ಕರ್ನಾಟಕ ರೈತ ಸಂಘ (AiKKS) ಹಾಗು ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ…..
ಕರ್ನಾಟಕ ರೈತ ಸಂಘ (AiKKS) ಹಾಗು ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳ ಹೋರಾಟಕ್ಕೆ ತಾತ್ಕಾಲಿಕ ಜಯವಾಗಿದೆ. ಕಳೆದ ಮೂರು ದಿನಗಳಿಂದ ನಡೆದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಿನ್ನೆ ರಾತ್ರಿ 10 ಗಂಟೆ ಗೆ ತಾತ್ಕಾಲಿಕ ವಾಗಿ ವಾಪಾಸ್ ಪಡೆಯಲಾಯಿತು. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ (ಪ್ರಧಾನ ಕಾರ್ಯದರ್ಶಿ ಗಳು ವಾಣಿಜ್ಯ ಕೈಗಾರಿಕೆ ಇಲಾಖೆ ಬೆಂಗಳೂರು ಇವರಿಗೆ) ಬರೆದ ಪತ್ರದ ಪ್ರತಿಯನ್ನು ಕೈಗಾರಿಕಾ ಮತ್ತು ವಾಣಿಜ್ಯ ಜೆಂಟ ನಿರ್ದೆಶಕ ರಾದ ಪ್ರಶಾಂತ್ ಇವರು ಧರಣಿ ಸ್ಥಳಕ್ಕೆ ಬಂದು ತಲುಪಿಸಿದರು. ನಗರ ಪೋಲೀಸ್ ಇನ್ಸ್ಪೆಕ್ಟರ್ ಮಾರುತಿ ಬುಳ್ಳಾರಿ ಇತರೆ ಅಧಿಕಾರಿಗಳು ರಾತ್ರಿ 10 ವರಿಗೆ ಧರಣಿ ಸ್ಥಳದಲ್ಲಿದ್ದರು.ಕೈಗಾರಿಕೆಗಾಗಿ ಖರೀದಿಸಿದ ಭೂಮಿಯನ್ನು ರೈತರಿಗೆ ವಾಪಸ್ ಕೊಡಲು ಪತ್ರದಲ್ಲಿ ತಿಳಿಸಿದ್ದಾರೆ.ಭಾರತ ಮೂಲದ ಕಂಪನಿ ನಿರ್ದೆಶಕರಲ್ಲಿ ಒಬ್ಬರಾದ ಶ್ರೀ ವ್ಹಿ.ಪಿ.ಯಾಕೂಬ್ ಮುಖಾಂತರ 1.09.50.10.000/. ರೂ. ಗಳಿಗೆ ಖರೀದಿಸಿದ 673.13 ಎಕರೆ ಭೂಮಿಯಲ್ಲಿ ಕೈಗಾರಿಕೆ ವಿಸ್ತರಣೆ ಮಾಡುವ ತೀರ್ಮಾನವನ್ನು ಕಂಪನಿ ಕೈ ಬಿಟ್ಟಿದ್ದರಿಂದ ಈ ಭೂಮಿ ರೈತರಿಗೆ ಬಿಡಲು ಯಾವುದೇ ಅಡ್ಡಿ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಭೂಮಿ ಖರೀದಿ ವ್ಯವಹಾರದಲ್ಲಿ ನಡೆದ ವಂಚನೆ ಕುರಿತು ನ್ಯಾಯಾಂಗ ತನಿಖೆಗೊಪ್ಪಿಸಲು ತಿಳಿಸಿದ್ದಾರೆ. 2008 ರಲ್ಲಿ ಕೆಐಎಡಿಬಿ ಮೂಲಕ ಸ್ವಾಧೀನ ಪಡಿಸಿಕೊಂಡ 350 ಎಕರೆ ಭೂಮಿಯ 71 ರೈತ ಕುಟುಂಬಗಳ ಪೈಕಿ 41 ಕುಟುಂಬಗಳಿಗೆ ಇದುವರಿಗೆ ಉದ್ಯೋಗ ದೊರೆತ್ತಿರುವುದಿಲ್ಲ. (ಕಾರ್ಖಾನೆ ನಿರ್ಮಾಣ ಗೊಂಡ ಭೂಮಿ) ಈ 41 ಕುಟುಂಬಗಳಿಗೆ ತಕ್ಷಣ ಕೆಲಸ ಕೊಡಬೇಕು ಮತ್ತು ಅವರು ಅರ್ಜಿಗಳನ್ನು ಸಲ್ಲಿಸಿದ ದಿನಗಳಿಂದ ವೇತನ ಲೆಕ್ಕ ಹಾಕಿ ಕೊಡಬೇಕು.ಕೆಲವರಿಗೆ 4 ವರ್ಷ ಇನ್ನು ಕೆಲವರಿಗೆ 6,8 ವರ್ಷದ ವೇತನ ಕೊಡಲು ಕಂಪನಿಗೆ ಸೂಚನೆ ಕೊಟ್ಟಿದ್ದಾರೆ. ಕುಣೆಕೇರಿ,ಲಾಚನಕೇರಿ, ಚಿಕ್ಕಬಗನಾಳ, ಕುಣಿಕೇರಿ ತಾಂಡದ ರೈತರು ಜಿಲ್ಲಾಧಿಕಾರಿಗೆ ಧನ್ಯವಾದಗಳನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು. ಇನ್ನು ಕೆಲವರು ಹೋರಾಟಕ್ಕೆ ಜಯವಾಗಿದೆ ಎಂದು ಘೋಷಣೆ ಕೂಗಿದರು. ಮೂರು ದಿನಗಳ ಧರಣಿಯಲ್ಲಿ ಕರ್ನಾಟಕ ರೈತ ಸಂಘ (AIKKS) ದ ರಾಜ್ಯಾಧ್ಯಕ್ಷರಾದ, *ಡಿ.ಹೆಚ್.ಪೂಜಾರ, ರೈತ ಸಂಘದ ಶರಣಪ್ಪ ದೊಡ್ಡಮನಿ, ಖಾದರ ಹುಸೇನ್ ಕಾರಟಗಿ, ಶ್ರೀ ಮತಿ ಸರಳ ಕಾವೇರಿ. ವಿಜಯ ನಗರ ರೈತ ಸಂಘದ ರಾಜ್ಯ ಕಾರ್ಯದರ್ಶಿ,ಅಲ್ಲಮಪ್ರಭು ಬೆಟ್ಟದೂರು, ಬಿ.ಎನ್.ಯರದಿಹಾಳ ಬಸವರಾಜ ಶೀಲವಂತರ, ಈಶಪ್ಪ ಕುಣಿಕೇರಿ, ಬಸವರಾಜ ಕುಂಬಾರ, ಸಂಜೀವ್ ಗೌಡ, ಮಂಜುನಾಥ ಗಡಗಿ, ಮಂಜುನಾಥ ಕುಂಬಾರ, ಬಸವರಾಜ ನರೆಗಲ್ಲ, ಲಿಂಗಯ್ಯ ಶಶಿಮಠ, ಪಂಪಯ್ಯ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಲ್ಲೇಶ್ ಗೌಡ ಜಿಲ್ಲಾ ಧ್ಯಕ್ಷರು KRS-AIKKS.
ವರದಿ – ಸಂಪಾದಕೀಯ