ವಿಶೇಷ ಚೇತನ ಮಕ್ಕಳಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ: ಸಣ್ಣ ಕನಕಪ್ಪ,,,,,
ಕನಕಗಿರಿ: ಎಫ್ ಡಬ್ಲ್ಯೂ ಎಫ್ ( ಫೋರ್ಥ್ ವೇವ್ ಫೌಂಡೇಶನ್ ) ರವರು ನಮ್ಮ ಶಾಲೆಯ ಬಡ ವಿಶೇಷ ಚೇತನ ಮಕ್ಕಳಿಗೆ ಅಗತ್ಯವಾದ ಕೀಟ್ ವಿತರಣೆ ಮಾಡುವ ಮೂಲಕ ಸಹಾಯ ಮಾಡಿರುವುದು ಶ್ಲಾಘನೀಯ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಣ್ಣ ಕನಕಪ್ಪ ಹೇಳಿದರು. ಅವರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಫೋರ್ಥ್ ವೇವ್ ಫೌಂಡೇಶನ್ ವತಿಯಿಂದ ವಿಶೇಷ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಳಿಕ ಶಾಲಾ ಮುಖ್ಯ ಗುರುಗಳಾದ ಸುರೇಶ್ ಕುಮಾರ್ ಪತ್ತಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ದಾಖಲಾಗುವ ಮಕ್ಕಳಲ್ಲಿ ಹೆಚ್ಚಾಗಿ ಬಡ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳೇ ಇರುತ್ತಾರೆ ವಿಶೇಷವಾಗಿ ವಿಶೇಷ ಚೇತನರಿಗೆ ಬೇಕಾದ ಅಗತ್ಯ ಕಿಟ್ ಗಳನ್ನು ನೀಡಿರುವ ಸಂಸ್ಥೆಯ ಕೆಲಸ ವಿಶೇಷ ಚೇತನ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಲು ಸಹಕಾರಿ ಆಗಿದೆ ಎಂದರು. , ಇದೆ ವೇಳೆ ಪಾಮಣ್ಣ ಅರಳಿಗನೂರು, ಸಂಸ್ಥೆಯ ಸಂಯೋಜಕರಾದ ಕು.ಅಂಜನಾದೇವಿ, ನನಗೂ ಶಾಲೆ ” ಸಂಸ್ಥೆಯ ಕ್ಲೇರ್ ಮೇಡಂ ರಾಜ್ಯ ಸಂಯೋಜಕಿ, ಸಿಆರ್ಪಿ ಗಳಾದ ರಾಜೀವ್ ಮತ್ತು ಸಂಗಮೇಶ ಹಿರೆಮಠ ಮಾತನಾಡಿದರು. ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಶೇಷಪ್ಪ ಪೂಜಾರ, ಪ್ರಮುಖರಾದ ಆನಂದ ರೆಡ್ಡಿ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಐ ಆರ್ ಟಿ ಶಿಕ್ಷಣ ಇಲಾಖೆಯ ಅಧಿಕಾರಿ ಸುಧಾ ಪುರೋಹಿತ್ , ತಾ.ಪ್ರಾ.ಶಾ.ಶಿ.ಸಂ.ಅಧ್ಯಕ್ಷೆ ಶಂಶಾದ್ ಬೇಗಂ, ತಾ.ಸ.ನೌ.ಸಂ. ಅಧ್ಯಕ್ಷ ವೆಂಕಟ ಮಧುಸೂಧನ್ ಸೇರಿದಂತೆ ಇನ್ನಿತರರು ಇದ್ದರು. ಫೋಟೋ: ಕನಕಗಿರಿ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಫೋರ್ಥ್ ವೇವ್ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ವರದಿ – ಆದಪ್ಪ ಮಾಲಿ ಪಾಟೀಲ್