8ನೇ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸರಕಾರಿ ಪ್ರೌಢ ಶಾಲೆಯಲ್ಲಿಂದು ಜುಮಲಾಪುರ.
ಇಂದು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಯೋಗಾಭ್ಯಾಸ ಮಾಡಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು .ಶಾಲೆಯ ಶಿಕ್ಷಕರಾದ ಯೋಗ ಪಟು, ಶಿಕ್ಷಕ ಶ್ರೀ ಚಿದಾನಂದಪ್ಪ ಯೋಗಾಭ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಈಗಾಗಲೇ ವಾರದ ಕಾಲ ಮಕ್ಕಳಿಗೆ ತರಬೇತಿ ನೀಡಿರುವ ಶಿಕ್ಷಕ ಇಂದು ಬೆಳಿಗ್ಗೆ 7-30 ಗಂಟೆಗೆ ಯೋಗಾಭ್ಯಾಸದ ವಿವಿಧ ಆಸನಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಗ್ರಾಮ ಪಂಚಾಯತ್ ಸದಸ್ಯರಾದ ಬಾಳಪ್ಪ ಕೊಡಗಲಿ ,ನಿಂಗಪ್ಪ ಕುರಿ, ರಾಜಾಸಾಬ್ ಕಲಾಲ್, ಲಕ್ಷ್ಮಮ್ಮ ನಾಯಕ್ ಮಕ್ಕಳೊಂದಿಗೆ ಯೋಗಾಭ್ಯಾಸ ದಲ್ಲಿ ಭಾಗವಹಿಸಿದರು. ಎಸ್ ಡಿಎಂಸಿ ಅಧ್ಯಕ್ಷರಾದ ಕನಕಪ್ಪ ನಾಯಕ , ಅಧ್ಯಕ್ಷತೆ ವಹಿಸಿಕೊಂಡು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಸದಸ್ಯರಾದ ಅಂಬರೀಷ್ ಕುಷ್ಟಗಿ, ನಿರುಪಾದೆಪ್ಪ ಹರಿಜನ, ಹಾಗೂ ಗ್ರಾಮದ ಯುವಕರು ಭಾಗವಹಿಸಿ ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು .ಈ ರೀತಿ ಪ್ರತಿದಿನ ಯೋಗ ಮಾಡುವುದರಿಂದ ನಿರೋಗಿಯಾಗಿ ಆರೋಗ್ಯ ಸಂಪತ್ತನ್ನು ಪಡೆದುಕೊಳ್ಳಬಹುದು ಎಂದು ಶ್ರೀ ಚಿದಾನಂದಪ್ಪ ಕಂದಗಲ್ ವಿದ್ಯಾರ್ಥಿಗಳಿಗೆ ಯುವಕರಿಗೆ ಕರೆ ನೀಡಿದರು.
ವರದಿ – ಸಂಪಾದಕೀಯ