ಬೆಳೆ ವಿಮೆಗೆ ಹತ್ತಿ ಬೆಳೆ ಸೇರಿಸಿ: ರಮೇಶ ನಾಯಕ.
ಕನಕಗಿರಿ:ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಕೃಷಿ ಅಧಿಕಾರಿಗಳ ನೀರ್ಲಕ್ಷದಿಂದ ಹತ್ತಿ ಬೆಳೆಯನ್ನು ಕೈಬಿಟ್ಟಿದ್ದು ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಹತ್ತಿ ಬೆಳೆಯನ್ನು ಬೆಳೆ ವಿಮೆಗೆ ಸೇರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹುಲಿಹೈದರ ರಮೇಶ ನಾಯಕ ಹೇಳಿದರು. ಅವರು ರವಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರೈತರು ಬೆಳೆ ವಿಮೆ ತುಂಬಲು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ, ತಾಲೂಕಿನ ಹುಲಿಹೈದರ ಹೋಬಳಿಯ ಹತ್ತಿ ಬೆಳೆಗಾರರರು ಕೃಷಿ ಅಧಿಕಾರಿಗಳ ನೀರ್ಲಕ್ಷದಿಂದ ಬೆಳೆ ವಿಮೆ ತುಂಬಲಾಗದೇ ಕಂಗಾಲಾಗಿದ್ದಾರೆ. ರೈತರು ಬೆಳೆ ವಿಮೆ ತುಂಬಿಸಲು ಸಂಬಂಧಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಗೆ, ಹಾಗೂ ಬ್ಯಾಂಕಿಗೆ ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಹುಲಿಹೈದರ ಹೋಬಳಿಗೆ ಹತ್ತಿ ಬೆಳೆ ಆಯ್ಕೆ ಆಗಿರುವುದಿಲ್ಲ. ಹಾಗಾಗಿ ಹತ್ತಿ ಬೆಳೆಗೆ ವಿಮೆ ತುಂಬಲು ಅವಕಾಶವಿಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಹುಲಿಹೈದರ ಹೋಬಳಿಯಲ್ಲಿ ಖುಷಿ ಮತ್ತು ನೀರಾವರಿ ಭೂಮಿಯಲ್ಲಿ ಅತಿ ಹೆಚ್ಚಾಗಿ ಹತ್ತಿಯನ್ನು ಬೆಳೆದಿರುವ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಬೆಳೆ ವಿಮಾ ತುಂಬಲು ದಿ. 31. ಕೊನೆಯ ದಿನವಾಗಿದ್ದು, ಸಂಬಂಧಪಟ್ಟ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕೂಡಲೇ ಸೂಚನೆ ನೀಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಹತ್ತಿ ನಾಟಿ ಮಾಡಿದ ರೈತರಿಗೆ ಬೆಳೆ ವಿಮೆ ತುಂಬಿಸಲು ಅವಕಾಶ ಮಾಡಿಕೊಡಬೇಕೆಂದು, ಸುದ್ದಿಗೋಷ್ಠಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ವರದಿ – ಆದಪ್ಪ ಮಾಲಿಪಾಟೀಲ್