(ವಿಭೂತಿ ಪಟ್ಟೆ ಜನರು )
ಹುಟ್ಟಿದರು ಊರೂರು
ಡಾಂಬಿಕದ ಜನರು
ಮೈ ಕಾಣದಂತೆ ಹಚ್ಚುವರು
ವಿಭೂತಿಪಟ್ಟೆಯು ಇವರು
ಕೊರಳಲ್ಲಿ ರುದ್ರಾಕ್ಷಿ ಹಾಕಿಹರು
ರುದ್ರಾಕ್ಷಿ ಮಹಿಮೆ ತಿಳಿದಿಲ್ಲಿವರು
ಗುರುವಿನ ಮಗ ಎನ್ನುವರು
ನಡೆ-ನುಡಿ ಇವರು ಮರೆತಿಹರು
ಊರೊಳಗೆ ಇರುತಿಹರು
ಅಲ್ಪ ಅಜ್ಞಾನ ವಿಚಾರ ಮಾಡುವರು
ಇವರು ಮಾಡುವ ಕೆಲಸ ನೋಡಿರಿ
ಮನೆಮುರಿವ ಕೆಲಸ ಮಾಡುವರು
ಎದುರಿಗೆ ಬಂದ ಜನರಿಗೆ ಇವರು
ಕೈ ಮುಗಿದು ಕಾಲಿಗೆ ಬೀಳುವರು
ಪರಸತಿಯರ ಸಂಗವ ಮಾಡುವರು
ಅನ್ಯರ ಸುದ್ದಿ ಮಾತಾಡುವರು
ಡಾಂಬಿಕರು ಹೆಚ್ಚು ಆಗಿಹರು
ಮಾಡುತಾರ ಶುದ್ಧ ಗುಣಇಲ್ಲದೆ ನಮಸ್ಕಾರ
ಬಂಡಾರದ ಭಕ್ತನೆಂದು ಹೇಳುವರು
ವಿಭೂತಿ ಭಕ್ತನೆಂದು ಹೋಣಿ ತಿರುಗುವರು
ಮನಸಾಕ್ಷಿ ದೇವರು ಮರೆತಿಹರು
ಡಾಂಬಿಕರಾಗಿ ಊರು ತಿರುಗುವರು
ನಾರಿನಾಳ ಮಾರುತೇಶನ ಜನರು
ತನು ಮನ ಭಾವ ಶುದ್ಧ ಇಲ್ಲದವರು
ಮೌನೇಶ ಇಟಿಗಿ:ತಾ:ಕುಷ್ಟಗಿ:ಜಿಲ್ಲಾ:ಕೊಪ್ಪಳ