ಜುಮಲಾಪೂರ ಗ್ರಾಮದ ಪಾಂಡುರಂಗ ತಾತನವರ ಜಾತ್ರಾ ನಿಮಿತ್ಯ ಚಳಗುರ್ಕಿ ಎರ್ರಿ ತಾತನ ಪುರಾಣದಲ್ಲಿ ಪರಿಸರ ದಿನಾಚರಣೆ ಹಾಗೂ ಮಹಿಳೆಯರಿಗೆ ಸಸಿ ವಿತರಣೆ ಮಾಡಿ ಮಾದರಿಯಾದ ಗ್ರಾಮದ ಪರಿಸರ ಪ್ರೇಮಿಗಳು……..
ಕುಷ್ಠಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಶ್ರೀ ಗುರು ನಿರುಪಾದಿ ವಡಕಿ ಪಾಂಡುರಂಗ ತಾತನವರ ಜಾತ್ರಾ ಮಹೋತ್ಸವ ಅಂಗವಾಗಿ. ಶ್ರೀ ಮಹಾಮಹಿಮ ಚಳ್ಳಗುರ್ಕಿ ಎರ್ರಿ ತಾತನವರ ಮಹಾ ಪುರಾಣ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜುಮಲಾಪೂರ ಪರಿಸರ ಪ್ರೇಮಿಗಳು. ವನಸಿರಿ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಶ್ರೀ ಅಮರೆಗೌಡ ಮಲ್ಲಾಪೂರ ಅವರ ಕಡೆಯಿಂದ ಸಸಿ ನೆಟ್ಟು. ಮಹಿಳೆಯರಿಗೆ ಸಸಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಮಾತನಾಡಿ ದೇವಾನುದೇವತೆಗಳೂ ಕೂಡ ಆಲದ ಮರ, ಅರಳಿಮರ, ಬನ್ನಿಮರ ಹೀಗೆ ಹಲವಾರು ವೃಕ್ಷಗಳನ್ನು ಪೂಜಿಸುತ್ತ ತಮ್ಮ ಇಷ್ಠಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದರು. ಇಂದಿನ ದಿನಮಾನಗಳಲ್ಲಿ ಮಾನವರಾದ ನಾವುಗಳು ವೃಕ್ಷವನ್ನು ಕಿತ್ತುಹಾಕುವ ಮನೋವೃತ್ತಿಯನ್ನು ಹೊಂದಿದ್ದೇವೆ ಒಂದೊಂದು ವೃಕ್ಷವೂ ಕೂಡ ನಮ್ಮ ಉಸಿರನ್ನ, ಜ್ಞಾನವನ್ನು ವೃದ್ದಿಸಿಕೊಳ್ಳಲು, ಆರೋಗ್ಯದಿಂದಿರಲು ಸಹಕಾರಿಗಳಾವೆ ಆದ್ದರಿಂದ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡಿ ಅದರ ಕೆಳಗಡೆ ಕುಳಿತು ವಿಶ್ರಾಂತಿ ಪಡೆಯಿರಿ ಶುದ್ಧವಾದ ಗಾಳಿ, ಜ್ಞಾನ, ಆರೋಗ್ಯ *ವೃದ್ದಿಸುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು. ಶಾಸ್ತ್ರಿಗಳು ಮಾತನಾಡುತ್ತ ಅವರ ಅಮೃತ ಕಂಠದಿಂದ ಸಾಲು ಮರದ ತಿಮ್ಮಕ್ಕನ ಜೀವನ ಚರಿತ್ರೆಯನ್ನು ವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಅಮರೆಗೌಡ ಮಲ್ಲಾಪುರ ಅವರಿಗೆ ಗ್ರಾಮದ ಹಿರಿಯರು ಸನ್ಮಾನಿಸಿ ಸತ್ಕರಿಸಿದರು. ಈ ಸಂಧರ್ಭದಲ್ಲಿ ಆಗಮಿಸಿದ ಎಲ್ಲರಿಗೂ ಗ್ರಾಮದ ಯುವಕರು ಸಸಿಗಳನ್ನು ವಿತರಿಸಿದರು .ಈ ಸಂದರ್ಭದಲ್ಲಿ ವನಸಿರಿ ತಂಡದ ಸದಸ್ಯರಾದ ಚಂದ್ರು ಪವಾಡ ಶೆಟ್ಟಿ,ಶಂಕರಗೌಡ ದೇವರಮನಿ,M.D.ಯುನಿಸ್, ಪಂಡಿತ್ ಎಮ್ ಎಸ್ ಶಶಿಧರ್ ಶಾಸ್ತ್ರಿಗಳ ಶಿಷ್ಯರಾದರು ಶ್ರೀ ವೇ ಮೂರ್ತಿ ಅಮರೇಶ ಶಾಸ್ತ್ರಿಗಳು ಚಿರಂತಿಮಠ ಎಲೆಕೂಡ್ಲಗಿ, ಗವಾಯಿಗಳಾದ ಶ್ರೀ ಪಂಪನಗೌಡ ಹಳೆಕೋಟೆ, ತಬಲವಾದಕರಾಗಿ ಮೌನೇಶ ಕುಮಾರ ಸಾ ಹಾಲ್ವಿ, ಕ್ಲಾರನೇಟ್ ವಾದಕರಾಗಿ ದೊಡ್ಡಬಸಪ್ಪ ಭಜಂತ್ರಿ,ಗ್ರಾಮದ ಹಿರಿಯರು ಮಹಿಳೆಯರು. ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ