ಜುಮಲಾಪುರ ಗ್ರಾಮ ದಲ್ಲಿ ನೆಡೆದ ಶ್ರೀ ಪಾಂಡುರಂಗ ತಾತನವರ  ಜಾತ್ರಾ ನಿಮಿತ್ಯ   ಪುರಾಣದಲ್ಲಿ ಚಳಗುರ್ಕಿ ಎರ್ರಿ ತಾತನ ತೊಟ್ಟಿಲು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

Spread the love

ಜುಮಲಾಪುರ ಗ್ರಾಮ ದಲ್ಲಿ ನೆಡೆದ ಶ್ರೀ ಪಾಂಡುರಂಗ ತಾತನವರ  ಜಾತ್ರಾ ನಿಮಿತ್ಯ   ಪುರಾಣದಲ್ಲಿ ಚಳಗುರ್ಕಿ ಎರ್ರಿ ತಾತನ ತೊಟ್ಟಿಲು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಗುರು ನಿರುಪಾದಿ ವ ವಡಕಿ ಪಾಂಡುರಂಗ ತಾತನವರ ಜಾತ್ರಾ ನಿಮಿತ್ಯ ವಾಗಿ ಚಳ್ಳಗುರ್ಕಿ ಎರ್ರಿ ತಾತನವರ ಪುರಾಣದ ಸನ್ನಿವೇಶದಲ್ಲಿ ಮಹಾತ್ಮರ ನಾಮಕರಣ ತೊಟ್ಟಿಲು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಸಂಜೆ 7=30 ನಿಮಿಷಕ್ಕೆ. ಪ್ರಾರಂಭ ಗೊಂಡ ಮಹಾ ಪುರಾಣವು ಎರ್ರಿ ತಾತನ ಜೀವನ ಚರಿತ್ರೆ ಅನುಗುಣವಾಗಿ ಸಂಪ್ರದಾಯದಂತೆ  ಮಹಿಳೆಯರು ಗಂಗಾದೇವಿ ಪೂಜೆ ಮಾಡಿ. ತುಂಬಿದ ಬಿಂದಿಗೆ ನೀರು ತಂದು. ನಂತರ ಮಹಿಳೆಯರು ಜೋಗುಳ ಪದ ಹಾಡಿ ಎರ್ರಿ ತಾತನವರ ತೊಟ್ಟಿಲು ನಾಮಕರಣವನ್ನು ಅತ್ಯಂತ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಯಿತು. ನಂಬಿಕೆಯಂತೆ ಸಂತಾನ ಇಲ್ಲದ ಮಹಿಳೆಯರು ಈ ತೊಟ್ಟಿಲು ತೂಗಿ ಜೋಗುಳ ಆಡುವ ಮುಖಾಂತರ ಕಾರ್ಯಕ್ರಮ ಪ್ರಾರಂಬಿಸಲಾಯಿತು. ಹೆಸರಿಡುವ ಕಾರ್ಯವನ್ನು ಶಶಿಧರ್ ಶಾಸ್ತ್ರಿ ನೇರವೆರಿಸಿದರು. ಮಹಾತ್ಮರ ತೊಟ್ಟಿಲು ಕಾರ್ಯಕ್ರಮಕ್ಕೆ ಮಲ್ಲಪ್ಪ ಆಚಾರ ಕೊಪ್ಪಳ ಸಾ ತಾವರಗೇರ ತೊಟ್ಟಿಲು ಸೇವೆ ಮಾಡಿದರು. ಈ ಸಂದರ್ಭದಲ್ಲಿ ಪುರಾಣ ಪ್ರವಚನಕಾರಾದ ಶ್ರೀ ವೇ ಮೂ ಅಮರೇಶ ಶಾಸ್ತ್ರಿಗಳು ಚಿರಂತಿಮಠ ಎಲೆಕೂಡ್ಲಗಿ. ಗವಾಯಿಗಳಾದ ಶ್ರೀ ಪಂಪನಗೌಡ ಹಳೆಕೋಟೆ. ತಬಲವಾದಕರಾಗಿ ಶ್ರೀ ಮೌನೇಶ ಕುಮಾರ ಸಾ ಹಾಲ್ವಿ. ಕ್ಲಾರನೇಟ್ ವಾದಕರಾಗಿ. ದೊಡ್ಡಬಸಪ್ಪ ಭಜಂತ್ರಿ ಸಾ ಜುಮಲಾಪೂರ ಇವರುಗಳು  ಎರ್ರಿ ತಾತನವರ ಜೀವನ ಚರಿತ್ರೆಯನ್ನು ಕಲಾ ಸಂಗಿತದೊಂದಿಗೆ ಪ್ರವಚನ ನಿಡಿದರು. ಈ ಸಂಧರ್ಭದಲ್ಲಿ ಗ್ರಾಮದ  ಹಿರಿಯರು ಹಾಗೂ ಯುವಕರು  ನೂರಾರು ಮಹಿಳೆಯರು ಉಪಸ್ಥಿತರಿದ್ದರು. (ವಿಶೇಷವಾಗಿ ಸತತವಾಗಿ 15 ದಿನಗಳ ಕಾಲ ಪುರಾಣ ನಡೆಯುವ ಸಂದರ್ಭದಲ್ಲಿ ಭಕ್ತಾದಿಗಳಿಗೆ  ಪ್ರತಿ ದಿನ ಒಬ್ಬರಂತೆ ಪ್ರಸಾದ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಪ್ರಸಾದ ಸೇವೆಯನ್ನು ಪಾಂಡಪ್ಪ ಪರಸಪ್ಪ ಚಲವಾದಿ ಸೇವೆ ಸಲ್ಲಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *