ತಾವರಗೇರಾ ಪಟ್ಟಣದಲ್ಲಿ ಜನ ಜಂಗೂಳ್ಳಿ, ಜನ ಮರಳು, ಜಾತ್ರೆ ಮರಳು,
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಷ್ಟು ದಿವಸ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಜನತ ಕರ್ಪ್ಯೂ ವಿಕೆಂಡ್ ಲಾಕಡೌನ್ , ಲಾಕಡೌನ್ ಅಂತಾ ಕ್ರಮಗಳನ್ನು ತೆಗೆದುಕೊಂಡುರು ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗೆ ಸಾವಿನ ಸಂಖ್ಯೆಯಲ್ಲಿ ಅತಿ ಹೆಚ್ಚು 500 ರ ಗಡಿ ದಾಟಿದೆ, ಸರ್ಕಾರ ಏನೆ ನಿರ್ಧಾರ ತೂಗಳ್ಳಲಿ ಬಿಡಲಿ ನಮ್ಮ ಜೀವನ ನಮ್ಮ ಕೈಯಲ್ಲಿ ನಾವು ಕಾಪಾಡಿಕೊಳ್ಳೋಣ ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೋರೋನಾ ರೋಗದ ವಿರುದ್ಧ ಹೋರಾಡಿ ನಮ್ಮ ನಮ್ಮ ಜೀವನ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿ. ಸರ್ಕಾರ ಲಾಕಡೌನ್ ಕುರಿತು ಮಹತ್ವವಾದ ಘೋಷಣೆ ಮಾಡಿದರು ಜನರು ಎಚ್ಚತ್ತುಕೊಳ್ಳದೆ, ಸಾಮಾಜೀಕ ಅಂತರ ಪಾಲೀಸದೆ ಒಬ್ಬರ ಮೇಲೋಬ್ಬರು ಮುಗಿ ಬಿದ್ದು ತಾವರಗೇರಾ ಪಟ್ಟಣದ ಪ್ರತಿಯೊಂದು ಅಂಗಡಿ ಮುಂಗ್ಗಟ್ಟುಗಳಲ್ಲಿ ಜನ ಜಂಗೂಳಿಯ ರೀತಿಯಲ್ಲಿ ವ್ಯವಾಹರ ಮಾಡುತ್ತಿದ್ದಾರೆ. ಅಂಗಡಿ ಮಾಲೀಕರು ಕರೋನದ ಹೆಸರಿನಲ್ಲಿ ಜನ ಮರಳು, ಜಾತ್ರೆ ಮರಳು ಅನ್ನುವಂತೆ ಗ್ರಹಕರಿಂದ ವ್ಯವಾಹರಿಸುತ್ತಿದ್ದಾರೆ, ಒಟ್ಟಿನಲ್ಲಿ ಆರೋಗ್ಯ ಇಲಾಖೆಯವರು ಈ ಜನ ಮರಳು, ಜಾತ್ರೆ ಮರಳು ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಗ್ರಾಹಕರೇ ಅರ್ಥ ಮಾಡಿಕೊಳ್ಳಿ ಒಮ್ಮೆ ಜಾರಿ ಹೋದ ಪ್ರಾಣ ಪಕ್ಷಿ ಮರಳಿ ಬಾರದು, ಬಂದುಗಳೆ ಎಚ್ಚತ್ತುಕೊಳ್ಳಿ. ವರದಿ – ಅಮಾಜಪ್ಪ ಹೆಚ್.ಜುಮಲಾಪೂರ.