ಮಕ್ಕಳು ಬಲಿಷ್ಠರಾಗಲು ಅಂಗನವಾಡಿಗಳು ಉತ್ತಮ ಪೌಷ್ಟಿಕ ಆಹಾರ ಕೊಡುವ ಕೇಂದ್ರಗಳಾಗಲಿ -ಹಾಲಪ್ಪ ಆಚರ್….
ಕುಕನೂರು :-ಅಂಗನವಾಡಿಗಳು ಪ್ರತಿ ಮಕ್ಕಳನ್ನು ಶೈಕ್ಷಣಿಕ ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢರನ್ನಾಗಿ ತಯಾರಿಸುವ ಕಾರ್ಖಾನೆಗಳ ಆಗಲಿ ಎಂದು ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್ ಅವರು ತಿಳಿಸಿದರು. ಇಂದು ಶನಿವಾರ ಕುಕನೂರು ತಾಲೂಕಿನ ಬನ್ನಿಕೊಪ್ಪ, ಕುದುರೆಮೋತಿ, ಕುಕನೂರು ಪಟ್ಟಣದಲ್ಲಿ ಒಂದೊಂದು ಅಂಗನವಾಡಿ ನೂತನ ಕಟ್ಟಡದ ಉದ್ಘಾಟನೆ ಹಾಗೂ ಕುದುರೆಮೋತಿ ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಕುಕುನೂರು ಪಟ್ಟಣದ 20ನೇ ಅಂಗನವಾಡಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ಅಂಗನವಾಡಿ ಯು ಮಕ್ಕಳನ್ನು ಸದೃಢವಾಗಿ ನಿರ್ಮಿಸುವ ಕಾರ್ಖಾನೆಗಳ ಆಗಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆಲಹೊತ್ತು ಅಂಗನವಾಡಿ ಪುಟ್ಟ ಮಕ್ಕಳೊಂದಿಗೆ ತಾವು ಸಹ ಮಕ್ಕಳಾಗಿ ಕೆಲಹೊತ್ತು ಸಮಾಲೋಚನೆ ನಡೆಸಿ ಮಕ್ಕಳಿಗೆ ತಮ್ಮ ಕೈಯಾರೆ ಹಾಲು ವಿತರಣೆ ಮಾಡಿ ಅಂಗನವಾಡಿಯಲ್ಲಿ ಮಕ್ಕಳಿಗಾಗಿ ಇರುವ ಸೌಕರ್ಯಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತರಿಂದ ಮಾಹಿತಿ ಪಡೆದು ಮಕ್ಕಳಿಗೆ ಪ್ರತಿದಿನ ಉತ್ತಮ ಗುಣಮಟ್ಟದ ಪೋಷಕಾಂಶಯುಕ್ತ ಆಹಾರವನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.ಸುಡುವ ಬಿಸಿಲಿನ ನಡುವೆಯೂ ಸಹ ಸಚಿವರ ಕಾರ್ಯಕ್ರಮವೆಂದು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಮುಖಂಡರು ಸಾರ್ವಜನಿಕರು ಹಾಗೂ ಮಾಧ್ಯಮದವರಿಗೂ ಯಾವುದೇ ತರಹದ ಯಾವುದೇ ತರಹದ ನೆರಳು ಹಾಗೂ ಆಸನದ ವ್ಯವಸ್ಥೆಯನ್ನು ಸಹ ಮಾಡದ ಕಾರ್ಯಕ್ರಮ ಆಯೋಜಕರ ವರ್ತನೆಗೆ ನೆರೆದಿದ್ದವರೆಲ್ಲ ಹಿಡಿಶಾಪ ಹಾಕಿದ್ದು ಆಯೋಜಕರ ನಿರ್ಲಕ್ಷವನ್ನು ಎತ್ತಿ ತೋರಿಸುತ್ತಿತ್ತು. ಕುಕನೂರು ತಹಸೀಲ್ದಾರರಾದ ಚಿದಾನಂದ ಗುರುಸ್ವಾಮಿ, ಶಿಶು ಅಭಿವೃದ್ಧಿ ಮತ್ತು ಯೋಜನಾ ಅಧಿಕಾರಿಯಾದ ಮಂಜುನಾಥ್ ಹೊಸಮನಿ, ಪ್ರಮುಖರಾದ ಕಳಕಪ್ಪ ಕಂಬಳಿ, ಶಂಬಣ್ಣ ಜೋಳದ, ಬಸನಗೌಡ ತೊಂಡಿಹಾಳ, ಮಹಾಂತೇಶ ಹೂಗಾರ್, ಸಿದ್ದಯ್ಯ ಉಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಲಕ್ಷ್ಮಣ ಕಾಳೆ, ಬಾಲರಾಜ್ ಗಾಳಿ. ಇನ್ನಿತರರು ಪಾಲ್ಗೊಂಡಿದ್ದರು.
ವರದಿ – ಹುಸೇನ್ ಬಾಷಾ ಮೋತೆಖಾನ್