ಆರ್ಥಿಕವಾಗಿ ದುರ್ಬಲರಾದ ರೋಗಿಗಳ ಚಿಕಿತ್ಸೆಗೆ ಬಲ ನೀಡಿದ ಟ್ರಸ್ಟ್ ವೆಲ್ ಫೌಂಡೇಶನ್ ಸಂಗೀತ ಸಂಜೆ…..
ಬೆಂಗಳೂರು ಜೂನ್ 28: ಆರ್ಥಿಕವಾಗಿ ದುರ್ಬಲರಾದ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಟ್ರಸ್ಟ್ ವೆಲ್ ಫೌಂಡೇಶನ್ ನ ಸಂಗೀತ ಸಂಜೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಹೆಚ್ಚಿನ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಹೆಚ್.ವಿ ಮಧುಸೂಧನ್ ತಿಳಿಸಿದರು. ಭಾನುವಾರದಂದು ಕೋರಮಂಗಲದ ಸೆಂಟ್ ಜೋಸೇಫ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಧ್ವನಿ ಸಂಗೀತ ಸಂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್ಥಿಕವಾಗಿ ದುರ್ಬಲರಾಗಿರುವ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಬೇಕು ಎನ್ನುವುದು ನಮ್ಮ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ವೆಲ್ ಫೌಂಡೇಶನ್ ಪ್ರಾರಂಭಿಸಿದ್ದು, ನಿಧಿ ಸಂಗ್ರಹಕ್ಕೆ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ಫೌಂಡೇಶನ್ ನಿಧಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಈ ನಿಧಿಯನ್ನು ನಾವುಗಳು ಬಡ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಗೆ ಬಳಸಲಿದ್ದೇವೆ. ಅಲ್ಲದೇ ನಮ್ಮ ಆಸ್ಪತ್ರೆಯ ವತಿಯಿಂದಲೂ ಅವರಿಗೆ ಅಗತ್ಯ ಸಹಾಯ ಮಾಡಲಿದ್ದೇವೆ ಎಂದು ಹೇಳಿದರು. ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಗುರುಕಿರಣ್, ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಅನುರಾಧಾ ಭಟ್ ಅವರು ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುವಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಡಾ. ದೀಪಕ್ ಹಳ್ದೀಪುರ, ಡಾ. ಚಂದ್ರಶೇಖರ್, ಕೋ ಫೌಂಡರ್ ಮೇಲಾ ವೆಂಚರ್ಸ್ ಎನ್ ಎಸ್ ಪಾರ್ಥ ಸಾರಥಿ, ಜುವೆಂಟ್ಸ್ ಹೆಲ್ತ್‌ಕೇರ್ ನ ಪ್ರಕಾಶ್ ಕುಮಾರ್ ಗುಹಾ ಉಪಸ್ಥಿತರಿದ್ದರು. ವರದಿ – ಹರೀಶ ಶೇಟ್ಟಿ ಬೆಂಗಳೂರು