ಕರೋನ ರೋಗದ ವಿರುದ್ಧ ಧೈರ್ಯದಿಂದ ಗೆಲ್ಲಬೇಕಿದೆ ಶ್ರೀ ಮಾನ್ಯ ಶಾಸಕ ಅಮರೆಗೌಡ ಬಯ್ಯಾಪುರ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಿಲಾರಹಟ್ಟಿ ಗ್ರಾಮ ಪಂಚಾಯಿತಿ ಮುಂಬಾಗ ಆವರಣದಲ್ಲಿ ಇಂದು ಕೋರೋನಾ ರೋಗದ ವಿರುದ್ಧ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಅಮರೆಗೌಡ ಪಾಟೀಲ ಬಯ್ಯಾಪುರ ಅವರು ಈ ಕೋರೋನಾ ಮಹಾಮಾರಿ ರೋಗವು ಅತ್ಯಂತ ಅತೀ ವೇಗದಲ್ಲಿ ಹರಡುವ ದರಿಂದ ಜನರು ಹೆಚ್ಚೆತ್ತು ಕೊಂಡು ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು ಯಾರು ಈ ರೋಗ ಬಂದಿದೆ ಎಂದು ಆತಂಕ ಪಟ್ಟು ದೃತಿಗೆಡದೆ ಧೈರ್ಯದಿಂದ ಆರೋಗ್ಯ ಇಲಾಖೆಯ ನಿಯದಂತೆ ಎಲ್ಲರೂ ಪಾಲನೆ ಮಾಡಬೇಕು. ಮೊದಲು ಜೀವ ತದನಂತರ ಜೀವನ ಅನ್ನುವುದು ಎಲ್ಲರೂ ಅರಿತು ಕೊಳ್ಳಬೇಕು ಎಂದರು ತದನಂತರ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶ್ರೀ ಮಾನ್ಯ ವೆಂಕಟೇಶ್ ವಂದಲ್, ಅವರು ಮಾತನಾಡಿ ಈ ರೋಗವು ಭಯಾನಕ ವಾಗಿ ಈ ರೋಗವು. ಅತಿ ಹೆಚ್ಚು ಯುವಕರನ್ನೆ ಟಾರ್ಗೆಟ್ ಮಾಡುತ್ತಿರುವದೆ ಹೆಚ್ಚು ಹಾಗಾಗಿ ಯುವಕರು ಎಲ್ಲಿ ಬೇಕೆಂದರಲ್ಲಿ ತಿರುಗಿ ಆಡದೆ ಅತಿ ಸೂಕ್ಷ್ಮವಾಗಿ ಜಾಗೃತರಾಗಿ ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವನ ನೆಡಸಬೇಕಾಗಿದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿ ಒಂದು ಸಲ ಯಾಮಾರಿದರೆ ಜೀವನ ಇಲ್ಲದಂತೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಎಂದರು ಈ ಸಂಧರ್ಭದಲ್ಲಿ ಜಿ ಪಂ ಸದಸ್ಯರಾದ ಹನುಮನಗೌಡ ಪೊ ಪಾಟೀಲ, ಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮಾನ್ಯ ಚಂದ್ರಶೇಖರ್, ಗ್ರಾಮ ಪಂ ಅಧ್ಯಕ್ಷರಾದ ಶ್ರೀ ಮತಿ ಶರಣಮ್ಮ, ಶ್ರೀಕಾಂತ್ ರಾಠೋಡ, ಉಪಾಧ್ಯಕ್ಷ ರಾದ ಶ್ರಿ ರಾಘವೇಂದ್ರ ತೆಮ್ಮಿನಾಳ, ಹಾಗೂ ಸರ್ವ ಸದಸ್ಯರು ಗ್ರಾ ಪಂಚಾಯಿತಿ ಕಾರ್ಯದರ್ಶಿ ಗಳಾದ ಶ್ರೀ ಗುರಪ್ಪ ನಾಯಕ, ಹಾಗೂ ಪಂಚಾಯತ್ ಸಿಬ್ಬಂದಿಗಳು ಜೋತೆಗೆ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು ಇದ್ದರು ಊರಿನ ಗ್ರಾಮಸ್ಥರು ಇದ್ದರು. ಪಂಚಾಯಿತಿ ಅಧಿಕಾರಿಗಳು ಕರೋನ ರೋಗದ ಜಾಗೃತಿ ಗಾಗಿ ಹಾಕಿರುವ ವೇದಿಕೆ ಅಚ್ಚು ಕಟ್ಟಾಗಿ ಎಲ್ಲ ಪಂಚಾಯ್ತಿ ಹಿಂತಿರುಗಿ ನೋಡುವಂತಿತ್ತು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ