ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಣೆ…..
ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು, ಮುಧೋಳ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಬಕ್ರೀದ್ ಹಬ್ಬದ ನಿಮಿತ್ತ ಭಾನುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮಾಜದ ಧರ್ಮಗುರುಗಳಾದ ಯಲಬುರ್ಗಾದ ಹಜರತ್ ಇರ್ಷಾದ್ ಖಾಜಿ ಅವರು ಮಾತನಾಡಿ, ಅಲ್ಲಾಹನ ಮೇಲಿನ ಬಲವಾದ ನಂಬಿಕೆಯಿಂದ ಮಾಡಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಸ್ಮರಣಾರ್ಥ ದೇಶಾದ್ಯಂತ ಮುಸ್ಲಿಮರಲ್ಲಿ ಆಚರಿಸಲಾಗುವ ಹಬ್ಬ ಇದು ಎಂದು ಉಪನ್ಯಾಸ ನೀಡಿದರು, ನಂತರ ಮೂಡಬಿದ್ರೆಯ ಕರ್ನಾಟಕ ಖಿದ್ಮಾ ಫೌಂಡೇಶನ್ ಸಂಚಾಲಕ ಅಮೀರ್ ಬನ್ನೂರ್ ಅವರಿಂದ ಬಕ್ರೀದ್ ಹಬ್ಬದ ಮಹತ್ವದ ಕುರಿತು ಉಪನ್ಯಾಸ ನೀಡಿ, ನಾಡಿನಲ್ಲಿ ಶಾಂತಿ, ಸೌಹಾರ್ದತೆ ಬೆಳಗಲಿ, ಎಲ್ಲರಿಗೂ ಅಲ್ಲಾಹನು ಸುಖ ಸಂತೋಷ, ಸಮೃದ್ಧಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು. ನಂತರ ನಮಾಜ್ ಮುಗಿದ ಮೇಲೆ ಮುಸ್ಲಿಮರು ಪರಸ್ಪರವಾಗಿ ಬಕ್ರೀದ್ ಹಬ್ಬದ ಶುಭಾಶಯಗಳನ್ನ ತಿಳಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ಸಯ್ಯದ್ ಚೇರಮನ್, ಮೌಲಾಸಬ್ ಮೋತೆಖಾನ್, ಹಸೇನಸಾಬ್ ಹಿರೇಮನಿ (ವಕೀಲರು) ಗ್ರಾಂ ಪಂ ಸದಸ್ಯ ಖಾದಿರಾಬಾಷಾ ತೋಳಗಲ್, ಇಮಾಮ್ ಹಿರೇಮನಿ, ಕಬೀರಸಾಬ ಗಡಾದ, ಹುಸೇನ್ ಸಾಬ್ ಕಿನ್ನಾಳ, ಸಯ್ಯದ್ ಸಳ್ಳಿನ, ಇನ್ನು ಹಲವಾರು ಸಮಾಜದ ಹಿರಿಯರು, ಯುವಕ ಮಿತ್ರರು ಭಾಗವಹಿಸಿದ್ದರು.
ವರದಿ – ಹುಸೇನಬಾಷ ಮೋತೆಖಾನ್