ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚಣಿಯಲ್ಲಿದ್ದಾರೆ ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ..
ಶಿವಮೊಗ್ಗ: ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚಣಿಯಲ್ಲಿದ್ದಾರೆ ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಗೆ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಅವರು ತಿಳಿಸಿದರು. ಅವರು ಶನಿವಾರ, ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೊಳಲೂರು ಮಹಾಶಕ್ತಿ ಕ್ಷೇತ್ರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಕೇಂದ್ರ ಸರಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಅದರಿಂದ ಭ್ರಷ್ಟಾಚಾರ ಮುಕ್ತ ಸರಕಾರ ನಮ್ಮಲಿದೆ ಎಂದರು. ಮಹಿಳೆಯರು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಅದಕ್ಕೆ ಮಹಿಳೆಯರು ಸಂಘಟಿತರಾಗಬೇಕು, ಮಹಿಳೆಯರು ಇಂದು ಮನೆಯಿಂದ ಹೊರ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅದಕ್ಕೆ ಭಾರತೀಯ ಜನತಾ ಪಾರ್ಟಿ ಅವಕಾಶ ಮಾಡಿಕೊಡುತ್ತದೆ ಎಂದರು. ಈ ಸಂದರ್ಭದಲ್ಲಿ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಶ್ರೀ ರತ್ನಾಕರ ಶಣೈ, ಮ್ಯಾಮ್ಕೋಸ್ ನಿರ್ದೇಶಕರು ಮತ್ತು ಮಾಜಿ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಶ್ರೀ ವಿರೂಪಾಕ್ಷಪ್ಪ ಜಿ.ಈ, ಶಿವಮೊಗ್ಗ ತಾಲ್ಲೂಕು ಉಪಾಧ್ಯಕ್ಷರಾದ ಶ್ರೀ ರುದ್ರಪ್ಪ, ಶಿವಮೊಗ್ಗ ತಾಲ್ಲೂಕು ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮೇಘರಾಜ್, ಸಂಚಾಲಕಿ ಶ್ರೀಮತಿ ಭಾಗ್ಯ ಜಗದೀಶ್, ಹೊಳಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಸುರೇಶ್, ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವೀಣಾ ನಾಗರಾಜ್, ಪ್ರಧಾನ ಮಹಿಳಾ ಕಾರ್ಯದರ್ಶಿ ಶ್ರೀಮತಿ ಗೀತಾ ವೇದಮೂರ್ತಿ, ಶ್ರೀಮತಿ ಮನಜಾಕ್ಷಿ ಸುರೇಶ್ ಮತ್ತಿತರರು ಹಾಜರಿದ್ದರು. #ಪವಿತ್ರರಾಮಯ್ಯ ಅಧ್ಯಕ್ಷರು #ಭದ್ರಾಅಚ್ಚು ಕಟ್ಟುಪ್ರದೇಶಾಭಿವೃದ್ಧಿ_ಪ್ರಾಧಿಕಾರ.
ವರದಿ – ಮಹೇಶ ಶರ್ಮಾ