ಗಡಿನಾಡ ಶಿರೋಮಣಿ ಪ್ರಶಸ್ತಿಗೆ ಆಯ್ಕೆ ಮಹೇಶ್ ಬಾಬು ಸುರ್ವೇ, *ಡಾ. ಸಿ ಸೋಮಶೇಖರ, ಡಾ. ಮಹೇಶ ಜೋಶಿ,
ಕೆ ಎಲ್ ಕುಂದರಗಿ ಭುವನೇಶ್ವರಿ ಮೇಲಿನಮಠ. ಮತ್ತು ಮಹೇಶ್ ಬಾಬು ಸುರ್ವೇ ಸೇರಿ 12 ಸಾಧಕರಿಗೆ ಗಡಿನಾಡು ಶಿರೋಮಣಿ ಪ್ರಶಸ್ತಿಗೆ ಆಯ್ಕೆ ಅಥಣಿ 6: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಾಡಿನ 12 ಸಾಧಕರಿಗೆ ಜೂನ್ 19 ರಂದು ಅಥಣಿಯ ಭರಮಖೋಡಿಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮತ್ತು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್, (ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಜಂಟಿ ಆಶ್ರಯದಲ್ಲಿ ನಡೆಯುವ “ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಭ್ರಮ” ಸಮಾರಂಭದಲ್ಲಿ ಗಡಿನಾಡ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 12 ಸಾಧಕ ಮಹನೀಯರಿಗೆ ಗಡಿನಾಡ ಶಿರೋಮಣಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದು ನಡೆಯುವ ಗಡಿನಾಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದ. ಈ ಸಮಾರಂಭದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪಾದರು ಕೂಡ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. 12ಸಾಧಕರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಾ. ಸಿ ಸೋಮಶೇಖರ್, ನಾಡೋಜ ಡಾ. ಮಹೇಶ್ ಜ್ಯೋಶಿ, ಪ್ರಕಾಶ್ ಮತ್ತಿಹಳ್ಳಿ, ಪಾಲನೇತ್ರ, ರವಿ ಪೂಜೇರಿ, ನಾಡೋಜ ಜಗದೀಶ್ ಗುಡಗುಂಟಿ, ಡಾ. ಸಿ ನಂಜುಂಡೇಶ, ಜಿ ಆಂಜನಪ್ಪ, ಶ್ರೀಮತಿ ವಿದ್ಯಾವತಿ ಭಜಂತ್ರಿ, ಕೆ ಎಲ್ ಕುಂದರಗಿ ಭುವನೇಶ್ವರಿ ಮೇಲಿನಮಠ. ಮತ್ತು ಮಹೇಶ್ ಬಾಬು ಸುವೆ೯ಯರವರಿಗೆ ಪ್ರಶಸ್ತಿ ಪ್ರದಾನವಾಗಲಿದೆ. ಗಡಿನಾಡಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಸಂಘಟನೆ ಭೌಗೋಳಿಕ ಅಂಶ, ಸಾಧನೆ, ಸಂಪನ್ಮೂಲಗಳನ್ನು ಹೊಂದಲು ಇರುವ ಅಡ್ಡಿಗಳನ್ನು ಮೀರಿ ಈ ಸಾಧಕರು ಗಣನೀಯ ಸಾಧನೆ ಮಾಡಿದ್ದಾರೆ. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆ, ಸಮಾಜಕ್ಕೆ ಸ್ಪೂರ್ತಿಯಾಗಿದೆ. ಎಂದು ಕಾಯ೯ಕ್ರಮ ಆಯೋಜಕ ಸಂಸ್ಥೆಯ ಅಧ್ಯಕ್ಷ ಮಹಾದೇವ ಬಿರಾದಾರ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 98806 35268 ಸಂಪರ್ಕಿಸಲು ತಿಳಿಸಿದ್ದಾರೆ. ವರದಿ – ಸಂಪಾದಕೀಯ