ತಾವರಗೇರಾ ಪ.ಪಂ.ಮುಂದೆ ವಿವಿದ ಬೇಡಿಕೆ ಇಡೆರಿಕೆಗಾಗಿ ಹಮ್ಮಿಕೊಂಡ ಮುಷ್ಕರ್ ಹಿಂದಕ್ಕೆ.
ತಾವರಗೇರಾ ಪಟ್ಟಣ ಪಂಚಾಯತಿಗೆ ಸಂಬಂದಪಟ್ಟಂತೆ ಹಲವು ಸಮಸ್ಯಗಳ ಕುರಿತು ಸಾಕಷ್ಟು ಸಾರಿ ಹೋರಾಟ ಹಾಗೂ ಅರ್ಜಿ ಸಲ್ಲಿಸಿದರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವರ್ಗದ ವಿರುದ್ದು ಕರ್ನಾಟಕ ನವ ನಿರ್ಮಾಣ ಸೇನೆವತಿಯಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಂಡ ಮುಷ್ಕರ್ ನಿನ್ನೆ ಸಂಜೆಯೊಳಗೆ ಹಿಂದಕ್ಕೆ ತಗದುಕೊಂಡರು.
ತಾವರಗೇರಾ ಪಟ್ಟಣಕ್ಕೆ ಸಂಬಂದಿಸಿದ ಮೂಲಭೂತ ಸೌಕರ್ಯಗಳನ್ನು ಇಡೇರಿಸಲು ಕಳೆದ 2-3ವರ್ಷಗಳಿಂದಲೂ ಪಟ್ಟಣ ಪಂಚಾಯತ ಅಡಳಿತ ವರ್ಗಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ದಿನ ನಿತ್ಯ ಸಾರ್ವಜನಿಕರಿಗೆ ಅವಶ್ಯವಿರುವ ಸಾರ್ವಜನಿಕ ಸಾಮೂಹಿಕ ಮಹಿಳಾ ಶೌಚಾಲಯ , ಚರಂಡಿ ಸ್ವಚ್ಛಗೊಳಿಸುವದು , ಸುಸರ್ಜಿತವಾದ ಸಿ.ಸಿ ರಸ್ತೆ , ವಿದ್ಯುತ್ ದೀಪ ಅಳವಡಿಕೆ ಯಂತಹ ಮೂಲ ಸೌಕರ್ಯಗಳನ್ನು ಇಡೇರಿಸುವಲ್ಲಿ ಪಟ್ಟಣ ಪಂಚಾಯಾತಿ ಸಂಪೂರ್ಣ ವಿಫಲವಾಗಿದೆ ಎಂದು ನೇರವಾಗಿ ಆರೋಪದಗಳನ್ನು ಇಟ್ಟುಕೊಂಡು ನಿನ್ನೆ ಬೆಳಗ್ಗೆಯಿಂದ ಮದ್ಯಾಹ್ನದ ವೇಳೆಯಲ್ಲಿ ಪ.ಪಂ. ಮುಖ್ಯಾಧಿಕಾರಿಗಳು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಮನ ಹೋಲಿಸಿದರು ಬಗ್ಗದೆ ಹೋರಾಟ ಮುಂದುವರೆಯಿತು, ತದ ನಂತರ ಪಟ್ಟಣದ ನಾಡ ಕಚೇರಿಯ ಉಪಾ-ತಹಶೀಲ್ದಾರ ಹಾಗೂ ನಾಡ ಕಚೇರಿಯ ಸಿಬ್ಬಂದಿ ವರ್ಗದವರ ಜೊತೆಗೆ ಪ.ಪಂಚಾಯತಿಯ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗಗಳ ನೇತೃತ್ವದಲ್ಲಿ ಧರಣಿ ನಿರತರಲ್ಲಿ ಹಲವು ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವಲ್ಲಿ ಪ್ರಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಅಧಿಕಾರಿಗಳ ವರ್ಗ ಮನವಿ ಮಾಡಿದಾಗ, ಧರಣಿ ನಿರತರು ಇವರ ಮನವಿಗೆ ಸ್ಪಂದಿಸಿ ಮಾನ್ಯ ನಾಡ ಕಚೇರಿಯ ಉಪಾ-ತಹಶೀಲ್ದಾರ ವಿಜೇಯಲಕ್ಷ್ಮೀ ಹಾಗೂ ತಲಾಟಿಯವರಾದ ಸುರ್ಯಕಾಂತರವರು, ಹಾಗೂ ಪ.ಪಂ.ಯ ಜೋ಼ಷಿಯವರು, ಹಳ್ಳದಮನಿ ಶ್ಯಾಮಣ್ಣರವರು, ಪ್ರಣೇಸಿ ಬಳ್ಳಾರಿಯವರು, ಕ.ನ.ಸೇ ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ಧನಗೌಡ ಪುಂಡಗೌಡ್ರು ನಗರ ಘಟಕದ ಅಧ್ಯಕ್ಷರಾದ ನಬಿ ಸಾಬ್ ನವಲಿ, ಹಿರಿಯ ಹೋರಾಟಗಾರರಾದ ಆನಂದ್ ಭಂಡಾರಿ, ಯಮನೂರಪ್ಪ ಬಿಳ್ಳೆದಗುಡ್ಡ, ಮೌನೇಶ್ ಜಗ್ಗು, ಹನುಮನಗೌಡ, ದೇವಣ್ಣ, ವೆಂಕಟೇಶ್, ದೊಡ್ಡಬಸವ ,ಕುಮಾರ್ ,ರವಿ ಆರೇರ್, ಖಾಜಾಖಾನ, ಪೋಲಿಸ್ ಇಲಾಖೆಯವರು ಸಹ ಭಾಗಿಯಾಗಿದ್ದರು.
ವರದಿ – ಸಂಪಾದಕೀಯ