ಕೊಟ್ಟೂರು:ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ನಾಲ್ವರು ಆರೋಪಿತರ ಬಂಧನ…..
ವಿಜಯನಗರ ಜಿಲ್ಲೆ ಕೊಟ್ಟೂರು ಸರಹದ್ದಿನಲ್ಲಿ ಒಂದು ತಿಂಗಳಲ್ಲಿ ನಡೆದ ಎರೆಡು ಕಳ್ಳತನ ಪ್ರಕರಣಗಳನ್ನು ಭೇದಿಸಲು. ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ನೇತೃತ್ವದಲ್ಲಿ,ಕೂಡ್ಲಿಗಿ ಅಪರಾಧ ವಿಭಾದ ಪಿಎಸ್ಐ ಮಾಲೀಕ್ ಸಾಹೇಬ್ ಕಿಲಾರಿ,ಕೊಟ್ಟೂರು ಪಿಎಸ್ಐ ಕೃಷ್ಣ ವಿಜಯ, ಎಎಸೈ ರುದ್ರಮುನಿ, ಅಪರಾಧ ವಿಭಾದ ಪೇದೆಗಳಾದ ಬಂಡೆ ರಾಘವೇಂದ್ರ, ತಿಪ್ಪೇಸ್ವಾಮಿ, ಚಂದ್ರಮೌಳಿ,ಬಸವರಾಜ, ಎನ್.ಎಮ್.ಸ್ವಾಮಿ, ಮಂಜುನಾಥ, ರೇವಣರಾಧ್ಯ, ಶಂಕರಗೌಡ, ಜಗದೀಶ, ವೀರೇಶರವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಪತ್ತೆಕಾರ್ಯದಲ್ಲಿ ತನ್ನೀನರಾಗಿದ್ದಾಗ ನೂ2ರಂದು ಕೊಟ್ಟೂರು ಪಟ್ಟಣದಲ್ಲಿ,ಬೆ 4ಗಂಟೆ ಸಮಯದಲ್ಲಿ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೂಡ್ಲಿಗಿ ತಾಲೂಕು ಕುಪ್ಪಿನಕೇರಿ ಗ್ರಾಮದ ಪೋತರಾಜ ತಂದೆ ಬಾಲರಾಜ 30ವರ್ಷ,ಕೊಟ್ಟೂರು ಪಟ್ಟಣ ಜಾಕೀರ್ ತಂದೆ ಸುಬಾನ್ ಸಾಬ್ 24ವರ್ಷ, ಮತ್ತು ಸುದರ್ಶನ ತಂದೆ ತಿಪ್ಪೇಸ್ವಾಮಿ 22 ವರ್ಷ, ವಿಶ್ವನಾಥ ತಂದೆ ಮೃತ್ಯುಂಜಯ 22 ವರ್ಷ,ಇವರನ್ನು ಬಂಧಿಸಿ ವಿಚಾರಿಸಲಾಗಿದೆ. ಬಂದಿತರು ಸಂಶಯಾಸ್ಪದ ರೀತಿಯಲ್ಲಿ ಕಳವು ಮಾಡಲು ಕಬ್ಬಿಣದ ರಾಡು, ಕೈ ಆರೇಕೋಲಿನೊಂದಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಲಾಗಿ ಕೊಟ್ಟೂರು ಪಟ್ಟಣದಲ್ಲಿ ಎರೆಡು ಕಳವು ಪ್ರಕರಣಗಳು ಸೇರಿದಂತೆ,ರಾಯಚೂರು ನಗರದಲ್ಲಿ ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಕಳ್ಳರು ಸ್ವತಃ ಒಪ್ಪಿಕೊಂಡಿದ್ದಾರೆ. ಅವರಿಂದ 140ಗ್ರಾಮಂ ತೂಕದ ಚಿನ್ನದ ಆಭರಣಗಳು,200ಗ್ರಾಂ ತೂಕದ ಬೆಳ್ಳಿ ಆಭರಣಗಳು,1ಲಕ್ಷ ರೂ ನಗದು ಹಣ ಜಪ್ತು ಮಾಡಿಕೊಳ್ಳಲಾಗಿದೆ.ಕಳ್ಳರಿಂದ ವಶಪಡಿಸಿಕೊಂಡ ಸಾಮಾಗ್ರಿಗಳ ಒಟ್ಟು ಮೊತ್ತ 6.84.200₹ ಆಗಿದ್ದು, ಬಂಧಿತ ನಾಲ್ವರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಶಂಸೆ ಬಹುಮಾನ ಘೋಷಣೆ:-ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಭೇದಿಸಿದ ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ನೇತೃತ್ವದ,ಕೂಡ್ಲಿಗಿ ಅಪರಾಧ ವಿಭಾದ ಪಿಎಸ್ಐ ಮಾಲೀಕ್ ಸಾಹೇಬ್ ಕಿಲಾರಿ,ಕೊಟ್ಟೂರು ಪಿಎಸ್ಐ ಕೃಷ್ಣ ವಿಜಯ, ಎಎಸೈ ರುದ್ರಮುನಿ ತಂಡವನ್ನು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದು, ಬಹುಮಾನ ಘೋಷಿಸಿದ್ದಾರೆ
ವರದಿ .✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428