ಕೊಡ್ಲಿಪೇಟೆ ಕಂದಾಯ ಇಲಾಖೆಯ ಕಚೇರಿಯಲ್ಲಿನ ಆಧಾರ್ ಕಾರ್ಡ್ ಸೆಂಟರ್ (ಖಾಸಗಿ ಆಧಾರ್ ಕಾರ್ಡ್ ಸೆಂಟರ್ ) ನಲ್ಲಿ ಅತಿ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ..
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿರುವ ( ಖಾಸಗಿ ಯವರಿಗೆ ಸರಕಾರದ ಬಿಲ್ಡಿಂಗ್ ಕೊಟ್ಟು ಆದ ಸೇವೆ ನಡೆಸುತ್ತಿದ್ದಾರೆ) ಆಧಾರ್ ಸೆಂಟರ್ ನಲ್ಲಿ ಸಣ್ಣ ಮಕ್ಕಳಿಗೆ ಹೊಸದಾಗಿ ಆಧಾರ್ ಕಾರ್ಡ್ ತೆಗೆಯುವ ಮಕ್ಕಳಿಗೆ ಉಚಿತವಾಗಿ ಆಧಾರ್ ಕಾರ್ಡ್ ತೆಗೆಯಲು ಸರಕಾರದ ಆದೇಶವಿದ್ದರೂ ಈ ನಾಡ ಕಚೇರಿ ಇರುವ ಖಾಸಗಿ ಆಧಾರ್ ಕಾರ್ಡ್ ಸೆಂಟರ್ ನಲ್ಲಿ 1ಮಗುವಿಗೆ 150 ರೂಪಾಯಿಗಳಷ್ಟು ಹಣ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಗೆ ಮೊಬೈಲ್ ಫೋನ್ ಇಬ್ಬರನ್ನು ಹಾಕಿಸಿ ಕೊಳ್ಳಬೇಕಾದರೆ ಇದಕ್ಕೂ ಸಹ 150 ರುಪಾಯಿಗಳನ್ನು ತೆಗೆದು ಕೊಳ್ಳುತ್ತಿದ್ದಾರೆ . ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಯಾವುದೇ ಸಮಸ್ಯೆ ಇದ್ದರೂ ಪ್ರತಿಯೊಬ್ಬರಿಗೂ 150 ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ . ಇದರ ಬಗ್ಗೆ ಕೊಡ್ಲಿಪೇಟೆ ಹೋಬಳಿಯ ಸುತ್ತಮುತ್ತಲಿನ ಜನರು ಕರವೇ ಕಾರ್ಯಕರ್ತರಿಗೆ ಸುಮಾರು ಒಂದು ತಿಂಗಳಿನಿಂದಲೂ ಈ ಆಧಾರ್ ಸೆಂಟರ್ ನಲ್ಲಿ ಅತಿ ಹೆಚ್ಚು ಹಣ ತೆಗೆದುಕೊಳ್ಳುತ್ತಿರುವ ಬಗ್ಗೆ ಕರವೇ ಕಾರ್ಯಕರ್ತರಿಗೆ ದೂರುಗಳ ಮೇಲೆ ದೂರು ಬರುತ್ತಿತ್ತು .. ಹಾಗಾಗಿ ನಿನ್ನೆ ದಿನ ಕೊಡ್ಲಿಪೇಟೆಯ ಶೇಖರ್ ಎಂಬುವವರು ತನ್ನ 2ಮಕ್ಕಳನ್ನು 5ವರ್ಷದ ಒಳಗಿನ ಮಕ್ಕಳನ್ನು ಕೊಡ್ಲಿಪೇಟೆ ನಾಡ ಕಚೇರಿಯಲ್ಲಿರುವ (ಖಾಸಗಿ ಯವರ ಆಧಾರ್ ) ಕರೆದುಕೊಂಡು ಹೋಗಿರುತ್ತಾರೆ ಒಂದೊಂದು ಮಗುವೂ ಗೆ 150 ಹಾಗೆ 2ಮಕ್ಕಳಿಗೆ 300 ತೆಗೆದುಕೊಂಡಿರುತ್ತಾರೆ ಇದರ ಬಗ್ಗೆ ಶೇಖರ್ ಅವರು ಕರವೇ ಕಾರ್ಯಕರ್ತರಿಗೆ ದೂರು ನೀಡುತ್ತಾರೆ …ಹಾಗಾಗಿ ಇಂದು ಕರವೇ ಕಾರ್ಯಕರ್ತರು ಆಧಾರ್ ಕಾರ್ಡ್ ಗೆ ಭೇಟಿ ನೀಡಿ ನಿಜಾಂಶ ತಿಳಿಯಲು ಆಧಾರ್ ಕಾರ್ಡ್ ತೆಗೆಯುವ ಸೆಂಟರಿಗೆ ಹತ್ತಿರ ನಿಂತು ನೋಡಿದಾಗ ಅವರು 1ಮಗುವಿನ ಆಧಾರ್ ಕಾರ್ಡ್ ತೆಗೆಯುತ್ತಿದ್ದರು ಅವರು ಎಷ್ಟು ಹಣ ಕೊಡುತ್ತಾರೆಂದು ನೋಡುತ್ತಿದ್ದಾಗ ಇವರ ಹತ್ತಿರ 150 ತೆಗೆದುಕೊಳ್ಳುತ್ತಿದ್ದರು . ಆಗಲೇ ಕರವೇ ಕಾರ್ಯಕರ್ತರು ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಆಧಾರ್ ಕಾರ್ಡ್ ತೆಗೆಯುತ್ತಿರುವ ಕಂಪ್ಯೂಟರ್ ನಲ್ಲಿರುವ ಹರೀಶ್ ಎಂಬುವವರು ಸರಿಯಾದ ಉತ್ತರ ಕೊಡದೆ ಇದ್ದರು .. ಇವರು ಅತಿ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿತ್ತು . ಮತ್ತು ಆಧಾರ್ ಕಾರ್ಡ್ ತೆಗೆದ ಮೇಲೆ 1ರಸೀದಿ ಕೊಡುತ್ತಾರೆ ಆ ರಸೀದಿ ಯಲ್ಲೂ ಸಹ ಹಣವನ್ನು ತೆಗೆದುಕೊಳ್ಳಲು ಇಲ್ಲ ಎಂಬುದು ಬಂದಿರುತ್ತದೆ ಆದರೂ ಸಹ ಇವರು ಹಣ ತೆಗೆದುಕೊಳ್ಳುತ್ತಿದ್ದಾರೆ . ಇದರ ಬಗ್ಗೆ ಕರವೇ ಕಾರ್ಯಕರ್ತರು ಕೊಡ್ಲಿಪೇಟೆ ನಾಡ ಕಚೇರಿಯಲ್ಲಿರುವ ಕಂದಾಯ ಪರಿವೀಕ್ಷಕರಾದ ಮನು ಕುಮಾರ್ ಅವರನ್ನು ಕರೆಸಿ ಇಷ್ಟೊಂದು ಹಣ ಹೆಚ್ಚು ತೆಗೆದುಕೊಳ್ಳುತ್ತಿದ್ದರೆ ಯಾಕೆ ಎಂದು ಕೇಳಿದಾಗ ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ ಮಡಿಕೇರಿ ಆಧಾರ್ ಕೇಂದ್ರದಲ್ಲಿರುವ ಮುಖ್ಯಾಧಿಕಾರಿಯವರನ್ನು ಫೋನ್ ನಲ್ಲಿ ಸಂಪರ್ಕ ಮಾಡುತ್ತೇವೆ ಎಂದು ತಿಳಿಸಿದಾಗ ಕರವೇ ಕಾರ್ಯಕರ್ತರು ಸಂಪರ್ಕ ಮಾಡಿ ಎಂದು ತಿಳಿಸಿದೆವು . ಕಂದಾಯ ಪರಿವೀಕ್ಷಕರು ಮಡಿಕೇರಿ ಮುಖ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಆಗ ನಮಗೆ ತಿಳಿದುಬಂದ ಮಾಹಿತಿ . ಸಣ್ಣ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ಯಾವುದೇ ಹಣ ತೆಗೆದುಕೊಳ್ಳುವಂತಿಲ್ಲ . ಹಾಗೂ ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಎಂಟರ್ ಮಾಡಬೇಕಾದರೆ 40 ರೂ ಗಳಷ್ಟು ತೆಗೆದುಕೊಳ್ಳಬೇಕು ಎಂದು ತಿಳಿಸಿರುತ್ತಾರೆ . . ಹಾಗಾಗಿ ಕರವೇ ಕಾರ್ಯಕರ್ತರು ಆಧಾರ್ ಕಾರ್ಡ್ ಸೆಂಟರ್ ಮುಂದೆ ಯಾವ ಆಧಾರ್ ಕಾರ್ಡಿಗೆ ಎಷ್ಟು ಹಣ ತೆಗೆದುಕೊಳ್ಳಬೇಕೆಂದು ನಾಮ ಫಲಕ ಅಳವಡಿಸಬೇಕೆಂದು ತಿಳಿಸಿರುತ್ತೇವೆ .. ಕೊಡ್ಲಿಪೇಟೆಯಲ್ಲಿರುವ ನಾಡ ಕಚೇರಿಯಲ್ಲಿರುವ ಈ ಆಧಾರ್ ಕಾರ್ಡ್ ಸೆಂಟರ್ ನ ಕಂಪ್ಯೂಟರ್ ನಲ್ಲಿ ಇರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರು ಖುದ್ದಾಗಿ ಹೋಗಿ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಅತಿ ಹೆಚ್ಚು ಹಣ ಪಡಿಸಿರುವ ಬಗ್ಗೆ ಖುದ್ದಾಗಿ ಹೋಗಿ ಮನವಿ ಸಲ್ಲಿಸಲಾಗುವುದು . ಇನ್ನು ಮುಂದೆ ಸೋಮವಾರಪೇಟೆ ತಾಲ್ಲೂಕಿನ ಮತ್ತು ಇನ್ನಿತರ ಹೋಬಳಿಗಳ ಮತ್ತು ಕೊಡ್ಲಿಪೇಟೆ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಹಾಗೂ ಇನ್ನಿತರ ಯಾವುದೇ ಊರಿನ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಅತಿ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಗೆ ತಿಳಿಸಬೇಕಾಗಿ ಮನವಿ .. ಈ ಫೋನ್ ನಂಬರ್ ಗೆ ಸಂಪರ್ಕಿಸಿ ..9686095831 ಮತ್ತು 944925531. ಈ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಕರವೇ ಶನಿವಾರಸಂತೆ ಹೋಬಳಿ ಘಟಕದ ಉಪಾಧ್ಯಕ್ಷರಾದ ರಫೀಕ್ ಹಾಗೂ ಇನ್ನಿತರ ಕರವೇ ಕಾರ್ಯಕರ್ತರು ಭಾಗವಹಿಸಿದರು.
ವರದಿ – ಸಂಪಾದಕೀಯ