ಕಾಮಗಾರಿ ಒಂದು ಪ್ರಯೋಜನ ಹಲವು: ಡಿ.ಡಿ ಕೃಷ್ಣ ಉಕ್ಕುಂದ್.
ಕನಕಗಿರಿ: ಕೆರೆ ಅಭಿವೃದ್ಧಿ ಎನ್ನುವುದು ಒಂದು ಕಾಮಗಾರಿ ಆದರೆ ಅದರ ಪ್ರಯೋಜನ ಹಲವು ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ಹೇಳಿದರು. ಅವರು ತಾಲೂಕಿನ ಕರಡೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಯತ್ನಟ್ಟಿ ಗ್ರಾಮದ ಅಮೃತ ಸರೋವರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಗ್ರಾಮೀಣಾ ಭಾಗದಲ್ಲಿ ಅಂರ್ತಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಈ ಬಾರಿಯೂ ಪ್ರತಿ ಗ್ರಾಮ ಪಂಚಾಯಿತಿ ಗಳ ವ್ಯಾಪ್ತಿಯಲ್ಲಿ ಅಮೃತ ಸರೋವರ ಎನ್ನುವ ಹೊಸ ಚಿಂತನೆಯೊಂದಿಗೆ ಗ್ರಾಮೀಣ ಭಾಗದ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಾದ್ಯಂತ 93 ಕೆರೆಗಳನ್ನು ಯೋಜನೆಯಡಿ ಆಯ್ಕೆ ಮಾಡಿಕೊಂಡಿದ್ದು, ಕೆರೆ ಗಳ ಅಭಿವೃದ್ಧಿಗೆ ಗ್ರಾ.ಪಂ ಗಳು ಮುಂದಾಗಿವೆ ಎಂದು ತಿಳಿಸಿದರು. ಬಳಿಕ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೆವಿ ಕಾವ್ಯ ರಾಣಿ ಮಾತನಾಡಿ ತಾಲೂಕಿನಲ್ಲಿ ೧೦ ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಈಗಾಗಲೇ ಎಲ್ಲಾ ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ನಡೆದಿದೆ. ಹಾಗೂ ಅಮೃತ ಸರೋವರ ಕಾಮಗಾರಿ ಪ್ರಯೋಜನಗಳ ಕುರಿತು ಅಮೃತ ಸರೋವರ ಯೋಜನೆಯ ಮೂಲಕ ಅಂರ್ತಜಲ ಮೂಲಗಳನ್ನು ಅಭಿವೃದ್ಧಿಗೊಳಿಸಿ. ಗ್ರಾಮೀಣ ಭಾಗದ ಜನರ ನೀರಿನ ಬವಣೆಯನ್ನು ಪರಿಹರಿಸುವುದು. ಕೆರೆಗಳನ್ನು ಅಭಿವೃದ್ಧಿಪಡಿಸುವುದರಿಂದ ಭೂ ಅಂರ್ತಜಲ ಪ್ರಮಾಣವು ಹೆಚ್ಚಾಗಲಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ಮಳೆನೀರನ್ನು ಹಿಡಿದಿಡುವ ಮೂಲಕ ಹರಿಯುವ ನೀರನ್ನು ಕುಂಟುವಂತೆ , ಕುಂಟುವ ನೀರನ್ನು ತೇವಳುವಂತೆ, ತೆವಳುವ ನೀರನ್ನು ಹಿಂಗುವಂತೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಕೆರೆ ಯಲ್ಲಿ ನೀರು ಸಂಗ್ರಹ ಮಾಡಲು ಸಾಧ್ಯವಾಗಲಿದೆ. ಇದರಿಂದ ಪರಿಸರ ಸಂರಕ್ಷಣೆ ಆಗಲಿದೆ. ಪ್ರಾಣಿ-ಪಕ್ಷಿಗಳಿಗೆ, ದನ-ಕರುಗಳಿಗೆ ಕುಡಿಯುವ ನೀರು, ಜನಸಾಮಾನ್ಯರಿಗೆ ಕುಡಿಯಲು, ದಿನನಿತ್ಯದ ಬಳಕೆಗೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರಣ್ಣ ನಕ್ರಳ್ಳಿ , ಗ್ರಾಮದ ಮುಖಂಡರಾದ ಮಾರುತೆಪ್ಪ ಗೌಡ್ರು, ತಾಂತ್ರಿಕ ಸಂಯೋಜಕ ತನ್ವೀರ್ , ಐ ಇ ಸಿ ಸಂಯೋಜಕ ಚಂದ್ರಶೇಖರ್, ತಾಂತ್ರಿಕ ಸಹಾಯಕ ಯೋಗೇಶ್ , ಗ್ರಾಮ ಪಂಚಾಯತಿ ಸಿಬ್ಬಂದಿ , ಕಾಯಕ ಬಂಧುಗಳು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಟಿ ಐ ಇ ಸಿ ಸಂಯೋಜಕ ಚಂದ್ರಶೇಖರ ಸ್ವಾಮಿ ಇದ್ದರು. ಫೋಟೋ ಕನಕಗಿರಿ: ತಾಲೂಕಿನ ಕರಡೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ನಟ್ಟಿ ಗ್ರಾಮದ ಅಮೃತ ಸರೋವರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ಮತ್ತು ತಾ.ಪಂ.ಇ.ಒ.ಕೆವಿ ಕಾವ್ಯ ರಾಣಿ ಭೇಟಿ ನೀಡಿ ನರೇಗಾ ಕಾರ್ಮಿಕರೊಂದಿಗೆ ಯೋಜನೆ ಕುರಿತು ಮಾಹಿತಿ ನೀಡಿದರು.
ವರದಿ – ಆದಪ್ಪ ಮಾಲಿ ಪಾಟೀಲ್.