ತಾವರಗೇರಾ ಪಟ್ಟಣದ ನಾಡ ಕಚೇರಿ ಹಾಗೂ ಆರ್.ಎಸ್.ಕೆ & ಪಶು ಸಂಗೋಪನೆ ಇಲಾಖೆಗೆ ಹೋಗುವ ರಸ್ತೆ ಕೆಸರುಗದ್ದಿಯಾದರು, ಕಣ್ಣು ಮುಚ್ಚಿ ಕುಳಿತ ಸ್ಥಳಿಯ ಅಧಿಕಾರಿಗಳು…..
ಮುಂಗಾರು ಮಳೆಯ ಹೊಡೆತಕ್ಕೆ ಬೆಸಿಗೆ ತತ್ತರಿಸಿ ಹಸಿರು ತಾಣವಾಗಿದ್ದಕ್ಕೆ ಒಂದಡೆ ರೈತರಿಗೆ ಸಂತೋಷದ ಕ್ಷಣವಾಗಿದೆ. ಮತ್ತೊಂದಡೆ ತಾವರಗೇರಾ ಪಟ್ಟಣವು ನಾನಾ ರೀತಿಯಿಂದ ಅಭಿವೃದ್ದಿ ಸಾಗುತ್ತ ಬಂದಿರುವುದು ವಿಶೇಷವಾಗಿದೆ. ಈ ಹಿಂದೆ ನಾನಾ ಜಿಲ್ಲೆಯಲ್ಲಿ ಮುಂಗಾರು ಮಳೆ ಬಂದಿದ್ದರಿಂದ ಸಾರ್ವಜನಿಕರ ರಸ್ತೆ/ಗಲ್ಲಿಗಳು ಕೆಸರು ಗದ್ದಿಯಾಗಿವೆ.ಆದರೆ ಇಲ್ಲೊಂದು ವಿಶೇಷ ಅನ್ನುವುದುಕಿಂತ ದುರದೃಷ್ಟಕರ ಅನ್ನುವುದೆ ವಿಶೇಷವಾಗಿದೆ. ಅಂದರೆ ತಾವರಗೇರಾ ಪಟ್ಟಣದ ಹಾಗೂ ತಾವರಗೇರಾ ಹೋಬಳಿಯ ಜನತೆ ಈ ಪಟ್ಟಣಕ್ಕೆ ಆಗಮಿಸಿದರೆ ಆ ಜನತೆಯು ಪಟ್ಟಣದ ನಾಡ ಕಚೇರಿ ಇಲಾಖೆಗೂ / ರೈತ ಸಂಪರ್ಕ ಕೇಂದ್ರಕ್ಕೂ ಜೊತೆಗೆ ಪಶು ಸಂಗೋಪನೆ ಇಲಾಖೆಗೂ ಹೆಚ್ಚಿನ ಜನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅದರಲ್ಲೂ ಈ ಮುಂಗಾರು ಮಳೆಗೆ ರೈತರು ಬಿತ್ತನೆಯಲ್ಲಿ ಮುಂದಾಗಿದ್ದು, ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ, ಜನ ಜಂಗುಳಿಯಲ್ಲಿ ಜನರು ಬರುತ್ತಾದ್ದಾರೆ. ಈ ಜನರ ಆಗಮನ ನೋಡುತ್ತಿದ್ದರು ಸ್ಥಳಿಕ ಮಟ್ಟದ ಅಧಿಕಾರಿಗಳು ಕ್ಯಾರೆ ಎನ್ನದೆ ಅದೇ ಮಾರ್ಗದಲ್ಲಿಯೆ ಸಾಗುತ್ತಿದ್ದಾರೆ. ರೈತರು ಸಹ ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಖರೀಧಿ ಮಾಡಲು ಕೆಸರು ಗದ್ದಿಯಲ್ಲಿಯೆ ಬೆಳಗ್ಗೆಯಿಂದ ಬಂದು ಸರಧಿ ಸಾಲಿನಲ್ಲಿ ನಿಂತು, ಅದೇ ಮಾರ್ಗದಲ್ಲಿ ಪುನಃಹ ಬೀಜ ತೆಗೆದುಕೊಂಡು ಹೋಗಬೇಕು. ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರು ನಾಡ ಕಚೇರಿಗೆ ಬಂದು ಜಾತಿ/ಆಧಾಯ, ಸಂಧ್ಯ ಸುರಕ್ಷ ಇತರೆ ಸೇವೆಗಳಿಗೆ ಆಗಮಿಸುವ ಸಾರ್ವಜನಿಕರಿಗೂ ಇದೇ ರಸ್ತೆಯಿಂದ ಸಾಗಬೇಕಾಗಿರುವುದರಿಂದ ಸಾರ್ವಜನಿಕರು ಇಲ್ಲಿರುವ ಸಂಬಂದಪಟ್ಟ ಅಧಿಕಾರಿ ವರ್ಗಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗನೆ ಸ್ಥಳಿಕ ಮಟ್ಟದ ಅಧಿಕಾರಿಗಳು ಈ ಸ್ಥಳಕ್ಕೆ ಮರುಮು ಹಾಕಿಸಿ ಸದ್ಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ಇಲ್ಲಿ ಬರುವಂತ ಜನರಿಗೆ ಆರೋಗ್ಯದ ಬಗ್ಗೆ ಅನುಮಾನ ಸೃಷ್ಠಿಯಾಗುತ್ತಿದೆ, ಕಾರಣ ಈ ಕಲುಸೀತ ನೀರಿನಲ್ಲಿ ಜನರು ಬಂದು/ಹೋಗುವುದರಿಂದ ಜನರಲ್ಲಿ ಅಂತಕ ಸೃಷ್ಠಿಯಾಗುತ್ತಿದೆ. ಎಂದು ಊರಿನ ನಾಗರಿಕರು ಹಾಗೂ ಯಮನೂರಪ್ಪ ಬಿಳೆಗುಡ್ಡ ಜೊತೆಗೆ ರಾಜಾನಾಯಕರವರು ಮತ್ತು ರೈತ ಸಂಘಟನೆಯ ಮುಖಂಡರಾದ ನಾಗರಾಜ ಇಟಗಿ, ನಾರಾಯಣಪ್ಪ ಪೂಜಾರ, ಅಮರೇಶ ರಗಟಿಯವರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ವರದಿ – ಉಪ್ಪಳೇಶ ವಿಠಲಾಪುರ.