ಶಿವಮೊಗ್ಗ: ತುಂಗಾ ನಾಲೆಯಲ್ಲಿ ಹೂಳು ಎತ್ತುವ ಕುರಿತು ಹೊಯ್ಸನಹಳ್ಳಿ ರೈತರಿಂದ ಮನವಿ ಸ್ವೀಕರಿಸಲಾಯಿತು.

Spread the love

ಶಿವಮೊಗ್ಗ: ತುಂಗಾ ನಾಲೆಯಲ್ಲಿ ಹೂಳು ಎತ್ತುವ ಕುರಿತು ಹೊಯ್ಸನಹಳ್ಳಿ ರೈತರಿಂದ ಮನವಿ ಸ್ವೀಕರಿಸಲಾಯಿತು.

ಪಿಳ್ಳಂಗೆರೆ, ಹೊಯ್ಸನಹಳ್ಳಿ, ಅಬ್ಬರಗಟ್ಟೆ, ಹಾಗೂ ಕೂಡ್ಲಿಗೆ ಹರಿದು ಹೋಗುವ ತುಂಗಾ ನಾಲೆಯಲ್ಲಿ ಹೆಚ್ಚಿನ ಹೂಳು ತುಂಬಿದೆ. ಕಳೆದ ವಾರ ಸುರಿದ ಅಕಾಲಿಕ ಮಳೆಗೆ ನಾಲೆ ತುಂಬಿ ಹರಿದು ಭತ್ತ ಹಾಗೂ ಅಡಿಕೆ ಬೆಳೆಗೆ ಹಾನಿಯಾಗಿದ್ದು, ಹಾಗೂ ರಸ್ತೆ ಕೊಚ್ಚಿ ಹೋಗಿದ್ದು, ಇದುವರೆಗು ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಸೆ ಕುರಿತು ಯಾವುದೇ ರೀತಿ ಗಮನಹರಿಸದೆ ನಿರ್ಲಕ್ಷ ತೋರಿದ್ದಾರೆ ಆದ್ದರಿಂದ ಈ ಸಮಸ್ಯೆ ಕುರಿತು ತ್ವರಿತ ಗತಿಯಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದು, ಮನವಿ ಮೇರೆಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಸಮಸ್ಸೆ ಕುರಿತು ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರವಿಕುಮಾರ್, ರೈತ ಮುಖಂಡರಾದ ಅನುಸುಯಮ್ಮ, ಗ್ರಾಮ ಪಂಚಾಯತಿ ಸದಸ್ಯರು, ಹಾಗೂ ರೈತರು ಹಾಜರಿದ್ದರು. ಬಾಕ್ಸ್: ಹೊಯ್ಸನಳ್ಳಿ ತೆರಳುವ ದಾರಿ ಮಧ್ಯೆ ಎಲ್ವಟ್ಟಿ ಗ್ರಾಮದಲ್ಲಿ ಹಾದು ಹೋಗುವ ಭದ್ರಾ ಎಡ ದಂಡೆ ನಾಲೆಯು ಕಳೆದ ವಾರ ಸುರಿದ ಮಳೆಗೆ ಹಾನಿಗೊಳಗಾಗಿದ್ದು, ರೈತರು ಜಮೀನಿಗೆ ತೆರಳುವ ರಸ್ತೆ ಸಂಪೂರ್ಣವಾಗಿ ಕುಸಿದಿದ್ದು, ರೈತರು ಓಡಾಟಕ್ಕೆ ತೊಂದರೆಯಾಗಿದ್ದು, ಈ ಕುರಿತು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ನೆರೆ ಪರಿಹಾರದಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಯಿತು. #ಪವಿತ್ರರಾಮಯ್ಯಅಧ್ಯಕ್ಷರು #ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ_ಪ್ರಾಧಿಕಾರ

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *