ತ್ಯಾಗ ಬಲಿದಾನದ ಸಂಕೇತವೆ ಬಕ್ರೀದ್….
ಇಂದು ಭಾರತದ್ಯಂತ ಆಚರಿಸಲ್ಪಡುವ ಬಕ್ರೀದ ಹಬ್ಬವು ತಾವರಗೇರಾ ಪಟ್ಟಣದ ಈದ್ಗಾ ಮೈದಾನದಲ್ಲಿ ಭಾರತದ್ಯಂತ ಮುಸ್ಲಿಮರು ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ವರ್ಷ, ಬಕ್ರೀದ್ ಹಬ್ಬವನ್ನು ಭಾರತದಲ್ಲಿ ಮುಸ್ಲಿಮರು ಜುಲೈ 10 ರಂದು ಆಚರಿಸುತ್ತಾರೆ. ಈ ದಿನ, ಈದ್ಗಾಗಳಲ್ಲಿ ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಝ್ ಅರ್ಪಿಸುವುದರೊಂದಿಗೆ ಈದ್ ಆಚರಣೆ ಪ್ರಾರಂಭವಾಗುತ್ತದೆ. ಈ ಸಂತೋಷದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ . ಭಾರತದಲ್ಲಿ ಮುಸ್ಲಿಮರು ಆಚರಿಸುತ್ತಾರೆ. ಪ್ರವಾದಿ ಇಬ್ರಾಹಿಂ ಅಥವಾ ಅಬ್ರಾಹಂ ನೀಡಿರುವಂತಹ ಬಲಿದಾನದ ಸಂಕೇತವನ್ನು ನೆನಪಿಸಿಕೊಳ್ಳುವ ಹಬ್ಬವನ್ನು ಬಕ್ರೀದ್ ಎಂದು ಆಚರಿಸಲಾಗುತ್ತದೆ. ಪ್ರವಾದಿ ಅವರಿಗೆ ಅಲ್ಲಾ ತನ್ನ ಮೇಲಿನ ನಂಬಿಕೆಯನ್ನು ಸಾಬೀತು ಮಾಡಲು ಹೇಳುವರು ಮತ್ತು ಇದನ್ನು ಸಾಬೀತು ಮಾಡಲು ಪ್ರವಾದಿ ಅವರು ತನಗೆ ತುಂಬಾ ಇಷ್ಟವಿರುವಂತಹವರ ಬಲಿದಾನ ಮಾಡುವರು. ಪ್ರವಾದಿ ಅವರು ದೇವರ ಮೇಲಿನ ನಂಬಿಕೆಯಿಂದಾಗಿ ತನ್ನ 13ರ ಹರೆಯದ ಮಗ ಇಸ್ಮಾಯಿಲ್ ನನ್ನು ಬಲಿದಾನ ಮಾಡುವರು. ಪ್ರವಾದಿ ಅವರು ತನ್ನ ಮೇಲೆ ಇಟ್ಟಿರುವಂತಹ ನಂಬಿಕೆಯನ್ನು ನೋಡಿದ ದೇವರು ಪ್ರವಾದಿಯನ್ನು ಮೆಚ್ಚುತ್ತಾರೆ. ಇಲ್ಲಿ ಇಸ್ಮಾಯಿಲ್‌ನ ಬದಲಿಗೆ ಆಡನ್ನು ಇಡುವಂತೆ ದೇವತೆ ಜಿಬ್ರಾಲ್ ಅಥವಾ ಗ್ಯಾಬ್ರಿಯಲ್‌ನನ್ನು ಕಳುಹಿಸಿಕೊಡುವರು. ಈ ದಿನದಿಂದ ಮುಸ್ಲಿಮರು ಬಕ್ರೀದ್ ಹಬ್ಬದಂದು ಗಂಡು ಆಡಿನ ಬಲಿ ಕೊಡುವರು. ಬಲಿಕೊಟ್ಟ ಆಡಿನ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ. ಇದರಲ್ಲಿ ಒಂದು ಭಾಗವು ಬಡವರು ಮತ್ತು ಅಗತ್ಯವಿರುವಂತವರಿಗೆ, ಇನ್ನೊಂದು ಭಾಗ ಸ್ನೇಹಿತರಿಗೆ ಮತ್ತು ಉಳಿದ ಮೂರನೇ ಭಾಗವು ಕುಟುಂಬ ಸದಸ್ಯರಿಗೆ ಆಹಾರ ತಯಾರಿಸಿಕೊಳ್ಳಲು ಬಳಸಲಾಗುತ್ತದೆ ..
ವರದಿ – ಉಪ್ಪಳೇಶ ನಾರಿನಾಳ