ಕಸದ ಗಾಡಿಯನ್ನು ಸ್ವತಃ ತಾವೇ ಡ್ರೈವಿಂಗ ಮಾಡಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಕಂದಕೂರ ಪಂ ಮಹಿಳಾ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು….
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಂದಕೂರ ಪಂಚಾಯಿತಿಯ ಕೆಂದ್ರ ಸ್ಥಾನದಲ್ಲಿ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಹಕಾರದಿಂದ ಕಸದ ಗಾಡಿಯನ್ನು ಮಹಿಳಾ ಅಭಿವೃದ್ಧಿ ಅಧಿಕಾರಿಗಳಾದ ಕವಿತಾ ಸಿ ಕಂದಕೂರ ಅವರು ಸ್ವತಃ ತಾವೇ ಡ್ರೈವಿಂಗ ಮಾಡುವದರ ಮುಖಾಂತರ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀ ಮತಿ ಯಲ್ಲಮ್ಮ ಶರಣಪ್ಪ ಹಾಗೂ ಸರ್ವ ಸದಸ್ಯರು ಎಲ್ಲರೂ ಸೇರಿ ಪ್ರತಿ ಮನೆ ಮನೆಗೆ ಕಸದ ಬುಟ್ಟಿಯನ್ನು ನೀಡಿ ಸ್ವಚ್ಛತೆ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಸದಸ್ಯರಾದ ಬಿಮಣ್ಣ. ಸಲಿಂ ಸಾಬ್. ಬಸವರಾಜ ದಳಪತಿ. ನಾಗಪ್ಪ ಆಂಜನೇಯ. ಆಂಜನೇಯ ಆದಿಮನಿ. ಭಿಮನಗೌಡ ಎಲ್ಲ ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ವರದಿ – ಸಂಪಾದಕೀಯ