ತಾವರಗೇರಾ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರಾ ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆಯ ಭಾಗವಾದ 112 ಬಗ್ಗೆ ಮಾಹಿತಿ…..

Spread the love

ತಾವರಗೇರಾ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರಾ ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆಯ ಭಾಗವಾದ 112 ಬಗ್ಗೆ ಮಾಹಿತಿ…..

ಒಂದೇ ಭಾರತ ಒಂದೇ ತುರ್ತು  ಕರೆ ಸಂಖ್ಯೆ 112 ಅನ್ನು ಕೇಂದ್ರ  ಸರ್ಕಾರ ಜಾರಿಗೊಳಿಸಿದೆ. ಈ ಹಿಂದೆ ತುರ್ತು ಸಮಯದಲ್ಲಿ  ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್​ ಸೇವೆಗೆ ವಿವಿಧ ಬೇರೆ ಬೇರೆ ನಂಬರ್​​ ಗೆ ಕರೆ ಮಾಡಬೇಕಿತ್ತು. ಇದರಿಂದ  ಸಾರ್ವಜನಿಕರು ಸಹ ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಎಲ್ಲಾ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ  112 ಆಗಿ ಬದಲಾಯಿಸಲಾಗಿದೆ. ತುರ್ತು ಸೇವೆಗಳನ್ನು ಪಡೆಯಲು ಈ ಹಿಂದೆ ವ್ಯಕ್ತಿ ಆ್ಯಂಬುಲೆನ್ಸ್, ಅಗ್ನಿಶಾಮಕ  ಮತ್ತು ಪೊಲೀಸ್ ಇಲಾಖೆಗೆ ಬೇರೆ ಬೇರೆ ನಂಬರ್ ಗೆ ಕರೆ ಮಾಡಬೇಕಿತ್ತು. ಈ ಬಗ್ಗೆ  ಸಾರ್ವಜನಿಕರಲ್ಲಿ ಸಾಕಷ್ಟು  ಗೊಂದಲ ಇತ್ತು.  ಈ ಗೊಂದಲಗಳಿಗೆ  ಪರಿಹಾರ ಕಂಡುಹಿಡಿಯುವ  ಉದ್ದೇಶದಿಂದ ಕೇಂದ್ರ  ಸರ್ಕಾರದ ಒಂದೇ ಭಾರತ ಒಂದೇ ತುರ್ತು ಕರೆ 112 ಜಾರಿ ಮಾಡಿದೆ. ಕರ್ನಾಟಕದಲ್ಲಿ   ಪ್ರಾಯೋಗಿಕವಾಗಿ  5 ಜಿಲ್ಲೆಗಳಲ್ಲಿ 112 ತುರ್ತು ಕರೆ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ  ಜಿಲ್ಲೆ ಸಹ ಈ ವ್ಯವಸ್ಥೆಗೆ ಸೇರ್ಪಡೆಗೊಂಡಿದೆ.  ತುರ್ತು  ಸಮಯದಲ್ಲಿ  ತೊಂದರೆಗೊಳಗಾದ ವ್ಯಕ್ತಿಯನ್ನ   ಮೊದಲು ಸಂಪರ್ಕಿಸುವುದು ಪೊಲೀಸ್ ಸಿಬ್ಬಂದಿ. ಅಪಘಾತ ಇರಲಿ, ಅಪರಾಧವಾಗಿರಲಿ ಮತ್ತು ವಿಪತ್ತು ಆಗಿರಲಿ ಆ ಸ್ಥಳಕ್ಕೆ ಮೊದಲು ತಲುಪುದು  ಪೊಲೀಸ್ ಇಲಾಖೆ.  ತೊಂದರೆಗೊಳಗಾದ ವ್ಯಕ್ತಿಗೆ ತಕ್ಷಣಕ್ಕೆ ಬೇಕಾದ ನೆರವು ನೀಡಿ ಆತನ ರಕ್ಷಣೆ ಮಾಡುತ್ತೆ, ಈ ಕಾರಣದಿಂದ ಪೊಲೀಸ್  ಇಲಾಖೆ 112  ತುರ್ತು ಕರೆಯ ಪೋರ್ಟಲ್ ವ್ಯವಸ್ಥೆ ಜಾರಿಗೆ ತರುತ್ತಿದೆ. 112 ಆ್ಯಪ್ ಅನ್ನು  ಸಹ ಬಿಡುಗಡೆ ಮಾಡಿದೆ.  ಸ್ಮಾರ್ಟ್ ಫೋನ್​​ನಲ್ಲಿ  ಈ ಆ್ಯಪ್​​​ ಅನ್ನು ಡೌನ್ ಲೋಡ್  ಮಾಡಿಕೊಳ್ಳಬಹುದು. ಅದೇರೀತಿ ನಮ್ಮ ಭಾಗದಲ್ಲಿ ರಾತೊ ರಾತ್ರಿ ಮರಳು (ಉಸುಗು) ದಂಧೆ ನಡೆಯುತ್ತಿದ್ದರೆ ತಕ್ಷಣವೆ ಕರೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬಹುದು ಎಂದರು. ಸ್ಥಳದಲ್ಲಿ 112 ಅಧಿಕಾರಿಗಳು ಹಾಗೂ ತಾವರಗೇರಾ ಸಾರ್ವಜನಿಕರು ಭಾಗಿಯಾಗಿದ್ದರು.

ವರದಿಸಂಪಾದಕೀಯ

Leave a Reply

Your email address will not be published. Required fields are marked *