ವರದಿಗಾರ ಹುಸೇನ್ ಗೆ ಬೆಂಗಳೂರಿನಲ್ಲಿ ಯುವರತ್ನ ಅಪ್ಪು ಪ್ರಶಸ್ತಿ ಪ್ರದಾನ ,,,,,,
ಉದಯವಾಹಿನಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯೊಂದರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಹುಸೇನ ಮೊತೇಖಾನ ಅವರಿಗೆ ಎಸ್ ಎಸ್ ಕಲಾಸಂಗಮ ಟ್ರಸ್ಟ್ ಬೆಂಗಳೂರು 2022-23 ನೇ ಸಾಲಿನ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕಲಾವಿದರಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರನ್ನು ಹಾಗೂ ಯುವ ಸಾಧಕರನ್ನು ಪರಿಗಣಿಸಿ ನಾಡಿನ ಗೀತ ಗಾಯನ ರಸಮಂಜರಿ ಹಾಗೂ ಸಾಹಿತ್ಯ ಸಂಸ್ಕೃತಿಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಾ ಬಂದಿದ್ದಾರೆ, ಈ ಬಾರಿ ಯುವರತ್ನ ಡಾ, ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಕನ್ನಡದ ಯುವರತ್ನ ಕುಣಿತ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಯುವ ಪತ್ರಕರ್ತ ಹುಸೇನ ಮೊತೇಖಾನ ಅವರಿಗೆ ಬೆಂಗಳೂರಿನಲ್ಲಿ ಶನಿವಾರ ನಡೆದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರಿನ ಎಸ್.ಎಸ್.ಕಲಾ ಸಂಗಮ ಇವರು ಕನ್ನಡ ರಾಜರತ್ನ ಸವಿ ನೆನಪಿಗಾಗಿ ಎ.ವಿ. ವರದಚಾರ ಮೆಮುರಿಯಲ್ ಹಾರ್ಟ ಮಲ್ಲೇಶ್ವರಂನಲ್ಲಿ ಹಮ್ಮಿಕೊಂಡಿದ್ದ ಯುವ ರತ್ನ ಅಪ್ಪು ಗೀತಾ ಗಾಯನ, ರಸ ಮ೦ಜರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಲಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದ ರ್ಭದಲ್ಲಿ ತಾಲೂಕಿನ ಮುಧೋಳ ಗ್ರಾಮದ ಯುವ ಪತ್ರಕರ್ತರಾದ ಹುಸೇನ ಮೊತೇಖಾನ ಅವರನ್ನು ಗೌರವಿಸಿ,ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.ಈ ಸಂದರ್ಭ ದಲ್ಲಿ ಖ್ಯಾತ ಗಾಯಕ,ನಟ, ಶಶಿಧರ ಕೋಟೆ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಕಲಾ ಸಂಗಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಶಿವಕುಮಾರ, ಡಾ.ಸತ್ಯವಾತಿ, ಬಸವರಾಜ, ಡಾ.ಅಂಜನಪ್ಪ ಸೇರಿದಂತೆ ಮತ್ತಿತರರು ಇದ್ದರು.
ವರದಿ – ಸಂಪಾದಕೀಯ
ಅಭಿನಂದನೆಗಳು..
ಧನ್ಯವಾದಗಳು ಗುರುಗಳೆ