ಕ.ನ.ಸೇ ತಾವರಗೇರಾ ಹೋಬಳಿ ಘಟಕ ಹಾಗೂ ನಗರ ಘಟಕದವತಿಯಿಂದ ಪ.ಪಂ.ಮುಂದೆ ವಿವಿದ ಬೇಡಿಕೆ ಇಡೆರಿಕೆಗಾಗಿ ಅನಿರ್ದಿಷ್ಠಾವದಿ ಮುಷ್ಕರ.
ತಾವರಗೇರಾ ಪಟ್ಟಣ ಪಂಚಾಯತಿಗೆ ಸಂಬಂದಪಟ್ಟಂತೆ ಹಲವು ಸಮಸ್ಯಗಳ ಕುರಿತು ಸಾಕಷ್ಟು ಸಾರಿ ಹೋರಾಟ ಹಾಗೂ ಅರ್ಜಿ ಸಲ್ಲಿಸಿದರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವರ್ಗದ ವಿರುದ್ದು ಇಂದು ಕರ್ನಾಟಕ ನವ ನಿರ್ಮಾಣ ಸೇನೆವತಿಯಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ತಾವರಗೇರಾ ಪಟ್ಟಣಕ್ಕೆ ಸಂಬಂದಿಸಿದ ಮೂಲಭೂತ ಸೌಕರ್ಯಗಳನ್ನು ಇಡೇರಿಸಲು ಕಳೆದ 2-3ವರ್ಷಗಳಿಂದಲೂ ಪಟ್ಟಣ ಪಂಚಾಯತ ಅಡಳಿತ ವರ್ಗಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ದಿನ ನಿತ್ಯ ಸಾರ್ವಜನಿಕರಿಗೆ ಅವಶ್ಯವಿರುವ ಸಾರ್ವಜನಿಕ ಸಾಮೂಹಿಕ ಮಹಿಳಾ ಶೌಚಾಲಯ , ಚರಂಡಿ ಸ್ವಚ್ಛಗೊಳಿಸುವದು , ಸುಸರ್ಜಿತವಾದ ಸಿ.ಸಿ ರಸ್ತೆ , ವಿದ್ಯುತ್ ದೀಪ ಅಳವಡಿಕೆ ಯಂತಹ ಮೂಲ ಸೌಕರ್ಯಗಳನ್ನು ಇಡೇರಿಸುವಲ್ಲಿ ಪಟ್ಟಣ ಪಂಚಾಯ ಸಂಪೂರ್ಣ ವಿಫಲವಾಗಿದೆ . ತಾವರಗೇರಾ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗೆ ತುರ್ವಿಹಾಳದಿಂದ ತಾವರಗೇರಾ ಪಟ್ಟಣದ ಮದ್ಯದಲ್ಲಿ ನಡೆಯುತ್ತಿರುವ ಪೈಪ್ ಲೈನ್ ಕಾಮಗಾರಿಯನ್ನು ನಡೆಸುತ್ತಿರುವ ಕರ್ನಾಟಕ ನೀರು ಸರಬರಾಜು ಹಾಗೂ ೭ ಒಳಚರಂಡಿ ಮಂಡಳಿಯವರು ಮತ್ತು ಈ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೇದಾರರು ಸೇರಿ ಸರ್ವೆ ನಂ .54 ಸರ್ಕಾರಿ ಜಮೀನಿನಲ್ಲಿ ಮರಳು ( ಗರ್ಚ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವದನ್ನು ಎಲ್ಲ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ . ಮರಳು ( ಗರ್ಚ ಮಣ್ಣನ್ನು ನಿಂದ ಸರ್ಕಾರಕ್ಕೆ ಆದ ನಷ್ಟವನ್ನು ಸಂಪೂರ್ಣವಾಗಿ ಸಂಬಂಧಪಟ್ಟ ಗುತ್ತಿಗೆದಾರರು, ಮತ್ತು ಈ ಕಾಮಗಾರಿಗೆ ಸಂಬಂಧ ಪಟ್ಟ ಇಲಾಖೆಯವರ ಭರಿಸಲು ಆದೇಶ ನೀಡಬೇಕು. ಮತ್ತು ಇಂತಹ ಗುತ್ತಿಗೆದಾರರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಲೋಪವೆಸುಗುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಬೇಕು.
ಸಾರ್ವಜನಿಕರ ಬೇಡಿಕೆಗಳು : 1. ಪಟ್ಟಣ ಪಂಚಾಯತಯ ಕಾರ್ಯಾಲಯದಲ್ಲಿ ಯಾವ ಯಾವ ಕೆಲಸದಲ್ಲಿ ಯಾರಾರೂ ನೇಮಕಗೊಂಡಿದ್ದಾರೆ. ಅವರು ಅದೇ ಕೆಲಸವನ್ನು ನಿರ್ವಹಿಸಬೇಕು. ಉದಾಹರಣೆ ಪಿಕೆ ಎಂದು ನೇಮಕಗೊಂಡಿರುವ ಮರೇಶನಾಯಕರವರು ಪ್ರಥಮ ದರ್ಜೆ ಸಹಾಯಕರಂತೆ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ನೇಮಕ ಮಾಡಿಕೊಂಡಿರುವ ಮೂಲ ಹುದ್ದೆಯನ್ನು ನಿರ್ವಹಿಸಲು ಕಳಿಸಬೇಕು. 2. 2021-22 ನೇ ಸಾಲಿನ ಡಾ. ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆ ಹಾಗೂ ವಾಜಪೇಯಿ ಯೋಜನೆಯ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಕೈಬಿಟ್ಟು ವಾರ್ಡಗಳಲ್ಲಿ ವಾರ್ಡ ಸಭೆಯ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. 3. ಪಟ್ಟಣ ವ್ಯಾಪ್ತಿಯ ಎಲ್ಲಾ ವೃತ್ತಗಳಲ್ಲಿ ಸಾರ್ವಜನಿಕರ ಶೌಚಾಲಯಗಳ ನಿರ್ಮಾಣ 4. ಗಂಗಾವತಿ ಮುದಗಲ್ಲ ರಸ್ತೆಗೆ ಅಂದರೆ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಡಾ.ಬಿ.ಆರ್ . ಅಂಬೇಡ್ಕರ ವೃತ್ತದದ ವರೆಗೆ ರಸ್ತೆ ವಿಭಾಗ ನಿರ್ಮಾಣ 5. ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ದೀಪಗಳ ನಿರ್ವಹಣೆ, 6. ಡಾ.ರಾಜಕುಮಾರ ರಸ್ತೆಯಲ್ಲಿ ಪಾದಾಚಾರಿಗಳಿಗೆ ಪುಟ್ಟಾತ್ ನಿರ್ಮಾಣ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಒದಗಿಸಬೇಕು. 7. ಪಟ್ಟಣ ಪ್ರಮುಖ ರಸ್ತೆಗಳನ್ನು ಧೂಳು ಮುಕ್ತ ರಸ್ತೆಗಳನ್ನಾಗಿ ನಿರ್ವಹಿಸ ಬೇಕು, 8. ಗಂಗಾವತಿ ‘ ಮುದಗಲ್ಲ ರಸ್ತೆಯ ಅಕ್ಕಪಕ್ಕದಲ್ಲಿರುವ ಒಳ ಚರಂಡಿಗಳ ಹೂಳು ತೆಗೆಯಬೇಕು 9, ಎಲ್ಲಾ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕು. 10. ಪ್ರಮುಖ ವೃತ್ತಗಳಲ್ಲಿದ್ದ ಹೈಮಾಸ್ಟ್ ದೀಪಗಳ ಸಮರ್ಪಕವಾಗಿ ನಿರ್ವಹಿಸಬೇಕು, 11, ಪಟ್ಟಣ ಪಂಚಾಯತ ಸಿಬ್ಬಂದಿಗಳ ಪ್ರತಿಯೊಬ್ಬರ ಅಸನದ ಮೇಲೆ ಅವರ ಹೆಸರು ಮತ್ತು ಹುದ್ದೆ ಐಡಿ ಕಾರ್ಡ್ ಹಾಕಿಕೊಂಡಿರಬೇಕು. 12. ಡಿ- ನಾ ಯೋಜನೆಯಡಿಯಲ್ಲಿ ಇಬ್ಬರು ಕಂಪ್ಯೂಟರ್ ಆಪರೇಟರ್ ಮತ್ತು ಇತರ ಕೆಲಸಕ್ಕಾಗಿ ಕೆಲ ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಅವರನ್ನು ಯಾವಾಗ ನೇಮಕ ಮಾಡಿದ್ದಿರಿ. ಅದರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಪತ್ರಿಕೆಯ ಪ್ರತಿಯನ್ನು ನಿಡಬೇಕು. ಹಾಗೂ ಅವರನ್ನು ಯಾವ ಆಧಾರದಮೇಲೆ ನೇಮಕ ಮಾಡಿಕೊಂಡಿದ್ದೀರಿ ಎಂದು ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. 13, 2021-22 ನೇ ಸಾಲಿನ ಕಂಪ್ಯೂಟರ್ ತರಬೇತಿಯನ್ನು ಪೂರ್ಣಗೊಳಿಸಿದರು. ಆ ಯೋಜನೆಗಳಿಂದ ಸಿಗಬೇಕಾದ ಆರ್ಥಿಕ ಸೌಲಭ್ಯ ಪ್ರಮಾಣಪತ್ರವನ್ನು ಆದಷ್ಟು ಬೇಗ ನಿಡಬೇಕು. 14. ಬಚಾರ ರಸ್ತೆಯಲ್ಲಿರುವ ಮಸೀದಿಯ ಮುಂಭಾಗದಲ್ಲಿರುವ ರಾಜ ಕಾಲುವೆ ಮೇಲೆ ಅನಿಧಿಕೃತವಾಗಿ ಅಂಗಡಿಗಳನ್ನು ನಿರ್ಮಿಸಿದ್ದು, ಅಂತಹ ಅಂಗಡಿಗಳನ್ನು ತೆರವುಗೊಳಿಸಬೇಕು.
- ಪಪಂ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಪಂನಿಂದ ಜಾರಿಗೆ ಆಗಿರುವ ಯೋಜನೆಗಳನ್ನು ಹಾಗೂ – ಸೌಲಭ್ಯಗಳು ಸೇರಬಂತೆ ಇನ್ನಿತರ ವಿಷಯಗಳ ಬಗ್ಗೆ ಪ್ರತಿದಿನವು ವೆಬ್‌ಸೈಟ್ ಗೆ ಸೇರ್ಪಡೆ 16 , ಪ.ಪಂ ಕಾರ್ಯಾಲಯದಲ್ಲಿ ಸಿಬಂದಿಗಳ ಹೊರತು ಹೊರಗಿನವರು ಸಿಬ್ಬಂದಿಗಳ ಆಸನದಲ್ಲಿ ಕುಳಿತುಕಂಪ್ಯೂಟರ್ & ಇತರೆ ಕೆಲಸಗಳನ್ನು ಇತರೆ ಕೆಲಸಗಳನ್ನು ಸಿಬಂದಿಗಳ ಬದಲು ಖಾಸಗಿ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದು.ಅವರನ್ನು ಯಾವ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವಿರಿ ಮಾಹಿತಿ ನೀಡಬೇಕು. 17. ಸಾರ್ವಜನಿಕರಿಗೆ ಅನುಕೂಲಕರವಾಗಿರುವ ಗಾಂಧಿವೃತ್ತ ಹತ್ತಿರವಿರುವ ಹೈ ಮಾಸ್ಟ್ ದೀಪವನ್ನು ಸ್ಥಳಂತರಿಸಬಾರದು. 18. ಕಿತ್ತೂರರಾಣಿ ಚನ್ನಮ್ಮ ವೃತ್ತದಲ್ಲಿ ನೂತನ ಹೈ ಮಾಸ ದ್ವೀಪವನ್ನು ಅಳವಡಿಸಬೇಕು. 19. ಪಟ್ಟಣದ ಸಾರ್ವಜನಿಕ ಗಂಥಾಲಯವನ್ನು ಸಮಯಕ್ಕೆ ಸರಿಯಾಗಿ ತೆಗೆಯ ಬೇಕು. ಹಾಗೂ ಸಾರ್ವಜನಿಕರಿಗೆ ಓದಲು ಕನಿಷ್ಠ ದಿನ ಪತ್ರಿಕೆಗಳು ಬರುತ್ತಿದ್ದು, ಅದನ್ನು ಗರಿಷ್ಠ ಮಟ್ಟಕ್ಕೆರಿಸಿ ಓದಲು ಅನುಕೂಲ ಮಾಡಿಕೊಡಬೇಕು. ಅಲ್ಲಿ ಕಾರ್ಯನಿರ್ವಹಿಸುವ ಗ್ರಂಥಪಾಲಕರನ್ನು ತೆಗೆದು ಹೊಸದಾಗಿ ನೇಮಕ ಮಾಡಿಸಿಕೊಳ್ಳಬೇಕು. 20. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಹೊಸ ಸರ್ಕಾರಿ ವಾಣಿಜ್ಯ ಮಳಿಗೆಗಳು ಸರ್ಕಾರದ ನಿಯಮದ ಪ್ರಕಾರ ಟೆಂಡರ್ ಕರೆದು ಬಾಡಿಗೆ ನೀಡಬೇಕು. ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಬೇಕು, ಈಡೇರಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ನಿಮ್ಮ ಜಿಲ್ಲಾಡಳಿತದ ಮುಂದೆ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದೆಂದು ಎಂದು ಕ.ನ.ಸೇ.ವತಿಯಿಂದ ಹೆಚ್ಚರಿಕೆ ನೀಡಿದ ಕೆಲವೆ ಘಂಟೆಗಳಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಸಿಬಂದಿ ವರ್ಗದವರು ಧರಣಿ ನಿರತರ ಬಳಿ ಬಂದು ಅವರ ಬೇಡಿಕೆಗಳನ್ನ ಆಲಿಸಿ, ನಮಗೆ ಕೆಲವೊಂದು ಬೆಡಿಕೆಗಳನ್ನ ಇಡೆರಿಸಲು ನಮಗೆ ಕಾಲವಕಾಸ ನೀಡಬೇಕು ಎಂದರು. ಇದಕ್ಕೆ ಧರಣಿ ನಿರತರು ಬಗ್ಗದೆ ನಮ್ಮ ಹೋರಾಟ ಹಿಗೇ ಮುಂದುವರೆಯುತ್ತದೆ. ಎಂದರು.
ಕ.ನ.ಸೇ ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ಧನಗೌಡ ಪುಂಡಗೌಡ್ರು, ನಗರ ಘಟಕದ ಅಧ್ಯಕ್ಷರಾದ ನಬಿ ಸಾಬ್ ನವಲಿ, ಹಿರಿಯ ಹೋರಾಟಗಾರರಾದ ಆನಂದ್ ಭಂಡಾರಿಯವರು ಹೋರಾಟದ ಹಾಡು ಹಾಡುವ ಮೂಲಕ ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿದರು. ಯಮನೂರಪ್ಪ ಬಿಳ್ಳೆದಗುಡ್ಡ, ಮೌನೇಶ್ ಜಗ್ಗು, ಹನುಮನಗೌಡ, ದೇವಣ್ಣ, ವೆಂಕಟೇಶ್, ದೊಡ್ಡಬಸವ, ಕುಮಾರ್, ರವಿ ಆರೇರ, ಖಾಜಾಖಾನ ಶಿವಾಜಿ ಎಲಿ ದೇವಣ್ಣ ಕಲಾಲ್ ಶರೀಫ್ ಲಿಂಗಬಂಡಿ ಇತರರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯ