ಸಂಯುಕ್ತ ಕಿಸಾನ್ ಮೋರ್ಚಾ (SKM) ಹಾಗೂ ರೈತ ಸಂಘಟನೆಗಳ ಸಮನ್ವಯ ಸಮಿತಿ ಕೊಪ್ಪಳ……
ಸಂಯುಕ್ತ ಕಿಸಾನ್ ಮೋರ್ಚಾ (SKM) ಪ್ರಮುಖ ರಾದ ರಾಕೇಶ್ ಟಿಕಾಯತ್ ಇವರ ಮೇಲೆ ನಡೆದ ಬರ್ಬರ ದಾಳಿಯನ್ನು ಖಂಡಿಸಿ ಇಂದು ಕೊಪ್ಪಳ ನಗರದ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ನಡೆಸಲಾಯಿತು. ನಿನ್ನೆ ಬೆಂಗಳೂರಿನ ಗಾಂಧಿ ಭವನದಲ್ಲಿ ಟಿಕಾಯತ್ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಸಭೆಯೊಳಗೆ ನುಗ್ಗಿದ ಆರೆಸ್ಸೆಸ್-ಬಿಜೆಪಿ ಗೂಂಡಾಗಳು ಟಿಕಾಯತ್ ರಿಗೆ ಮಸಿ ಬಳಿದು ದುಷ್ಕೃತ್ಯ ನಡೆಸಿದ್ದಾರೆ. ಇವರೊಂದಿಗಿದ್ದ ರಾಷ್ಟ್ರೀಯ ನಾಯಕಿ ಶ್ರೀ ಮತಿ ಕವಿತಾ ಕುರಗುಂಟಿ ಮತ್ತು ಇತರ ಮಹಿಳೆಯರ ಮೇಲೆ ಕೂಡ ಹಲ್ಯೆ ನಡೆಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಒಂದು ವರ್ಷ ನಡೆದ ಐತಿಹಾಸಿಕ ರೈತ ಚಳವಳಿಯು ಜಗತ್ತಿನ ಗಮನ ಸೆಳೆದಿತ್ತು. ತೀವ್ರ ಮುಖಭಂಗಕ್ಕೀಡಾದ ಮೋದಿ ಸರ್ಕಾರ, ರೈತರಿಗೆ ಮರಣ ಶಾಸನ ವಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆ ಗಳನ್ನು ವಾಪಾಸ್ ಪಡೆದಿಕೊಂಡಿತ್ತು. ಆರ್ ಎಸ್ಎಸ್ ಬಿಜೆಪಿಯ ರಣ ಹೇಡಿಗಳ ಈ ಅಮಾನುಷ ದಾಳಿಯನ್ನು ದೇಶದ ಪ್ರತಿಯೊಬ್ಬ ರೈತರು ಬಲವಾಗಿ ಖಂಡಿಸಿ ಹೋರಾಡಬೇಕು. ಈ ದಾಳಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ತಕ್ಷಣ ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿಪಡಿಸಲು ಒತ್ತಾಯಸುತ್ತೇವೆ. ಮೋದಿ ನೇತೃತ್ವದ ಫ್ಯಾಸಿಸ್ಟ್ ಸರ್ಕಾರ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜಾತಂತ್ರವಾದಿಗಳು, ಆರ್ ಎಸ್ ಎಸ್. ಬಿಜೆಪಿ ಕೋಮುವಾದಿ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಲು ಬೀದಿಗಿಳಿದು ಹೋರಾಡಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ರೈತ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡುತ್ತದೆ. ಇಂದು ಕರ್ನಾಟಕದಾದ್ಯಂತ ನಡೆಯುವ ಪ್ರತಿಭಟನೆಗೆ ಬೆಂಬಲಿಸಿ ಹೋರಾಟ ನಡೆಸಲಾಯಿತು. ಬೊಮ್ಮಾಯಿ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಮಸೂದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಗಳನ್ನು ವಾಪಾಸ್ ಪಡೆಯದೆ ರಾಜ್ಯದ ರೈತರ ವಂಚನೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಹೇರಿಕೆ, ನಿರುದ್ಯೋಗ ಸಮಸ್ಯೆ, ಹಣದುಬ್ಬರ ಏರಿಕೆ, ಆರ್ಥಿಕ ಮುಗ್ಗಟ್ಟಿನಿಂದ ದೇಶದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹತ್ತು ಹಲವು ಸಮಸ್ಯೆ ಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಕೋಮು ದ್ವೇಷ ಹರಡಲಾಗುತ್ತಿದೆ. ಬಿಜೆಪಿ ಸರ್ಕಾರದ ಹಿಡನ್ ಅಜಂಡಗಳ ವಿರುದ್ಧ ರಾಜೀರಹಿತವಾಗಿ ಹೋರಾಡುವವರನ್ನು ಸುಳ್ಳು ಕೇಸ್ ದಾಖಲಿಸಿ ಬಂಧಿಸುವುದು ಮತ್ತು ದಾಳಿ ಮಾಡುವುದು ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಇತರೆ ಜನರ ಮೇಲೆ ನಡೆಯುವ ದೌರ್ಜನ್ಯ ಗಳನ್ನು ತಡೆಗಟ್ಟದಿದ್ದರೆ ರೈತರ ದಂಗೆಯನ್ನು ಎದುರಿಸಬೇಕಾಗುತ್ತದೆ. ಬಂಡಾಯ ಸಾಹಿತಿ ಸಂಘಟನೆ ಯ ಅಲ್ಲಮಪ್ರಭು ಬೆಟ್ಟದೂರು, TUCI ರಾಜ್ಯಾಧ್ಯಕ್ಷ ರಾದ ಆರ್.ಮಾನ್ಸಯ್ಯ, ಕರ್ನಾಟಕ ರೈತ ಸಂಘ (AIKKS) ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರ, AIDO ಶರಣು ಗಡ್ಡಿ, ಮಹಾಂತೇಶ ಕೊತಬಾಳ, TUCI ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ, ದಲಿತ ಮುಖಂಡರಾದ ಪರಶುರಾಮ ಕೆರೆಹಳ್ಳಿ, ಮಾತನಾಡಿದರು. ಚಿಟ್ಟಿ ಬಾಬು, ಶಿವಪ್ಪ ಹಡಪದ್, ಮಖಬುಲ್ ಸಿಂಧನೂರು, ಮಾರುತೆಪ್ಪ ರಾಜಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರಲಾಗಿದೆ. ಬಸವರಾಜ ನರೆಗಲ್ ಜಿಲ್ಲಾ ಕಾರ್ಯದರ್ಶಿ ಕರ್ನಾಟಕ ರೈತ ಸಂಘ (AIKKS) 31 ಮೇ 2022
ವರದಿ – ಸೋಮನಾಥ ಹೆಚ್ ಎಮ್