ಜುಮಲಾಪುರ ಗ್ರಾಮದಲ್ಲಿ ಕರೋನ ಜನ ಜಾಗೃತಿ ಮೂಡಿಸಿದ ಶ್ರೀ ಮಾನ್ಯ ಶಾಸಕರು ಅಮರೆಗೌಡ ಎಲ್. ಪಾಟೀಲ ಬಯ್ಯಾಪುರವರು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾರ್ವಜನಿಕ ವಾಗಿ ಕರೋನ ಮಹಾಮಾರಿ ರೋಗಕ್ಕೆ ಸಂಭಂದಿಸಿದಂತೆ. ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕುಷ್ಟಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಾನ್ಯ ಅಮರೆಗೌಡ ಪಾಟೀಲ ಬಯ್ಯಾಪುರ ಸಾಹೆಬರು ಪ್ರತಿಯೊಬ್ಬರು ಮಾಸ್ಕ ಧರಿಸಿ ಜೋತೆಗೆ ಎರಡು ಎರಡು ಮಾಸ್ಕ ಜೊತೆಗೆ ಇಟ್ಟುಕೊಳ್ಳಿ ಯಾಕೆಂದರೆ ಒಂದೆ ಮಾಸ್ಕ ದಿನಾಲೂ ಹಾಕುವುದರಿಂದ ರೋಗ ಹರಡುವ ಪ್ರಭಾವ ಇರುತ್ತದೆ ಹಾಗಾಗಿ n 95 ಎನ್ನುವ ಮಾಸ್ಕ ಧರಿಸಿದರೆ ಒಳ್ಳೆಯದು ಮೋದಲು ರೋಗ ಬಾರದಂತೆ ನೋಡಿಕೊಳ್ಳಬೇಕಾಗಿರುವದು ಬಹಳ ಮುಖ್ಯ. ಬಂದ ನಂತರ ಕಡಿಮೆ ಮಾಡುವದು ಬಹಳ ಕಷ್ಟ ಹಾಗಾಗಿ ನಾವುಗಳು ಒಬ್ಬ ಶಾಸಕರಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಬಂದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡ್ತೆವೆ ಹಾಗೆ ನಿವು ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ನಿಮ್ಮ ಪಂಚಾಯಿತಿಗೆ ಒಳಪಡುವ ಹಳ್ಳಿಗಳಿಗೆ ನಿವು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು ತದನಂತರ ಕುಷ್ಟಗಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ಮಾನ್ಯ ವೆಂಕಟೇಶ್ ವಂದಲ್ ಮಾತನಾಡಿ ಪ್ರತಿಯೊಬ್ಬರು ಮಾಸ್ಕ ಸಾಮಾಜಿಕ ಅಂತರ ಕಾಪಾಡುವ ಕರ್ತವ್ಯ ನಿಮ್ಮದಾಗಿರುತ್ತದೆ ಪಾಸಿಟಿವ್ ಬಂದರೂ ಬೇಜವಾಬ್ದಾರಿತನದಿಂದ ಎಲ್ಲೆಂದರಲ್ಲಿ ಕುಳಿತು ಕೊಳ್ಳುವದು ಒಳ್ಳೆಯದಲ್ಲ ವೈದ್ಯಾಧಿಕಾರಿಗಳು ಮಾರ್ಗದರ್ಶನದಲ್ಲಿ ನಾವೆಲ್ಲ ಜೀವನ ನೆಡಸಬೇಕಾಗಿದೆ ಎಂದರು ಮುದೆನೂರಿನ ವೈದ್ಯಾದಿಕಾರಿಗಳು ಮಾತನಾಡಿ ಈಗಾಗಲೇ ಮುದೆನೂರ ಗ್ರಾಮದಲ್ಲಿ 49 ಪಾಸಿಟಿವ್ ಪ್ರಕರಣ ಬಂದಿದ್ದು
ನಿಮ್ಮ ಊರಿನಲ್ಲಿ ಕೇವಲ 5 ಪಾಸಿಟಿವ್ ಇದ್ದು. ಪ್ರತಿಯೊಬ್ಬರೂ ಸೊಂಕಿನ ಲಕ್ಷಣ ಇದ್ದವರು ಚೆಕ್ ಮಾಡಿಸಿಕೊಳ್ಳಿ ಹಾಗೆ ವ್ಯಾಕ್ಸೀನ್ ಡೋಸ್ ನ್ನು ಪ್ರತಿಯೊಬ್ಬರು ಹಾಕಿಸಿಕೊಳ್ಳಬೇಕು ಡೋಸ್ ಹಾಕಿಸಿಕೊಳ್ಳುವದರಿಂದ ರೋಗವನ್ನು ಅರ್ಧದಷ್ಟು ತಡೆಗಟ್ಟಬಹುದು ಹಾಗೆ ನಮ್ಮ ಆರೋಗ್ಯ ಸಿಬ್ಬಂದಿಯೊಂದಿಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಮನೆಗೆ ಬೇಟಿ ನಿಡಿದಾಗ ಸಹಕಾರ ನಿಡಬೇಕಾಗಿರುವದು ನಿಮ್ಮ ಕರ್ತವ್ಯ ಹಾಗೆ ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳಿದರು ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ನಾಗೇಶ್ ಅಳಿಗನೂರ ಅಧ್ಯಕ್ಷ ರಾದ ಶ್ರಿ ಮತಿ ಅಕ್ಕಮ್ಮ ಈರಪ್ಪ ದಂಡಿನ ಉಪಾಧ್ಯಕ್ಷರಾದ ಶ್ರೀ ಛತ್ರಪ್ಪ ರಾಠೊಡ ಗ್ರಾಮ ಪಂಚಾಯ್ತಿಯ ಸರ್ವ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಹಾಗೂ ಊರಿನ ಸಾರ್ವಜನಿಕರು ಇದ್ದರು
ವರದಿ – ಅಮಾಜಪ್ಪ ಹೆಚ್. ಜುಮಲಾಪೂರ