ಕನಕಗಿರಿ–ಬಳ್ಳಾರಿ ಪುನಃ ಬಸ್ ಸಂಚಾರ ಪ್ರಾರಂಭ,,,,
ಕನಕಗಿರಿ: ಪಟ್ಟಣದಿಂದ ಬಳ್ಳಾರಿಗೆ 47 ವರ್ಷಗಳಿಂದ ಸಂಚರಿಸುತ್ತಿದ್ದ ಬಸ್ ಕರೋನ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕನಕಗಿರಿ-ಬಳ್ಳಾರಿ ಬಸ್ ಪುನಃ ಸಂಚಾರ ಪ್ರಾರಂಭ ಆಗಿರುವ ಕಾರಣ ಪಟ್ಟಣದ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಲ್ಲಿ ಭಾನುವಾರ ಪುನಃ ಬಸ್ ಸಂಚಾರ ಪ್ರಾರಂಭ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ ಕನಕಗಿರಿ ಯಿಂದ ಬಳ್ಳಾರಿಗೆ ಬೆಳಿಗ್ಗೆ ತೆರಳುವ ಬಸ್ ನ ಅವಶ್ಯಕತೆ ಸಾರ್ವಜನಿಕರಿಗೆ ಅತ್ಯಗತ್ಯ ಆಗಿತ್ತು , ಸದರಿ ಸಮಸ್ಯೆಯನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ಪಟ್ಟಣದ ಪ್ರಮುಖರು ತಂದಿದ್ದರು, ಇತ್ತೀಚೆಗೆ ಪಟ್ಟಣಕ್ಕೆ ಜಿಲ್ಲಾಧಿಕಾರಿ ವಿಕಾಸ್ ಸುರಳ್ಕರ್ ಹಾಗೂ ಶಾಸಕ ಬಸವರಾಜ ದಡೇಸೂಗೂರು ರವರು ಆಗಮಿಸಿದ್ದ ವೇಳೆ ಪಟ್ಟಣದ ಪ್ರಮುಖರು ಬೇಡಿಕೆ ಈಡೇರಿಸುವಂತೆ ಗಮನ ಸೆಳೆದಿದ್ದರು.ಸದರಿಯವರು ವಾರದೊಳಗಾಗಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದರು, ಭರವಸೆಯಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಜಿಲ್ಲೆಯ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಪರಿಣಾಮವಾಗಿ ಇಂದು ಖುದ್ದು ಸಂಬಂಧ ಪಟ್ಟ ಅಧಿಕಾರಿಗಳು ಬಸ್ ಸಂಚಾರ ಪ್ರಾರಂಭ ಮಾಡಿರುವುದು ತಾಲೂಕಿನ ಜನತೆಯ ಸಂಚಾರಕ್ಕೆ ಅನುಕೂಲ ಆಗಿದೆ ಎಂದರು. ಬಳಿಕ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್ ಸೇರಿದಂತೆ ಇನ್ನಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಶೇಷಪ್ಪ ಪೂಜಾರ, ಪ್ರಮುಖರಾದ ರಂಗಪ್ಪ ಕೊರಗಟಗಿ, ರವೀಂದ್ರ ಸಜ್ಜನ್, ವಿರೇಶ್ ಕಡಿ, ಬಿ ವಿ ಜೋಶಿ,ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿಗಳು, ಮುಖಂಡರು ಹಾಗೂ ಹಿರಿಯರು ಪ್ರಯಾಣಿಕರು ಉಪಸ್ಥಿತರಿದ್ದರು. 3ಕೆಎನಕೆ-1 ಫೋಟೋ: ಕನಕಗಿರಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕನಕಗಿರಿ-ಬಳ್ಳಾರಿ ಗೆ ಪುನಃ ಬಸ್ ಸಂಚಾರ ಪ್ರಾರಂಭ ಕಾರ್ಯಕ್ರಮ ನಡೆಸಲಾಯಿತು.
ವರದಿ – ಆದಪ್ಪ ಮಾಲಿಪಾಟೀಲ್