ಮಾಧ್ಯಮ ಕ್ಷೇತ್ರಕ್ಕೆ ಧಕ್ಕೆ ತರುತ್ತಿರುವ ಧಗಲ್ ಭಾಜಿ ಪತ್ರಕರ್ತರು.
ಪತ್ರಿಕಾ ಮಾಧ್ಯಮದ ದಕ್ಷೆ,ನಿಷ್ಠೆ, ಪ್ರಾಮಾಣಿಕತೆಗೆ ನಿರಂತರ ಧಕ್ಕೆ ಉಂಟು ಮಾಡುತ್ತಿರುವ ಧಗಲ್ ಭಾಜಿ ಪತ್ರಕರ್ತರು, ಸತ್ಯಾಸತ್ಯತೆ, ಧೈರ್ಯ, ಸಾಹಸ,ನಿಷ್ಪಕ್ಷಪಾತ ಹಾಗೂ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಮಾಧ್ಯಮ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿದೆ. ಸರ್ಕಾರದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮತ್ತು ಆಡಳಿತ ವರ್ಗದಲ್ಲಿನ ಲೋಪದೋಷಗಳನ್ನು ಕಾನೂನುಬದ್ಧವಾಗಿ ಎತ್ತಿ ತೋರಿಸಿ, ತೀವ್ರವಾಗಿ ಟೀಕಿಸಿ ಮತ್ತೆ ಅವುಗಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿ, ದೇಶದ ಹಿತ ಬಯಸುವುದು ಪವಿತ್ರ ಪತ್ರಿಕಾರಂಗದ ಮುಖ್ಯ ಕೆಲಸವಾಗಿದೆ. ಇಂತಹ ಮಾಧ್ಯಮವನ್ನು ಇತ್ತೀಚಿನ ದಿನಗಳಲ್ಲಿ ಲಜ್ಜೆಗೆಟ್ಟ ಕೆಲವು ದಗಲ್ ಬಾಜಿಗಳು, ಬ್ಲಾಕ್ ಮೇಲ್ ತಂತ್ರವನ್ನು ಉಪಯೋಗಿಸುವ, ಹರಾಮಿಗಳು ತಮ್ಮ ದುರಾಸೆ, ಸ್ವಾರ್ಥ, ವೈಯಕ್ತಿಕ ಅನುಕೂಲಕ್ಕಾಗಿ ಮಾಧ್ಯಮ ಕ್ಷೇತ್ರವನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪತ್ರಿಕೆಯ ಸಂಪಾದಕ, ಹಾಗೂ ವರದಿಗಾರನಾಗಲು ಕೆಲವು ಅರ್ಹತೆಗಳಿವೆ. ಅವನು ಶೈಕ್ಷಣಿಕವಾಗಿ ಪ್ರಬುದ್ಧನಾಗಿರಬೇಕು. ಉತ್ತಮ ಬರಹಗಾರನಾಗಿರಬೇಕು, ಪತ್ರಿಕೆಯ ನೈತಿಕ ಮೌಲ್ಯಗಳನ್ನು ಅರಿತಿರಬೇಕು, ಅನ್ಯಾಯವನ್ನು ಖಾರವಾಗಿ ಟೀಕಿಸಿ, ಭ್ರಷ್ಟಾಚಾರದ ಕಾರ್ಯಗಳನ್ನು ಖಂಡಿಸಿ, ನಿಯತ್ತಿಗೆ ಹೆಸರಾಗಿರಬೇಕು. ಆದರೆ ದುಷ್ಟ, ದುರುಳರಾದ ಕೆಲವು ಅನರ್ಹ ಲಫಂಗ , ಹಾಗೂ ದಘಾಕೋರ ಪತ್ರಕರ್ತರೆಂದು ಹೇಳಿಕೊಳ್ಳುವವರು ಭ್ರಷ್ಟ ಅಧಿಕಾರಿಗಳ ಜೊತೆ ಕೈ ಜೋಡಿಸಿ “ನಿಮ್ಮ ಜೊತೆ ನಾವಿದ್ದೇವೆ. ನಮಗೆ ತಿಂಗಳ ಮಾಮೂಲಿ ಕೊಟ್ಟರೆ ಸಾಕೆಂದು” ಹೇಸಿಗೆ ತಿಂದು, ಎಂಜಲು ನೆಕ್ಕುವ ನಾಯಿಯಂತೆ ಬಾಯಿತೆರೆದು ನಿಂತಿದ್ದಾರೆ. ಈ ರೀತಿ ಮಾಡುವುದರಿಂದ ಇವರೇ ಶ್ರೇಷ್ಠರೆಂದು ಹೇಳುವ ಕೆಲವು ಭ್ರಷ್ಟ ಅಧಿಕಾರಿಗಳು ಇಂತವರು ನನ್ನ ಕೂಡ ಹೊಂದಾಣಿಕೆ ಇದ್ದರೆ ಸಾಕು ಎನ್ನುವ ಭ್ರಮೆಯಿಂದ ಹೊರ ಬಂದರೆ ಅವರಿಗೆ ಒಳ್ಳೆಯದು, ಇಲ್ಲವಾದರೆ ಕೆಟ್ಟ ಕೆಲಸ ಮಾಡುವ ನಿಮಗೆ ಒಂದಲ್ಲ ಒಂದು ದಿನ ನಿಮ್ಮನ್ನು ಕಾಲವೇ ಉತ್ತರ ನೀಡಿದೇ ಬಿಡೋಲ್ಲ. ದುಷ್ಟ ಕಾರ್ಯವನ್ನು ಟೀಕಿಸಿ ಮಟ್ಟ ಹಾಕಬೇಕಾದವರೆ ಅವರ ಜೊತೆ ಶಾಮೀಲಾಗಿ ಕೈ ಜೋಡಿಸಿದರೆ ನ್ಯಾಯ ದೇವತೆಗೆ, ಪತ್ರಿಕಾ ಸ್ವಾತಂತ್ರ್ಯದ ಮೌಲ್ಯಕ್ಕೆ ಎರಡು ಬಗೆದಂತಾಗಿ, ಪತ್ರಿಕಾ ರಂಗದ ಪಾವಿತ್ರ್ಯತೆಗೆ ಮಸಿ ಬಳಿದಂತಾಗುತ್ತದೆ ಎಂದು ನಿಮಗನಿಸುವುದಿಲ್ಲವೇ..? ಇತ್ತೀಚೆಗೆ ಅಪ್ರಬುದ್ಧರು, ಕಾನೂನು ಅರಿಯದವರು, ಅರ್ಧಂ ಬರ್ಧ ಶಿಕ್ಷಣ ಪಡೆದ ಅಯೋಗ್ಯರು, ಹಮಾಲಿ ಕೆಲಸ ಮಾಡುವವರು, ದನ ಕಾಯುವವರು, ಕೈಯಲ್ಲಿ ಪೆನ್ನು ಸಹ ಹಿಡಿಯಲಿಕ್ಕೆ ಬಾರದವರು, ಹೆಸರಿಗೆ ಒಂದು ಟೈಟಲ್ ತರಿಸಿಕೊಂಡು ಪೇಪರ್ ಪ್ರಿಂಟ್ ಮಾಡದೇ ಅಮಾವಾಸ್ಯೆ, ಹುಣ್ಣಿಮೆಗೆ, ಅಥವಾ ಯಾವುದೇ ಒಂದು ದೊಡ್ಡ ರಾಷ್ಟ್ರೀಯ ಹಬ್ಬಗಳ ದಿನದಂದು ಪ್ರಿಂಟ್ ಮಾಡಿರುವ ಹಳೆಯ ಪತ್ರಿಕೆಗಳ ಮೇಲೆ ಇಲಾಖೆ, ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಿ ಹಣ ಕೆತ್ತಲು ತಿರುಗಿದ್ದೇ ತಿರುಗಿದ್ದು ಇವರಿಗೆ ಅಧಿಕಾರಿಗಳು ಸ್ಪಂದಿಸಿ ಬಹಳ ಗೌರವ ಕೊಡುತ್ತಾರೆ ಎಂದು ನಕಲಿ ಪತ್ರಕರ್ತರು ಹೇಳಾಡಿಕೊಂಡು ಬಿದ್ದು ಬಿದ್ದು ನಕ್ಕು ಹೇಳುತ್ತಾರೆ. ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿ ಎಂಬ ಚಾಂಡಾಲರಿಗೆ ಸಹಕಾರ ನೀಡುತ್ತಿರುವುದನ್ನು ನೋಡಿದರೆ ನನ್ನ ಬಿಸಿರಕ್ತ ಉಕ್ಕಿ ಕುದಿಯುತ್ತದೆ. ಅದೇನೇ ಇರಲಿ ಉತ್ತಮ ಅಧಿಕಾರಿಗಳು ಇಂತವರ ಮಧ್ಯದಲ್ಲಿ ಶೇ 60% ಇದ್ದಾರೆ ಅವರನ್ನು ಆತ್ಮೀಯವಾಗಿ ಗೌರವದಿಂದ ಕಾಣಬೇಕೆನ್ನುವುದು ನಮ್ಮ ಪತ್ರಿಕೆಯದ್ದಾಗಿದೆ.
ದೇಶದ ಮಾಧ್ಯಮ ಕ್ಷೇತ್ರಕ್ಕೆ ಮಾರಿಯಾಗುತ್ತಿರುವ ನೀಚ ಹರಾಮಕೋರ್ ಪತ್ರಕರ್ತರಿಂದ ನಿಜವಾದ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ನಿಷ್ಠುರ, ಪ್ರಾಮಾಣಿಕ ಪತ್ರಕರ್ತರಿಗೂ ಕೆಟ್ಟ ಹೆಸರು ಬಂದು ಕಳಂಕಿತರೆನಿಸಿಕೊಳ್ಳುತ್ತಿದ್ದಾರೆ. ಯೋಗ್ಯರಲ್ಲದವರ ಪತ್ರಿಕೆಗೆ ಸಮ್ಮತಿ ನೀಡಿದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಲೇ ಸರಕಾರ ಎಚ್ಚೆತ್ತುಕೊಂಡು ಅಂತಹ ನಿಕೃಷ್ಟ ಅಯೋಗ್ಯರು ಪತ್ರಕರ್ತರ ಸೋಗಿನಲ್ಲಿ ಮಾಡುತ್ತಿರುವ ಅನಾಚಾರಗಳನ್ನು ಮಟ್ಟ ಹಾಕಬೇಕು.ಸರ್ಕಾರಿ ವಿವಿಧ ಇಲಾಖೆಗಳ, ಗ್ರಾಮ ಪಂಚಾಯತಿಗಳ, ಇನ್ನಿತರ ವಿಭಾಗಗಳಲ್ಲಿ ನಡೆಯುವ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯುವ ಧೈರ್ಯ ಮಾಡದೆ, ಅಧಿಕಾರಿಗಳ ಮೇಲೆ ಧಾಢಸಿ ಮಾಡಿ ಗಿಂಬಳದಿಂದ ಸಂಪಾದಿಸಿದ ಸುಂಬಳವನ್ನು (ಲಂಚ) ಲಂಚಬಾಕರಾಗಿ ತಿಂದು ತೇಗಿ ನಕಲಿ ಐ. ಡಿ. ಕಾರ್ಡ್ ಹೀರೋಗಳಾಗಿ ಮೆರೆಯುತ್ತಿದ್ದಾರೆ. ಅಂತವರ ಪತ್ರಿಕೆಯ ನೋಂದಣಿಯನ್ನು ರದ್ದುಗೊಳಿಸಿ ಕಾನೂನಿನ ಚೌಕಟ್ಟಿನಲ್ಲಿ ತಕ್ಕ ಶಿಕ್ಷೆ ನೀಡಬೇಕು. ಪತ್ರಿಕೆಯ ಪಾವಿತ್ರ್ಯತೆಯನ್ನು ಕಲ್ಮಶಗೊಳಿಸುತ್ತಿರುವ ಕುಟಿಲ ಬುದ್ಧಿಯ ಕುಳಗಳ ನಿರ್ನಾಮ ಆಗುವವರೆಗೂ ಪ್ರಾಮಾಣಿಕ ಪವಿತ್ರ ಪತ್ರಕರ್ತರಿಗೆ ಕಳಂಕ ತಪ್ಪಿದ್ದಲ್ಲ. ದೇಹ,ಪ್ರಾಣ ಬದಿಗೊತ್ತಿ ಹುಮ್ಮಸ್ಸಿನಿಂದ ನಿಮ್ಮ ಬರವಣಿಗೆಯ ಮೂಲಕ ಜನಮಾನಸದ ಕಾರ್ಯ ದೇಶಕ್ಕೆ ಅರ್ಪಿತವಾಗಲಿ, ಎಂದು ನಮ್ಮ ಪತ್ರಿಕೆ ಸರ್ವ ಪತ್ರಿಕೆಯ ಸಂಪಾದಕರು ಮತ್ತು ವರದಿಗಾರರು, ವಿವಿಧ ರೀತಿಯ ಪತ್ರಕರ್ತರಲ್ಲಿ ತಿಳಿಸುವ ಮೂಲಕ ಶುಭ ಹಾರೈಸುತ್ತೇನೆ.