ದುಶ್ಚಟಗಳಿಂದ ದೂರ ಇರುವ ಸಂಕಲ್ಪ ಮಾಡಿ : ಜಗದೀಶ್

Spread the love

ದುಶ್ಚಟಗಳಿಂದ ದೂರ ಇರುವ ಸಂಕಲ್ಪ ಮಾಡಿ : ಜಗದೀಶ್

ಯಲಬುರ್ಗಾ : ಯುವಕರು ದೇಶದ ಶಕ್ತಿ. ವಿದ್ಯಾರ್ಥಿ ಜೀವನದಿಂದ ಬದುಕು ಕಟ್ಟಿಕೊಳ್ಳುವ ಯುವ ವಯಸ್ಸಿನಲ್ಲಿ ಒತ್ತಡಗಳಿಂದ ದುಶ್ಚಟಗಳಿಗೆ ಅಡಿಕ್ಟ್ ಆದರೆ ಅದರಿಂದ ಮುಕ್ತಿ ಹೊಂದುವುದು ಸಾಮಾನ್ಯವಲ್ಲ. ಅದಕ್ಕಾಗಿ ನಾವು ಎಲ್ಲ ದುಶ್ಚಟಗಳಿಂದ ದೂರ ಇರೋಣ ಸಂಕಲ್ಪ ಮಾಡೋಣ ಎಂದು ಶಿಕ್ಷಕರಾದ ಜಗದೀಶ್ ಬಳಿಗಾರ್ ಹೇಳಿದರು. ತಾಲೂಕಿನ ಮುಧೋಳ ಗ್ರಾಮದಲ್ಲಿ ಡಾ: ಏ.ಪಿ.ಜೆ ಅಬ್ದುಲ್ ಕಲಾಂ ಗ್ರಾಮೀಣಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ಮುಧೋಳ ಇದರ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ ಜನ ಜಾಗೃತಿ ನಿಮಿತ್ಯ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗ್ರಾಮಗಳಲ್ಲಿ ಮದ್ಯ ಸೇವನೆ ಪ್ರಮಾಣ ಏರುತ್ತಿದೆ. ಇದರಿಂದ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಹಾನಿಯಾಗುತ್ತದೆ. ದುಶ್ಚಟಗಳ ಬಗ್ಗೆ ಯುವಕರು ಜಾಗೃತರಾಗಿರಬೇಕು ಎಂದರು. ನಂತರ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ಮಾತನಾಡಿ ಯಾರೇ ಮಾದಕ ವಸ್ತು ಸೇವನೆಗೆ ಅಡಿಕ್ಟ್ ಆಗಿದ್ದರೆ ಮಾಹಿತಿ ಕೊಡಿ. ಅಂಥವರನ್ನು ನಶೆಯಿಂದ ಮುಕ್ತಿ ಕೊಡಿಸೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಗೌಸ್‌ ಆರ್ ಬಳ್ಳಿನ್ ವಹಿಸಿದರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಝಾಕ್, ವೀರಣ್ಣ, ಮೆಹಬೂಸಾಬ್, ಬಸವರಾಜ, ಬಸವರಾಜ, ಹಾಗೂ ಪ್ರಭುರಾಜ ಪಲ್ಲೆದ  ಉಪಸ್ಥಿತರಿದ್ದರು ಪ್ರಸನ್ನ ಕುಮಾರ ಕಮತರ  ಸ್ವಾಗತಿಸಿದರು ಅಮೀರ ಇತರರು ಇದ್ದರು, ವರದಿ –ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *