ಲಿಂಗ ಸಮಾನತೆಯಲ್ಲಿ ಮಂಗಳಮುಖಿಯರಿಗೂ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಿ: ಉಪನ್ಯಾಸಕಿ ಜ್ಯೋತಿ.ಜಿ ಮೈಸೂರು…….
ಸರ್ಕಾರ ಈಗಾಗಲೇ ಮಂಗಳ ಮುಖಿಯರಿಗೆ ಪ್ರತಿ ಉದ್ಯೋಗ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಎಲ್ಲಾ ರೀತಿಯ ಅವಕಾಶವನ್ನು ಕಲ್ಪಿಸಿರುವುದು ನಿಜಕ್ಕೂ ಸ್ವಾಗಾತರ್ಹ. ಇನ್ನಾದರೂ ಅವರು ಎಲ್ಲರಂತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲಿ. ಮುಂದೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವುದರಿಂದ ಇತರರಿಗೆ ಮಾದರಿಯಾಗಲಿದೆ. ತಮ್ಮ ಕೀಳರಿಮೆಯನ್ನು ಬಿಟ್ಟು ಸಮಾಜದೊಂದಿಗೆ ಅವರು ಸಂಪೂರ್ಣವಾಗಿ ಹೊಂದಿಕೊಳ್ಳಲಿ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಜೀವಿಸಲೂ ಹಕ್ಕು ಇದೆ,ಇವರು ಸಹ ನಮ್ಮಂತೆಯೇ ಮನುಷ್ಯರು. ಎಲ್ಲರೂ ಇವರ ಬಗ್ಗೆ ಕೀಳರಿಮೆ ಹೊಂದದೆ ಸೌಹಾರ್ದದಿಂದ ನಡೆದುಕೊಳ್ಳಬೇಕು. ಇನ್ನೂ ಮಂಗಳ ಮುಖಿಯರು ಎಂದರೆ ಮೂಗು ಮುರಿಯುವರೇ ಹೆಚ್ಚು ಇದು ಸಮಂಜಸವಾದದ್ದಲ್ಲ. ಇನ್ನೂ ಸಾರ್ವಜನಿಕ ಶೌಚಾಲಯದ ವಿಷಯಕ್ಕೆ ಬಂದರೆ ಮಹಿಳೆ,ಪುರುಷ ಎಂದು ವಿಂಗಡಿಸಿರುತ್ತಾರೆ. ಆದರೆ ಎಲ್ಲಿಯೂ ಕೂಡ ಮಂಗಳ ಮುಖಿಯರಿಗೆ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಹಾಗಾದರೆ ಅವರು ಎಲ್ಲಿಗೆ ಹೋಗುತ್ತಾರೆ? ಇದು ನನಗೆ ಕಾಡುವ ಪ್ರಶ್ನೆ. ಸರ್ಕಾರವು ಅವರಿಗಂತಲೇ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿದರೆ ಉತ್ತಮವಾಗಿರುತ್ತದೆ. ಎನ್ನುವುದು ನನ್ನ ಒಂದು ಅಭಿಮತ. ಇನ್ನಾದರೂ ಸರ್ಕಾರವು ಇವರ ಬಗ್ಗೆ ವಿಶೇಷ ಕಾಲಜಿ ವಹಿಸಿ ಕೆಲವು ಯೋಜನೆಗಳ ಜೊತೆಗೆ ಇಂತಹ ನಿರ್ದಾರವನ್ನು ಕೈಗೊಳ್ಳಲಿ…. -ಜ್ಯೋತಿ.ಜಿ(ಉಪನ್ಯಾಸಕರು ಮೈಸೂರು)..
ವರದಿ -ಸೋಮನಾಥ ಹೆಚ್ ಎಮ್