ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಗ್ರಹ.
ತಾವರಗೇರಾ: ಸಮೀಪದ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಜುಮಲಾಪುರ ಗ್ರಾಮದ ಒಳಗಿನ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ಎಂದು ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.ಗ್ರಾಮದ ನಿವಾಸಿಗಳಾದ ಶಂಕ್ರಪ್ಪ ನಾಯಕ ಮತ್ತು ಪಾಂಡಪ್ಪ ಪತ್ರಿಕೆಯೊಂದಿಗೆ ಮಾತನಾಡಿ.ಜಹಾಗೀರ್ ರಾಂಪುರ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ಮುದೇನೂರು ಯಿಂದ ತಾವರಗೇರಾ ಮುಖ್ಯ ರಸ್ತೆ ಸಂಪರ್ಕಿಸುವ ಗ್ರಾಮದ ಮಸೀದಿ ಮುಂಭಾಗದಿಂದ ವಾಲ್ಮೀಕಿ ವೃತ್ತ ಹಾಗೂ ಪಾಂಡುರಂಗ ದೇವಸ್ಥಾನ ತಲುಪುವ ಮುಖ್ಯ ರಸ್ತೆ ತುಂಬಾ ಹದಗೆಟ್ಟಿದೆ, ದ್ವಿ ಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ವೃದ್ಧರು, ಮಕ್ಕಳು, ವಿಶೇಷ ಚೇತನರು ತಗ್ಗು ದಿಣ್ಣೆ ಮೇಲೆ ಕುಸಿದು ಬಿದ್ದು ಹೋಗಬೇಕಾಗಿದೆ. ಮಳೆ ಗಾಲ ಆಗಿರುವ ಕಾರಣ ರಸ್ತೆ ಸಂಪೂರ್ಣವಾಗಿ ಗೊಜ್ಜಲಿನಿಂದ ಕೂಡಿದ್ದು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡಬೇಕಾದರ ಪರಿಸ್ಥಿತಿ ಹೇಳಿ ತೀರದು. ಈ ರಸ್ತೆಯನ್ನು ಸಾಕಷ್ಟು ಬಾರಿ ಅಭಿವೃದ್ಧಿ ಪಡಿಸಿದ್ದು ಕಳಪೆ ಕಾಮಗಾರಿ ಮಾಡುವ ಮೂಲಕ ಗುತ್ತಿಗೆದಾರರು ಹಣ ಹೋಡೆದುಕೊಂಡಿರುವುದು ಸ್ಪಷ್ಟವಾಗಿದೆ. ಸದರಿ ರಸ್ತೆಯ ಸ್ಥಿತಿಯನ್ನು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಆದಷ್ಟು ಬೇಗ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಇಲ್ಲವಾದರೆ ಗ್ರಾಮದ ಮಹಿಳೆಯರ ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಗ್ರಹ ಪಡಿಸಿದರು.ಕೋಟ್:” ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸುವುದು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕಷ್ಟ ಸಾಧ್ಯ. ಶಾಸಕರ ಗಮನಕ್ಕೆ ತರುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನ ಅಥವಾ ಬೇರೆ ಯಾವುದಾದರೂ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಗ್ರಾಮದ ಪ್ರಮುಖರೊಡನೆ ಪ್ರಯತ್ನ ಮಾಡಲಾಗುವುದು” ( ಬಾಳಪ್ಪ ಕೊಡಗಲಿ ಗ್ರಾ.ಪಂ.ಸದಸ್ಯರು ಜುಮಲಾಪುರ) ಫೋಟೋ: ತಾವರಗೇರಾ: ಸಮೀಪದ ಜುಮಲಾಪುರ ಗ್ರಾಮದ ಹದಗೆಟ್ಟ ಒಳ ರಸ್ತೆ.
ವರದಿ – ಸೋಮನಾಥ ಹೆಚ್ ಎಮ್