ಕೂಡ್ಲಿಗಿ ಸ್ಮಶಾನ ಕಲ್ಪಿಸುವಂತೆ ಕ್ರಿಸ್ಚಿಯನ್ ವೆಲ್ಪರ್ ಅಸೋಸಿಯೇಷನ್ ಒತ್ತಾಯ….
ವಿಜಯನಗರ ಜಿಲ್ಲೆ ಕೂಡ್ಲಿಗಿ, ತಾಲೂಕು ಕಿಸ್ಚಿಯನ್ ವೆಲ್ಪರ್ ಅಸೋಸಿಯೇಷನ್ ವತಿಯಿಂದ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ, ಸಮಾಜದವರ ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಸ್ಥಳ ನೀಡಬೇಕೆಂದು, ಹಾಗೂ ಸರ್ಕಾರ ಸುಸಜ್ಜಿತ ಸ್ಮಶಾನ ನಿರ್ಮಿಸಿಕೊಡಬೇಕೆಂದು ತಹಶಿಲ್ದಾರರಿಗೆ ಒತ್ತಾಯಿಸಲಾಯಿತು. ಕೂಡ್ಲಿಗಿ ತಾಲೂಕು ಕ್ರಿಸ್ಚಿಯನ್ ವೆಲ್ಪರ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಪೇಟೆಯ ಫಾಸ್ಟರ್ ಗೋಪಿನಾಥ್ ರವರು ಹಾಗೂ ತಾಲೂಕು ಅಧ್ಯಕ್ಷ ಫಾಸ್ಟರ್ ಹೆಚ್.ಪರಶುರಾಮ, ಫಾಸ್ಟರ್ ಜೆ.ಎಮ್. ಡೇವಿಡ್ ನೇತೃತ್ವದಲ್ಲಿ ತಮ್ಮ ಹಕ್ಕೋತ್ತಾಯದ ಪತ್ರವನ್ನು ತಹಶಿಲ್ದಾರರಿಗೆ ನೀಡಿದರು. ಹೆಚ್. ಪರಶುರಾಮ ಮಾತನಾಡಿ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ. ಸಾವಿರಾರು ಕ್ರಿಸ್ಚಿಯನ್ ಬಾಂಧವರಿದ್ದು ,ಮರಣ ಹೊಂದಿದಾಗ ಅಂತ್ಯಕ್ರಿಯೆ ಗೆ ಸೂಕ್ತ ಸ್ಮಶಾನದ ಕೊರತೆ ಇದೆ. ಅಂತ್ಯಕ್ರಿಯೆಗೆ ತೀವ್ರ ಪರದಾಡೋ ದುಸ್ಥಿತಿ ಉಂಟಾಗಿದ್ದು ಕಾರಣ ತಾಲೂಕಾಡಳಿತ, ಶೀಘ್ರವೇ ಸ್ಮಶಾನಕ್ಕೆ ಸ್ಥಳವನ್ನು ಕಲ್ಪಿಸಬೇಕಿದೆ ಮತ್ತು ಸುಸಜ್ಜಿತ ಸ್ಮಶಾನವನ್ನು ನಿರ್ಮಿಸಬೇಕಿದೆ. ಹೋಬಳಿ ವಾರು ಹಾಗೂ ಅತಿ ಹೆಚ್ಚು ಕ್ರಿಸ್ಚಿಯನ್ ರಿರುವ ಗ್ರಾಮೀಣ ಭಾಗದಲ್ಲಿ, ಈ ಸಮಸ್ಯೆ ಇದ್ದು ಶೀಘ್ರವೇ ಪರಿಶೀಲಿಸಿ ತಾಲೂಕಾಡಳಿತ ಸಮಸ್ಯೆ ನೀಗಿಸಬೇಕಿದೆ ಎಂದರು. ತಹಶಿಲ್ದಾರರಾದ ಟಿ.ಜಗದೀಶರವರಿಗೆ, ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರರಾದ ಟಿ.ಜಗದೀಶರವರು ಪತ್ರ ಪಡೆದು ಮಾತನಾಡಿ, ಸಂಬಂಧಿಸಿದಂತೆ ಶೀಘ್ರವೇ ಸೂಕ್ತ ಕ್ರಮ ಜರುಗಿಸಲಾಗುವುದು. ಯೋಗ್ಯ ಸರ್ಕಾರಿ ಜಮೀನು ಪರಿಶೀಲಿಸಿ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು, ಹಾಗೂ ಬೇಡಕೆಗಳ ಈಡೇರಿಕೆಗೆ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುವುದೆಂದರು. ಈ ಸಂದರ್ಭದಲ್ಲಿ ಫಾಸ್ಟರ್ ಗಳಾದ ರಮೇಶ ನಾಯಕ, ಪವುಲ್ ವರದರಾಜ್, ಶಿವಕುಮಾರ,ಮಾದಯ್ಯ, ಸುರೇಶ ಬಾಬು, ಕುಮಾರ ಸ್ವಾಮಿ,ನಾಗರಾಜ,ಜಗನಾಥ,ರಾಬರ್ಟ್, ಹಂಪಯ್ಯ,ಡಾ॥ಆನಂದ, ಭಾಸ್ಕರ್ ರಾವ್, ಆನಂದ ಪ್ರಸಾದ್ ಸೇರಿದಂತೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಯ, ಹಾಗೂ ವಿಜಯನಗರ ಜಿಲ್ಲೆ ಯ ವಿವಿದ ತಾಲೂಕಿನಿಂದ ಆಗಮಿಸಿದ್ದ ಪಾಸ್ಟರ್ ರವರು ಇದ್ದರು.
ವರದಿ – ✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428