದ ಬಾಲಕಿಯೋರ್ವಳಿಗೆ ಗಾಯವಾಗಿದ್ದು, ಮನೆಗಳಲ್ಲಿ ವಾಸವಿದ್ದ ದಲಿತ ಕುಟುಂಬಗಳು ಸೂರಿಲ್ಲದೇ ಅಕ್ಷರಸಹಃ ಬೀದಿಗೆ ಬಿದ್ದಿವೆ. ಕೆಲ ವಿದ್ಯುತ್ ಕಂಬಗಳು ನೆಲಕಚ್ಚಿವೆ, ಹಲವೆಡೆ ಮರಗಳು ನೆಲಕ್ಕುರುಳಿವೆ.ಮೆನೆಯ ಮೇಲ್ಚಾವಣೆ ಹಾರಿ ಹೋದ ಸಂದರ್ಭದಲ್ಲಿ, ಬಾಲಕಿಯ ತಲೆಗೆ ತೀವ್ರ ಪೆಟ್ಟಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಜರುಗಿದ ಸುದ್ದಿ ತಿಳಿದ ಕೂಡಲೇ ದಲಿತ ಯುವ ಮುಖಂಡರಾದ ಸಾಲುಮನಿ ರಾಘವೇಂದ್ರ,  ಹಿರೇಹೆಗ್ಡಾಳು ಮಹೇಶ ಸ್ಥಳಕ್ಕೆ ಬೇಟ್ಟಿನೀಡಿ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ.  ತಹಶಿಲ್ದಾರರು ಹಾಗೂ ತಾಪಂ ಇಒ ಭೆಟ್ಟಿ -ಘಟನಾ ಸ್ಥಳಕ್ಕೆ ತಾಪಂ ಕಾರ್ಯನರ್ವಹಣಾಧಿಕಾರಿ ವೈ.ರವಿಕುಮಾರ, ತಹಶಿಲ್ದಾರರಾದ ಟಿ.ಜಗದೀಶ ರವರು ತಮ್ಮ ಸಿಬ್ಬಂದಿಯವರೊಡನೆ ಸ್ಥಳಕ್ಕೆ ಭೇಟ್ಟಿ ನೀಡಿದ್ದಾರೆ. ಘಟನೆಯ ವಿವರ ಪಡೆದು ಸ್ಥಳ  ಪರಿಶೀಲಿಸಿದ್ದಾರೆ, ನಿರಾಶ್ರಿತರಿಗೆ  ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ

ವರದಿ -.️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *