ಕುಪ್ಪನಕೇರಿ:”ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ” ತಹಶಿಲ್ದಾರರಿಗೆ ದೂರು,,,,
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕುಪ್ಪನಕೇರಿ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ ವಾಗಿದೆ ಎಂದು ಕೆಲ ಗ್ರಾಮಸ್ಥರು ತಹಶಿಲ್ದಾರರಿಗೆ ದೂರಿದ್ದಾರೆ. ಪಡಿತರ ಚೀಟಿದಾರ ಪಲಾನುವಿಗಳಿಗೆ ನ್ಯಾಯ ಯುತವಾಗಿ ನೀಡಬೇಕಿದ್ದ ರಾಗಿಯನ್ನು, ಕೊಡದೇ ವಂಚಿಸಲಾಗಿದೆ ತಪ್ಪಿತಸ್ಥ ನ್ಯಾಯ ಬೆಲೆ ಅಂಗಡಿಯ ಮಾಲೀಕರ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕೆಂದು. ಕುಪ್ಪಿನಕೇರಿ ಗ್ರಾಮದ ಕೆಲ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ, ಅವರು ತಮ್ಮ ದೂರನ್ನು ತಹಶಿಲ್ದಾರರಾದ ಟಿ.ಜಗದೀಶರವರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದೂರುದಾರರು ಮಾತನಾಡಿ, ಮೇ ತಿಂಗಳ ರಾಗಿಯನ್ನು ಯಾರಿಗೂ ವಿತರಿಸದೇ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲಾತುಗಳು ವೀಡಿಯೋ ಹಾಗೂ ಮಾಲೀಕರೇ ತಮ್ಮ ತಪ್ಪನ್ನು ಒಪ್ಪಿಕೊಂಡಿರುವ, ದೂರವಾಣಿಯ ಮಾತುಕತೆಯ ಆಡಿಯೋ ತಾಲೂಕಿನಾದ್ಯಂತ ವೈರಲ್ ಆಗಿದೆ. ಕಾಳಸಂತೆಯಲ್ಲಿ ಮಾರಾಟ ಮಾಡುವ ವೀಡಿಯೋ ಫೋಟೋಗಳು, ಅಗತ್ಯ ಸಾಕ್ಷ್ಯಧಾರಗಳು ಆಡಿಯೋಗಳಿವೆ. ಕಾರಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗಳು ಹಾಗೂ ತಹಶಿಲ್ದಾರರು,ಆಹಾರ ಇಲಾಖಾಧಿಕಾರಿಗಳು. ಖುದ್ದು ಪರಿಶೀಲಿಸಿ ಗ್ರಾಮಸ್ಥರ ಹಾಗೂ ಪಡಿತರ ಚೀಟಿ ಪಲಾನುಭವಿಗಳ ದೂರುಗಳನ್ನು ಆಲಿಸಬೇಕಿದೆ. ತಪ್ಪಿತಸ್ತ ನ್ಯಾಯಬೆಲೆ ಅಂಗಡಿಯಲ್ಲಾಗಿರುವ ಕಾಳಸಂತೆ ಮಾರಾಟದ ಕುರಿತು ತನಿಖೆ ಮಾಡಬೇಕಿದೆ, ತಪ್ಪಿತಸ್ಥ ನ್ಯಾಯ ಬೆಲೆ ಅಂಗಡಿ ಮಾಲೀಕರ ಪರವಾಗನಗಿ ರದ್ದು ಗೊಳಿಸಿ ಕ್ರಮ ಜರುಗಿಸಬೇಕೆಂದು ದೂರು ದಾರರು ಒತ್ತಾಯಸಿದ್ದಾರೆ. ಈ ಸಂದರ್ಭದಲ್ಲಿ ಹರ್ಷವರ್ಧನ, ಆನಂದ,ಕಿರಣ, ಗುರುಬಸವರಾಜ,ಸಿದ್ದೇಶ,ವೀರಣ್ಣ ಸೇರಿದಂತೆ ಮತ್ತಿತರರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008938428