ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ಒತ್ತಾಯ.
ಕೊಪ್ಪಳ:ಕೊರೋನಾ ಲಾಕ್ ಡೌನ್ ಸಂಕಷ್ಟ ಸಂದರ್ಭದಲ್ಲಿ ಪರಿಹಾರದ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕಳಪೆ ಸಾಮಗ್ರಿಗಳನ್ನು ಖರೀದಿಸಿ ನಿರ್ಮಾಣ ಕಾರ್ಮಿಕರಿಗೆ ವಂಚನೆ ಮಾಡಿರುವ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ಈ ವಿಷಯದಲ್ಲಿ ಭಾಗಿಯಾಗಿರುವ ಭ್ರಷ್ಟ ರಾಜಕಾರಣಿಗಳ ಮೇಲೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿಸ್ತರ ವಿರುದ್ಧ ಕಾನೂನಾತ್ಮಕವಾಗಿ ಮುಖದ್ದಮೆ ದಾಖಲು ಮಾಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಆಗಿರೋ ನಷ್ಟವನ್ನು ಅವರಿಂದಲೇ ವಾಪಸ್ ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ ಹಾಗೂ ಗ್ರಾಮ ಘಟಕಗಳ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಹೆಮಂತ್ ಸಿಂಗ್ ಅವರ ಮೂಲಕ ಮನವಿ ಸಲ್ಲಿಸಿದರು. ಪರಿಷ್ಕೃತಗೊಂಡಿರುವ ನಿವೃತ್ತಿ ವೇತನ. ಮದುವೆ. ಹೆರಿಗೆ ಭತ್ಯೆ. ವಿದ್ಯಾರ್ಥಿ ವೇತನ ಹಾಗೂ ಇತರೆ ಹೆಚ್ಚುವರಿ ಯಾಗಿರುವ ಸಹಾಯಧನವನ್ನು ಈ ಕೂಡಲೇ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು.ರಾಜ್ಯಾದ್ಯಂತ ಬಾಕಿ ಇರುವ ಎಲ್ಲಾ ರೀತಿಯ ಸಹಾಯಧನದ ಅರ್ಜಿಗಳನ್ನು ಈ ಕೂಡಲೇ ಇತ್ಯಾರ್ಥಗೊಳಿಸಬೇಕು.ನೈಜ ಕಟ್ಟಡ ನಿರ್ಮಾಣ ಕಾರ್ಮಿಕರ ಸ್ವಂತ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು 5 ಲಕ್ಷ ರೂಪಾಯಿಗಳ ಸಹಾಯಧನವನ್ನು ತಕ್ಷಣ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗುವ ರೋಗಿಗಳನ್ನು ಉನ್ನತ ಚಿಕಿತ್ಸೆ ಪಡೆಯಲು ನಗದು ರಹಿತ ವ್ಯವಸ್ಥೆ (ಇಎಸ್ಐ) ಜಾರಿಗೊಳಿಸಬೇಕು ಮತ್ತು ರೋಗಿಯ ವಿಶ್ರಾಂತಿ ಪಡೆದು ಪುನಃ ಕೆಲಸಕ್ಕೆ ಹೋಗುವವರೆಗೂ ಪ್ರತಿದಿನ ಕನಿಷ್ಠ ರೂಪಾಯಿ 500 ವಿಶ್ರಾಂತಿ ವೇತನ ಪಾವತಿಸಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಭವಿಷ್ಯ ನಿಧಿಯನ್ನು ಈ ಕೂಡಲೇ ಜಾರಿಗೊಳಿಸಬೇಕು. ಯಾವುದೇ ತರಹದ ಸಾವು ಸಂಭವಿಸಿದರೂ ಅವಲಂಬಿತ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ. ಆದ್ದರಿಂದ ಸ್ವಾಭಾವಿಕ ಸಾವಿಗೆ ರುಪಾಯಿ 5 ಲಕ್ಷ ಮತ್ತು ಅಪಘಾತ ಸಾವಿಗೆ 10 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು.ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆಯ ಕಡೆಯಿಂದ ರಾಜ್ಯದ ಎಲ್ಲಾ ಗ್ರಾಮ ಮತ್ತು ನಗರದಲ್ಲಿ ಈಗಾಗಲೇ ಅಂಗನವಾಡಿ ಕೇಂದ್ರಗಳು ಕಾರ್ಯಾನಮುಖವಾಗಿದ್ದು. ಮಂಡಳಿಯ ಹಣವನ್ನು ಖರ್ಚು ಮಾಡಿ ಶಿಶು ಪಾಲನ ಕೇಂದ್ರ ನಿರ್ಮಾಣ ಮಾಡುವುದನ್ನು ಕೈಬಿಡಬೇಕು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಜ್ವಾಲಾಂತ ಸಮಸ್ಯೆಗಳನ್ನು ನಿವಾರಿಸಲು ವಿಭಾಗ ಮಟ್ಟದ ಕಾರ್ಮಿಕ ಆಯುಕ್ತರು ಮತ್ತು ಕಲ್ಯಾಣ ಮಂಡಳಿಯ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ನಿಯಮಾನುಸಾರ ನೋಂದಣಿಗೊಂಡ ಸಂಘದ ಪದಾಧಿಕಾರಿಗಳೊಂದಿಗೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ಕಡ್ಡಾಯ ಕ್ರಮ ಕೈಗೊಳ್ಳಬೇಕು.ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹಾಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಹಾಗೂ ನೌಕರರನ್ನು ಖಾಯಂಗೊಳಿಸಬೇಕು ಮತ್ತು ಮುಂದಿನ ದಿನಗಳಲ್ಲಿ ತೆರವುವಾದ ಖಾಲಿ ಹುದ್ದೆಗೆ ಮಂಡಳಿಯಿಂದ ವಿದ್ಯಾರ್ಥಿ ಸಹಾಯ ಧನ ಪಡೆದು ಅತಿ ಹೆಚ್ಚು ಅಂಕಗಳಿಸಿದ ನೈಜ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರಥಮ ಆದ್ಯತೆ ನೀಡಬೇಕು. ಮುಂತಾದ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು ಒಂದು ವೇಳೆ ವಿಳಂಬವಾದಲ್ಲಿ ಬೆಂಗಳೂರಿನಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಂಭಾಗದಲ್ಲಿ ಹಗಲು ರಾತ್ರಿ ಧರಣಿ ಸತ್ಯಾಗ್ರ ಮಾಡಲಾಗುವುದು. ಇದಕ್ಕೂ ವಿಳಂಬ ಮಾಡಿದ್ದಲ್ಲಿ ಇಡೀ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಯಕಾರಿ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ. ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಜಿಲ್ಲಾ ಉಪಾಧ್ಯಕ್ಷ ನಿಂಗಜ್ಜ ನಾಯಕ್ ಟಣಕನಕಲ್. ತಳಕಲ್ ಗ್ರಾಮ ಘಟಕದ ಅಧ್ಯಕ್ಷ ಜಗದೀಶ್ ಕುರಿ. ಮಂಜುನಾಥ್. ಕವಲೂರಿನ ಮಂಜಪ್ಪ ಗುಗುರಿ. ಮಹೇಶ್ ಎಸ್. ವದಗನಾಳ ಗ್ರಾಮ ಘಟಕದ ಉಪಾಧ್ಯಕ್ಷ ಪ್ರಭು. ಇಸ್ಮಲ್ ಸಾಬ್. ನಿಂಗಪ್ಪ. ಗಿಣಿಗೇರಿ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ ಚೌಹಾಣ್. ಸಣ್ಣ ಯಮನೂರಪ್ಪ. ಅಶೋಕ್. ಹೊಸ ಕನಕಪುರ ಗ್ರಾಮ ಘಟಕದ ಹನುಮಂತಪ್ಪ. ಕಿನ್ನಾಳ ಗ್ರಾಮದ ಕಟ್ಟಡ ಕಾರ್ಮಿಕರ ಸಂಘದ ಹಿರಿಯ ಮುಖಂಡ ಬಸವರಾಜ್ ಚಿಲವಾಡಗಿ. ಮಂಜುನಾಥ್ ಮುಂತಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.
ವರದಿ- ಎಸ್.ಎ.ಗಪೂರ್ ಕೊಪ್ಪಳ ಜಿಲ್ಲೆ