“ಶವಸಂಸ್ಕರ” ಚಿತ್ರದ ಟೀಸರ್ ಬಿಡುಗಡೆ.
ಬೆಂಗಳೂರು : ಶವ ಸಂಸ್ಕಾರ ಚಿತ್ರದ ಅಧಿಕೃತ ಟೀಸರ್ “ಎ೨” ಮ್ಯೂಸಿಕ್ ಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಆಗಿದೆ. ಈ ಚಿತ್ರ ಎಸ್. ಕೆ .ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ವಕೀಲರಾದ ಎಸ್.ಕೆ.ಮೋಹನ್ ಕುಮಾರ್ ನಿರ್ಮಾಣ ಮಾಡುತ್ತಿದ್ದು ನಿರ್ಮಾಪಕರೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ, ಕಾಂತರಾಜುಗೌಡ ನಿರ್ದೇಶನವಿದೆ. ಈ ಸಂಸ್ಥೆಯ ಮೊದಲ ಸಿನಿಮಾ ತಂಡದ ಎರಡನೇ ಸಿನಿಮಾ ಇದಾಗಿದ್ದು ಮೊದಲ ಚಿತ್ರ “ರಾಜಲಕ್ಷ್ಮಿ” ನಿರ್ಮಾಪಕ ಮತ್ತು ನಿರ್ದೇಶಕರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ. ಈ ಸಿನಿಮಾದಲ್ಲಿ ಕೆಜಿಎಫ್ ಮೂವಿ ಖ್ಯಾತಿಯ ಗೋವಿಂದೇಗೌಡರು ಅವರ ಶ್ರೀಮತಿ ಕಾಮಿಡಿ ಕಿಲಾಡಿ ಖ್ಯಾತಿಯ ದಿವ್ಯಾರವರು, ಪ್ರತಿಭಾವಂತ ತ್ರಿಭಾಷಾ ನಟಿ ಅನ್ವಿತಾ ಶೆಟ್ಟಿ, 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹಿರಿಯ ನಟರಾದ ಯತಿರಾಜ್, ಡಬ್ ಸ್ಮ್ಯಾಷ್ ಹಾಗೂ ಡ್ರಾಮಾ ಜೂನಿಯರ್ ಆರ್ಟಿಸ್ಟ್ ಭೈರವಿ ಮಹೇಶ್ ರವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇವರ ಜೊತೆಯಲ್ಲಿ ರಂಗಭೂಮಿ ಕಲಾವಿದರಾದ ಪ್ರಜ್ವಲ್. ಅಕ್ಷಯ್. ಗೌತಮ್. ಕಿರಣ್. ದರ್ಶನ್. ಸುಹಾಸ್. ಜೊತೆಗೆ ಸೀನಿಯರ್ ಅಡ್ವೊಕೇಟ್ ಸತ್ಯವತಿ. ಕೃಷ್ಣಪ್ಪ. ಮಂಗಳೂರಿನ ರೋಷಿಣಿ, ಉತ್ತರ ಕರ್ನಾಟಕದ ಪ್ರತಿಭಾವಂತ ನಟರಾದ ಮೌಲಾ. ಆನಂದ್, ಯೋಗ ಮತ್ತು ಕರಾಟೆಯ ಇಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ಶ್ರೀನಾಥ್. ಅಮಿತ್ . ಮೈಸೂರು ನಾಗರತ್ನ ಮುಂತಾದವರು ನಟಿಸಿದ್ದಾರೆ ಈ ಚಿತ್ರದಲ್ಲಿ ಹಾಡುಗಳಿದ್ದು ಸುಪ್ರೀತ್ ಗಾಂಧಾರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಾಹಿತ್ಯ ವನ್ನು ರವೀಂದ್ರ ಮುದ್ದಿ ಟಿವಿ 9 ಅರ್ಜುನ್ ಮತ್ತು ಮೋಹನ್ ಕುಮಾರ್ ಎಸ್ ಕೆ ಬರೆದಿದ್ದಾರೆ. ಮೊದಲ ಗೀತೆ ಅಪ್ಪ ಕೊಡದ ಕೈಯಾತುತ್ತ ಅನ್ನು ಅನುರಾಧ ಭಟ್ ಹಾಡಿದ್ದು, ಎರಡನೇ ಗೀತೆ ಬದುಕಿನ ಆಟವನ್ನು ಬಲ್ಲವರ್ಯಾರು ಅನ್ನು ಮೆಹಬೂಬ್ ಷಾ ಹಾಡಿದ್ದು, ಮೂರನೇ ಗೀತೆ ಹಿಂಗ್ಯಾಕ ನೋಡುತ್ತಿಯಮ್ಮಿ ಅನ್ನು ಸರಿಗಮಪ ವಿನ್ನರ್ ಸುನಿಲ್ ಹಾಡಿದ್ದು, ನಾಲ್ಕನೇ ಗೀತೆ ಅಮ್ಮ ಕೊಟ್ಟ ಕೈಯ ತುತ್ತು ಅನ್ನು ರಾಜೇಶ್ ಕೃಷ್ಣನ್ ಸರ್ ಹಾಡಿದ್ದು ಐದನೇ ಗೀತೆಯನ್ನು ಚಿತ್ರದ ಸಂಗೀತ ನಿರ್ದೇಶಕರಾದ ಸುಪ್ರೀತ್ ಗಾಂಧಾರರವರೆ ಹಾಡಿದ್ದಾರೆ. ಚಿತ್ರದ ಆಡಿಯೋ ರೈಟ್ಸ್ ಅನ್ನು ಉತ್ತಮ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಶೀಘ್ರದಲ್ಲಿಯೇ ಆಡಿಯೋ ಕೂಡ ಬಿಡುಗಡೆ ಆಗಲಿದೆ. ಚಿತ್ರದ ಛಾಯಾ ಗ್ರಾಹಕರಾದ ರವಿರವರ ಕೈಚಳಕದಲ್ಲಿ ಸುಂದರ ಚಿತ್ರ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಷ ಮಾಡಲಾಗಿದೆ ಸಂಕಲನವನ್ನು ಮಂಜು ಎಸ್ ಪದ್ಮನಾಭ್ ದಿನೇಶ್ ಮತ್ತು ಸಹ ನಿರ್ದೇಶನ ಯತಿರಾಜ್ ಮಾಗಡಿ. ರವಿಶಂಕರ್ ಮೈಸೂರ್. ಸ್ಮೈಲಿ ಹೇಮಂತ್. ನಿರ್ವಹಿಸಿದ್ದಾರೆ. ವಸ್ತ್ರಾಲಂಕಾರದ ಜವಾಬ್ದಾರಿಯನ್ನು ಶುಭ ಎಸ್ ಶೇಖರ್ ಮತ್ತು ವಿಭಾ ಎಸ್ ಶೇಖರ್. ರವರು ಮತ್ತು ವರ್ಣಾಲಂಕಾರವನ್ನು ಜನಾರ್ಧನ್ ಹಾಗೂ ಪೋಸ್ಟರ್ ಡಿಸೈನ್ ಅನ್ನು ದೇವು ಮಾಡಿದ್ದು ಪಿ.ಆರ್.ಓ ಚಂದ್ರಶೇಖರ್ ಮೂಲಕ ವಿಶಾಲ ಕರ್ನಾಟಕಕ್ಕೆ ಪತ್ರಿಕಾ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ.
ವರದಿ~ – ಮೌನೇಶ್ ರಾಥೋಡ್