ಮುದೇನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ವತಿಯಿಂದ ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ರೂ. 4 ಲಕ್ಷ ಸಾಲದ ಚೆಕ್ ವಿತರಿಸಲಾಯಿತು.
ಮುದೇನೂರು : ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಣೆ
ತಾವರಗೇರಾ ಸಮೀಪದ : ಮಹಿಳೆಯರು ಹಣ ಉಳಿತಾಯ ಮಾಡಿ, ಆರ್ಥಿಕವಾಗಿ ಸದೃಢವಾದರೆ ಮಾತ್ರ ಒಂದು ಕುಟುಂಬವು ಸಂಕಷ್ಟದಿಂದ ಹೊರಬರಲು ಸಾಧ್ಯ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಸೇನಪ್ಪ ಹೊಸಮನಿ ಹೇಳಿದರು
ಸಮೀಪದ ಮುದೇನೂರು ಗ್ರಾಮದ ಪ್ರಾ ಕೃ ಪ ಸಹಕಾರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ವ ಸಹಾಯ ಗುಂಪುಗಳಲ್ಲಿ ಮಹಿಳೆಯರು ಹಣ ಉಳಿತಾಯ ಮಾಡಬೇಕು, ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಬ್ಸಿಡಿ ಸೌಲಭ್ಯ ಪಡೆದು ಸಂಘ ಬೆಳೆಸುವದು ಜೊತೆಗೆ ಸ್ವಯಂ ಉದ್ಯೋಗ ಮಾಡುವ ಮೂಲಕ ಸಾಲ ಮರುಪಾವತಿ ಮಾಡಬೇಕು. ನಮ್ಮ ಸಹಕಾರಿಯಿಂದ 50 ಮಹಿಳಾ ಸ್ವ ಸಹಾಯ ಗುಪುಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಪುರುಷರಿಗಿಂತ ಮಹಿಳೆಯರು ಸಹ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮುದೇನೂರಿನ ಶ್ರೀ ಕೂಡಲ ಸಂಗಮೇಶ್ವರ ಮತ್ತು ಶ್ರೀ ಚಂದ್ರಕಲಾ , ಸ್ವ ಸಹಾಯ ಗುಂಪುಗಳು ಈ ಎರಡು ಮಹಿಳಾ ಗುಂಪುಗಳಿಗೆ ತಲಾ ರೂ. 2 ಲಕ್ಷ ದಂತೆ ಸಾಲದ ಒಟ್ಟು ರೂ. 4 ಲಕ್ಷ ಚೆಕ್ ವಿತರಿಸಲಾಯಿತು. ಕಾರ್ಯನಿರ್ವಾಹಕ ಅಧೀಕಾರಿ ಶರಣಪ್ಪ ಕುಬಾರ, ಸಹಕಾರ ಸಂಘದ ಉಪಾಧ್ಯಕ್ಷ ದ್ಯಾವಪ್ಪ ಚಟ್ನಾಳ, ನಿರ್ದೇಶಕರು, ಮತ್ತು ಸದಸ್ಯರು ಮುಖಂಡರಾದ ಚಂದ್ರಶೇಖರ ಕುಂಬಾರ , ಸಿಬ್ಬಂಧಿ ಇದ್ದರು.
ವರದಿ – ಚಂದ್ರುಶೇಖರ ಕುಂಬಾರ್ ಮುದೇನೂರು