ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ 1 ಲಕ್ಷ ಆಟದ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರ……

Spread the love

ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ 1 ಲಕ್ಷ ಆಟದ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರ…

–  50 ಕ್ಕೂ ಹೆಚ್ಚು ವಿವಿಧ ಆಟದ ಸಾಮಗ್ರಿಗಳ ಬಳಕೆ

– ಪ್ರಧಾನಿ ನರೇಂದ್ರ ಮೋದಿ ಅವರ ಖೇಲೋ ಇಂಡಿಯಾ ಗೆ ಪ್ರೋತ್ಸಾಹ ನೀಡುವ ಉದ್ದೇಶ

–  ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ ವಿತರಿಸಲು ನಿರ್ಧಾರ

ಬೆಂಗಳೂರು ಜುಲೈ 09: ಪ್ರತಿವರ್ಷವೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುವ ಜೆಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 1 ಲಕ್ಷ ಆಟದ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರ ವನ್ನು ಮಾಡಲಾಗಿದೆ.  ಕ್ರೀಡೆಗಳು ಅದರಲ್ಲೂ ಸಾಂಪ್ರದಾಯಿಕ ಕ್ರೀಡೆಗಳು ನಮ್ಮ ಬದುಕಿನಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ವಿಕಸತೆ ಹೆಚ್ಚಾಗುತ್ತದೆ. ಹಾಗೆಯೇ ಆರೋಗ್ಯವೂ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾ ಘೋಷಣೆಯ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದರು. ಈ ಥೀಮನ್ನ ಅಳವಡಿಸಿಕೊಂಡು ಈ ಬಾರಿ ವಿಶೇಷವಾದ ಆಲಂಕಾರವನ್ನು ಮಾಡಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದ ಟ್ರಸ್ಟಿ ರಾಮ್‌ಮೋಹನರಾಜ್‌ ತಿಳಿಸಿದರು.  ಕಳೆದ ಬಾರಿ ಕೋವಿಡ್‌ ಇದ್ದಿದ್ದರಿಂದ ಮೂರು ಲಕ್ಷ ಮಾತ್ರೆಗಳನ್ನು ಬಳಸಿ ಆಲಂಕಾರ ಮಾಡಲಾಗಿತ್ತು. ಅದನ್ನ 1 ಲಕ್ಷ ಕುಟುಂಬಗಳಿಗೆ ಹಂಚಲಾಗಿತ್ತು. ಈ ಬಾರಿ ಮಕ್ಕಳು ಆಟ ಆಡುವಂತಹ ಸಾಮಗ್ರಿಗಳಾದ 50 ವಿವಿಧ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರವನ್ನು ಮಾಡಲಾಗುತ್ತಿದೆ. ಗೋಲಿ, ಬುಗರಿ, ಗಿಲ್ಲಿದಾಂಡು, ಕ್ಯಾಟರ್‌ ಪಿಲ್ಲರ್‌ ನಂತಹ ಸಾಂಪ್ರದಾಯಿಕ ಆಟದ ಸಾಮಗ್ರಿಗಳು, ಅಲ್ಲದೇ, ಕ್ರಿಕೆಟ್‌, ಟೆನ್ನೀಸ್‌, ಹಾಕಿ ಬ್ಯಾಟುಗಳು ಸೇರಿದಂತೆ ಹಲವಾರು ವಿಧಧ ಕ್ರೀಡಾ ಸಾಮಗ್ರಿಗಳನ್ನು ಇಲ್ಲಿ ಬಳಸಲಾಗುತ್ತಿದೆ. ಗುರುಪೂರ್ಣಿಮೆ ಮುಗಿದ ನಂತರ ಈ ಸಾಮಗ್ರಿಗಳನ್ನು ಅಗತ್ಯವಿರುವಂತವರಿಗೆ ಉಚಿತವಾಗಿ ನೀಡಲಾಗುವುದು. ಕ್ರೀಡಾ ಸಾಮಗ್ರಿಗಳ ಅಗತ್ಯವಿರುವಂತಹ ಖಾಸಗಿ ಹಾಗೂ ಸರಕಾರಿ ಶಾಲೆಗಳು, ವಸತಿ ಸಮುಚ್ಚಯದ ಸಂಘಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬೇಡಿಕೆಯನ್ನು ನೋಡಿಕೊಂಡು ದೇವಸ್ಥಾನ ಮಂಡಳಿಯವರು ಉಚಿತವಾಗಿ ಆಟದ ಸಾಮಗ್ರಿಗಳನ್ನು ವಿತರಿಸಲಿದ್ದಾರೆ ಎಂದು ರಾಮ್‌ಮೋಹನ ರಾಜ್‌ ತಿಳಿಸಿದರು.  ಜುಲೈ 13 ರಿಂದ ಒಂದು ವಾರಗಳ ಕಾಲ ಈ ವಿಶೇಷ ಅಲಂಕಾರವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *