ಸಿಪಿಐಎಂಎಲ್ ರೆಡ್ ಸ್ಟಾರ್ ತಾಲೂಕು ಸಮಿತಿವತಿಯಿಂದ ತಹಶೀಲ್ದಾರರಿಗೆ ಮನವಿ…..
ಸಿಪಿಐಎಂಎಲ್ ರೆಡ್ ಸ್ಟಾರ್ ತಾಲೂಕು ಸಮಿತಿ ಸಿಂಧನೂರು ವತಿಯಿಂದ ಮಾನ್ಯ ತಹಶೀಲ್ದಾರರಿಗೆ ಮನವಿ ಪತ್ರವನ್ನು ನೀಡಲಾಯಿತು. ಸರಕಾರಿ ಸರ್ವೆ ನಂ. 768/1 ಕಾಟಿಬೇಸ್(ದೋಭಿಗಲ್ಲಿ)ನಲ್ಲಿ ಕಳೆದ 30 ವರ್ಷಗಳಿಂದ ಸುಮಾರು 60 ಕುಟುಂಬಗಳು ವಾಸಮಾಡುತ್ತಿದ್ದಾರೆ. ಅಕ್ರಮ ಸಕ್ರಮದಲ್ಲಿ ಅರ್ಜಿ ಹಾಕಿದ 30 ಜನರ ಪೈಕಿ 25 ಜನರ ಅರ್ಜಿ ಅರ್ಹವಾಗಿದ್ದರು ಕೂಡಾ ಹಕ್ಕುಪತ್ರಗಳನ್ನು ವಿತರಿಸಿಲ್ಲ. ಈ ಕುರಿತು ನಾವುಗಳು ಸಾಕಷ್ಟೂ ಬಾರಿ ಮಾನ್ಯ ತಹಶೀಲ್ದಾರರಿಗೆ ಹಾಗೂ ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ ಮೂಲಕ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಳೆದ ವರ್ಷ 68 ದಿನಗಳ ಕಾಲ ಸದರಿ ಸರಕಾರಿ ಸ್ಥಳದಲ್ಲಿ ಅನಿರ್ಧಿಷ್ಟ ಧರಣಿ ನಡೆಸಿದಾಗ ಮಾನ್ಯ ಸಹಾಯಕ ಆಯುಕ್ತರು ಮತ್ತು ಮಾನ್ಯ ತಹಶೀಲ್ದಾರರು ನಮ್ಮ ಧರಣಿ ಸ್ಥಳಕ್ಕೆ ಬಂದು ಕೆಲವೇ ದಿನಗಳಲ್ಲಿ ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತೇವೆಂದು ಲಿಖಿತ ಭರವಸೆಯನ್ನು ನೀಡಿದಾಗ ನಾವುಗಳು ಅವರ ಭರವಸೆಯಂತೆ ಧರಣಿಯನ್ನು ಕೈಬಿಟ್ಟೆವು. ನಂತರ ಹಲವಾರು ಬಾರಿ ಮಾನ್ಯ ತಹಶೀಲ್ದಾರರನ್ನು ಬೇಟಿನೀಡಿ ಹಕ್ಕುಪತ್ರಗಳ ಕುರಿತು ವಿಚಾರಿಸಿದಾಗ ಕೊಡೋಣ-ನೋಡೋಣ ಎನ್ನುವ ಹಾರಿಕೆ ಉತ್ತರವನ್ನು ನೀಡುತ್ತ ಕಾಲಹರಣ ಮಾಡುತ್ತ ಬಂದರು. ಸದರಿ ಇನ್ನುಳಿದ ಕುಟುಂಬಗಳು ಅಂದರೆ, 35 ಜನರು ಅಕ್ರಮ-ಸಕ್ರಮದಲ್ಲಿ ಈಗಾಗಲೇ 94 ಸಿ ಅಡಿಯಲ್ಲಿ ಅರ್ಜಿಯನ್ನು ಹಾಕಲಾಗಿದೆ. ಹಳೆಯ ಅರ್ಜಿಗೆ ಹಕ್ಕುಪತ್ರಗಳು ನೀಡದೆ ಹಾಗೂ ಹೊಸದಾಗಿ ಅರ್ಜಿ ಹಾಕಿದ ಜನಗಳ ಸ್ಥಳವನ್ನು ಸರ್ವೆ ಕಾರ್ಯ ಕೈಗೊಳ್ಳದೆ, ಮೀನಾ-ಮೇಷ ಎಣಿಸುತ್ತಿದ್ದಾರೆ. ಸದರಿ ಈ ವಿಷಯವು ಈ ಹಿಂದೆ ಮಾನ್ಯ ಶಾಸಕ ವೆಂಕಟರಾವ್ ನಾಡಗೌಡರ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಾರಣ ಸರಕಾರಿ ಸರ್ವೆ ನಂ. 768/1 ರಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಸುಮಾರು 60 ಬಡ ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ನಮ್ಮ ಒತ್ತಾಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ತಹಶೀಲ್ದಾರರು ಲಿಖಿತವಾದ ಉತ್ತರವನ್ನು ನಮಗೆ ನೀಡಬೇಕು. ಇಲ್ಲದೇ ಹೋದಲ್ಲಿ ತಹಶೀಲ್ದಾರರ ಮುಂದಿನ ನಡೆಯನ್ನು ನೋಡಿಕೊಂಡು ಸದರಿ ಸರಕಾರಿ ಭೂಮಿಯ ಮುಂದೆ ಅನಿರ್ಧಿಷ್ಟ ಹೋರಾಟವನ್ನು ನಡೆಸುವುದು ನಮಗೆ ಅನಿವಾರ್ಯವಾಗುತ್ತದೆ. ಮಾನ್ಯ ಶಿರೆಸ್ತೇದಾರರಾದ ಮಹಾಂತೇಶ ರಾಠೋಡ್ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಐಎಂಎಲ್ ರಾಜ್ಯ ಸಮಿತಿ ಸದಸ್ಯರಾದ, ಎಂ.ಗಂಗಾಧರ ಮಾತನಾಡಿದರು. ತಾಲೂಕು ಸಮಿತಿ ಸದಸ್ಯರಾದ, ಹೆಚ್.ಆರ್.ಹೊಸಮನಿ, ಹುಲುಗಪ್ಪ ಬಳ್ಳಾರಿ, ಮುದಿಯಪ್ಪ ಹನುಮನಗರ ಕ್ಯಾಂಪ್, ವೆಂಕಟೇಶ ಮ್ಯಾದರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ,,,,,
ವರದಿ – ಸಂಪಾದಕೀಯ