ಕಾನೂನು ಬದ್ಧ ಹೋರಾಟ ಹತ್ತಿಕ್ಕುವ ಸರ್ಕಾರದ ನಿರ್ಧಾರ ಸರಿಯಲ್ಲ: ಕೆ ಗಂಗಾಧರ ಸ್ವಾಮಿ…
ಕನಕಗಿರಿ: ಸರ್ಕಾರವು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸಲು ವಿಫಲ ಆಗಿರುವುದಷ್ಟೇ ಅಲ್ಲದೆ ಹೋರಾಟ ಹತ್ತಿಕ್ಕುವ ಮೂಲಕ ಹೋರಾಟದ ಹಕ್ಕನ್ನು ಕಸಿದುಕೊಂಡು ಸಂವಿದಾನ ವಿರೋಧಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಬೇಡ ಜಂಗಮ ಸಮುದಾಯದ ಮುಖಂಡ ಕೆ.ಗಂಗಾಧರಸ್ವಾಮಿ ಹೇಳಿದರು. ಅವರು ರಾಜ್ಯ ಸರ್ಕಾರವು ಬೇಡ ಜಂಗಮ ಹೋರಾಟಗಾರರ ಬಂಧನ ಖಂಡಿಸಿ ತಾಲೂಕ ಬೇಡ ಜಂಗಮ ಸಮುದಾಯದ ವತಿಯಿಂದ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಬ ಬಳಿಕ ಇನ್ನೋರ್ವ ಮುಖಂಡ ವಾಗೀಶ್ ಹಿರೆಮಠ ಮಾತನಾಡಿ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳುವ ಅವಕಾಶ ನೀಡಿದೆ ಆದರೆ ಸರ್ಕಾರ ನಮ್ಮ ಸಮುದಾಯಕ್ಕೆ ಎಸ್.ಸಿ. ಮೀಸಲಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರಾಜ್ಯಾಧ್ಯಕ್ಷ ಬಿ.ಡಿ.ಹಿರೆಮಠ ಸೇರಿದಂತೆ ಇತರರನ್ನು ಬಂಧನ ಮಾಡಿರುವುದು ಖಂಡನಿಯ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಸಂವಿಧಾನದ ಅಡಿಯಲ್ಲಿ ನಮ್ಮ ಹೋರಾಟ ಮತ್ತಷ್ಟು ತೀವ್ರ ಗೊಳ್ಳುತ್ತದೆ ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ ಧನಂಜಯ ಮಾಲಗಿತ್ತಿ ಮೂಲಕ ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸುಳೇಕಲ್ ಬ್ರಹ್ಮನ್ ಮಠದ ಮಹಾಸ್ವಾಮಿಗಳು ಸೇರಿದಂತೆ ಪ್ರಮುಖ ಸ್ವಾಮೀಜಿಗಳು ಭಾಗವಹಿಸಿದ್ದರು, ತಾಲೂಕ ಬೇಡ ಜಂಗಮ ಹೋರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ – ಆದಪ್ಪಮಾಲಿ ಪಾಟೀಲ್