ನಡೆದಾಡುವ ದೇವರು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮಿಗಳು..…

Spread the love

ನಡೆದಾಡುವ ದೇವರು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮಿಗಳು..…

“ಸಿದ್ಧಗಂಗೆಯ ಸರ್ವೇಶ”

ಆಧ್ಯಾತ್ಮದೆಡೆ ಪಾದ ಬೆಳೆಸಿದ ನಡೆದಾಡುವ ದೈವ

ಶ್ರೀಶ್ರೀಶ್ರೀ ಶಿವಯೋಗಿ ಶಿವಕುಮಾರ ಸ್ವಾಮಿಗಳ ಪಾದಕ್ಕೆ…. ಅರ್ಪಣೆ

ಓ ನನ್ನ ದೇವರೇ,

ನೀ ಹೀಗಿರಬಹುದೆಮದು ಮನಸಾ ಊಹಿಸಿ,ಕಲ್ಪಿಸಿ,ಅಲ್ಲಿಯೇ ಗುಡಿಯೊಂದ ಕಟ್ಟಿ,

ಈ ಹೃದಯವನೆ ಮಂದಿರವಾಗಿಸಿ,

ಹೋಮ-ಹವನವೆಂಬ ದ್ಯಾನವ ಮಾಡುತ್ತ ನಮಿಸುವೆನು… ಶಿವಕುಮಾರ ಶ್ರೀ ಶಿವಯೋಗಿ ಚರಣ ಕಮಲಗಳಿಗೆ..!

 

ನೀ ನಿಲ್ಲದ ಗುಡಿಯ ಕಂಡು,

ಭಕ್ತಿಯ ಜೋಳಿಗೆ ಹಾಕಿ,

ಭಕ್ತಿ ಭಂಡಾರದ ಭಕ್ತರಿಗೂ ಜ್ಞಾನ ಶಿವಯೋಗಿ ತತ್ವವ ನಾಡಿನ ಜನತೆಗೂ ಸಾರುವ ಜೊತೆ-ಜೊತೆಗೆ ಶಿವ ನಾಮವ ಪಠಿಸುವೆ ನಾನು

ಈ ಕಲಿಯುಗ ಕಾಮಧೇನುವಿಗೆ…!

 

ಬೆಳ್ಳಿ-ಬಂಗಾರ ಮೋಹಗಳ ತ್ಯಜಿಸಿ,

ಸಿರಿತನ ಸುಖವ ಬಯಸದ ಜೀವವಾಗಿ ತನ್ನನ್ನು ನೆನೆದವರಿಗೆ ಅನ್ನ ಕಲಿಕೆ-ಜ್ಞಾನಗಳೆಂಬ ತ್ರಿವಿಧ ದಾಸೋಹಗಳ ನೀಡುತ್ತಾ,

ಮಹಾತಾಯಿ ಮಡಿಲಂತೆ ಲಿಂಗ ಪೂಜೆಗೈದು ‘ಬ್ರಹ್ಮಾಂಡ’ವನೇ ಸಾಧಿಸಿ..

ಮಹಾಲೀಲೆಯ ತೋರಿದ ನನ್ನೊಡೆಯನ ಧ್ಯಾನಿಸುವೆನು…!

 

ಮಕ್ಕಳನೇ ತನ್ನಾಸ್ತಿಯನ್ನಾಗಿಸಿ,

ಅರಿಷಡ್ವರ್ಗಗಳನ್ನು ತ್ಯಜಿಸಿದ

ಈ ಮಹಾನ್ ಸತ್ಪುರುಷರಾಗಿ

ಕಾವಿಯನ್ನೇ ಉಸಿರಾಗಿ ಧರಿಸಿ,

ಕೈಲಾಸ ಕಂಡು ಎನ್ನಮನ ಮಂದಿರದ ಗದ್ದುಗೆಯೊಳು ಸುಪೂಜಿತ ಏಕನಾಥ ಶಿವರು ಇವರಯ್ಯಾ ಎಂದು

ಸರ್ವಲೋಕಗಳಿಗೂ ಸಾರುವೆನು….

ಲೇಖನ :-

ಸಿ.ಆರ್ ಶಿವಕುಮಾರ್ ಸಕ್ಷಮ. ಶಿವಮೊಗ್ಗ

Leave a Reply

Your email address will not be published. Required fields are marked *