ರೈತ ಮುಖಂಡರಿಗೆ ಮಸಿಬಳಿದ ಪ್ರಕರಣ:ರೈತರಿಂದ ಖಂಡನೆ ……

Spread the love

ರೈತ ಮುಖಂಡರಿಗೆ ಮಸಿಬಳಿದ ಪ್ರಕರಣ:ರೈತರಿಂದ ಖಂಡನೆ ……

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಕೇಂದ್ರ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿಗಳ ವಿರೋಧಿ ನೀತಿಗಳ ವಿರುದ್ಧ ಹೋರಾಟ ಸಮಿತಿ ಕೂಡ್ಲಿಗಿ ಘಟಕದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು ಬೆಂಗಳೂರಿನಲ್ಲಿ ನಡೆದಂತಹ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬೆಳೆದಿರುವ ಕೃತ್ಯವನ್ನು ಖಂಡಿಸಿ ರೈತ ಸಮುದಾಯದ ಸಂಘಟನೆ  ಹೋರಾಟಗಾರರು ವಿವಿಧ ಸಂಘಟನೆಯ ಮುಖಂಡರುಗಳು ಸೇರಿ ನಿನ್ನೆ ನಡೆದ ಘಟನೆಯನ್ನು ಖಂಡಿಸಿ ಸಂಘಪರಿವಾರದ ಹಾಗೂ ಬಿಜೆಪಿಯ ಕೈವಾಡವಿದೆ ಎಂಬುವುದನ್ನು ಖಂಡಿಸಿ ಹಾಗೂ ಪೊಲೀಸ್ ಭದ್ರತೆ ವೈಫಲ್ಯ ಆಗಿರುವುದನ್ನು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಹಲ್ಲೆ ಮತ್ತು ನೃತ್ಯವನ್ನು ಎಸಗಿದವರನ್ನು ಕೂಡಲೇ ಬಂಧಿಸಿ ಕೃತ್ಯದ ಹಿಂದಿರುವ ವ್ಯಕ್ತಿ ಹಾಗೂ ಶಕ್ತಿಗಳನ್ನು ಯಾರೆಂಬುದನ್ನು ಪಾರದರ್ಶಕ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದರು ಈ ಸಂದರ್ಭದಲ್ಲಿ ರೈತ ಸಂಘದ ಹೋರಾಟಗಾರರಾದ ದೇವರಮನೆ ಮಹೇಶ  ಕಕ್ಕುಪ್ಪಿ ಬಸರಾಜ್ ವಿರುಪಾಕ್ಷ ವಕೀಲರು ಹಾಗೂ ಇನ್ನೂ ಮುಂತಾದ ಹೋರಾಟಗಾರರು ಭಾಗವಹಿಸಿದ್ದರು.

ವರದಿ –️ ವಂದೇ ಮಾತರಂ ವಿ.ಜಿ.ವೃಷಭೇಂದ್ರ

Leave a Reply

Your email address will not be published. Required fields are marked *