ಜಗಜೀವನರಾಂ ಮತ್ತು ಶಾಂ ಪ್ರಕಾಶ್ ಮುಖರ್ಜಿ ಮರೆಯದ ಮಾಣಿಕ್ಯಗಳು: ಸಂಗಪ್ಪ ಹಳ್ಳಿಗುಡಿ…..
ಕನಕಗಿರಿ: ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ ಬಾಬು ಜಗಜೀವನರಾಂ ಮತ್ತು ಬಿಜೆಪಿ ಜನಸಂಘದ ಸಂಸ್ಥಾಪಕ ಶ್ರೇಷ್ಠ ಸಂಸಧಿಯ ಪಟು ಡಾ.ಶಾಮ್ ಪ್ರಕಾಶ್ ಮುಖರ್ಜಿ ಅವರುಗಳು ದೇಶ ಕಂಡ ಅಪರೂಪದ ವ್ಯಕ್ತಿತ್ವ ಉಳ್ಳವರಾಗಿದ್ದು, ಈರ್ವರೂ ಎಂದು ಮರೆಯದ ಮಾಣಿಕ್ಯಗಳು ಎಂದು ಬಿಜೆಪಿ ಮುಖಂಡ ಸಂಗಪ್ಪ ಹಳ್ಳಿಗುಡಿ ಹೇಳಿದರು. ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿ ಜನ್ಮದಿನದ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗ ಜೀವನ್ ರಾಮ್ ರವರ ಪುಣ್ಯ ಸ್ಮರಣೆ ಪ್ರಯುಕ್ತ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ ಬಾಬು ಜಗಜೀವನರಾಂ ರವರು ಅಸ್ಪೃಶ್ಯತೆ ನಿವಾರಣೆ ತೊಡೆಯುವ ನಿಟ್ಟಿನಲ್ಲಿ ದೊಡ್ಡ ಹೋರಾಟ ಮಾಡುವುದಲ್ಲದೆ, ದೇಶದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿರುವ ಪ್ರಯುಕ್ತ ಹಸಿರು ಕ್ರಾಂತಿಯ ಹರಿಕಾರ ಎಂದೆ ಖ್ಯಾತಿಯಾಗಿದ್ದಾರೆ , ಜನಸಂಘದ ಸಂಸ್ಥಾಪಕ ಡಾ ಶಾಮ್ ಪ್ರಕಾಶ್ ಮುಖರ್ಜಿ ರವರು ಉತ್ತಮ ಸಂಸಧಿಯ ಪಟು ಅಷ್ಟೇ ಅಲ್ಲದೆ ಉತ್ತಮ ಸಿದ್ದಾಂತ ಮತ್ತು ತತ್ತ್ವಗಳನ್ನು ಹೊಂದಿದವರಾಗಿದ್ದರು, ತ್ಯಾಗ ಜೀವಿಗಳಾದ ಕಾರಣ ಬಿಜೆಪಿ ಪಕ್ಷ ಉಗಮಕ್ಕೆ ಅವರೇ ಕಾರಣಿಕರ್ತರು ಎಂದರು. ಈ ಸಂದರ್ಭದಲ್ಲಿ ಪ್ರಕಾಶ್ ಹಾದಿಮನಿ,ಮಂಜುನಾಥ ರೆಡ್ಡಿ ಮಾದಿನಾಳ, ರಂಗಪ್ಪ ಕೊರಗಟಗಿ,ಶಶಿಧರ ಹುಲಸನಹಟ್ಟಿ, ವಿರೇಶ್ ಕೆಸರಹಟ್ಟಿ, ಹುಲುಗಪ್ಪ ಹಿರೇಮಾದಿನಾಳ,ಉಮೇಶ್ ಮ್ಯಾದರ್,ವೆಂಕಟೇಶ್ ಪೂಜಾರ, ಕನಕಪ್ಪ ಮ್ಯಾಗಡೆ ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು. ಫೋಟೋ: ಕನಕಗಿರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿ ಜನ್ಮದಿನದ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗ ಜೀವನ್ ರಾಮ್ ರವರ ಪುಣ್ಯ ಸ್ಮರಣೆ ಪ್ರಯುಕ್ತ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ವರದಿ – ಆದಪ್ಪ ಮಾಲಿ ಪಾಟೀಲ್