ಶಿಕ್ಷಕಿ ಸ್ವಂತ ಹಣದಿಂದ ಶಾಲೆ ಮಕ್ಕಳಿಗೆ 25 ಸಾವಿರ ಪುಸ್ತಕ ಖರೀದಿ,,,,,
ಗಬ್ಬೂರು:-ಅರ್ಚನಾ ಮುಖ್ಯ ಶಿಕ್ಷಕಿಯವರು ತಮ್ಮದೇ ಸ್ವಂತ 25,000 ಸಾವಿರ ಹಣದಲ್ಲಿ ಮಕ್ಕಳಿಗಾಗಿ ಪುಸ್ತಕ ಖರೀದಿ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಹೋಲಿಸಿ ನೋಡುವ ಪಾಲಕರು, ಮತ್ತಿತರರು ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ ಆಗುತ್ತಿರುವ ಸಾಕಷ್ಟು ಹೊಸ ಬದಲಾವಣೆಗಳ ಬಗ್ಗೆ ಮಾತನಾಡುವುದು ಕಡಿಮೆ ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಎನ್ನುವಷ್ಟು ಬದಲಾವಣೆಗಳು ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಲ್ಲಿ ನಿಸ್ವಾರ್ಥ ಶಿಕ್ಷಕ-ಶಿಕ್ಷಕಿಯರು ತಮ್ಮ ಸ್ವಂತ ಹಣ ವ್ಯಯಿಸಿ ಸಾಧಿಸಿ ತೋರಿಸಿದ್ದಾರೆ.ಅವರಲ್ಲಿ ರಾಯಚೂರಿನ ಪಂಚಮುಖಿ ಗಾಣದಾಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯೋಪಾಧ್ಯಾಪಕಿಯಾದ ಅರ್ಚನಾ ಅವರು ತಮ್ಮದೇ ಶಾಲೆ ತಮ್ಮದೇ ಮಕ್ಕಳು ಎನ್ನುವಂತೆ ಕರ್ತವ್ಯ ನಿರ್ವಹಿಸುತ್ತಿರುವ ಅಪರೂಪದ ಶಿಕ್ಷಕಿ ಎಂದು ನೆನೆಸುತ್ತಾರೆ ಗಾಣದಾಳ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿಗಳ ಪಾಲಕರು. ಶಾಲೆಗೆ ಬರುವ ಸಣ್ಣ ಅನುದಾನವನ್ನು ಸಹ ಕಬಳಿಸುವ ಕೆಲವರು ನಾಚುವಂತೆ,ಕೇವಲ ಬೆಲ್ಲು ಬಿಲ್ಲು ಎಂದು ಜರಿಯುವ ಜನಗಳ ಎದುರು ನಿಸ್ವಾರ್ಥವಾಗಿ ತಮ್ಮ ಸ್ವಂತ ಹಣದಲ್ಲಿ ಸಾಕಷ್ಟು ಮಕ್ಕಳಿಗೆ ಶಾಲೆಗೆ ಉಪಯೋಗವಾಗುವ ಕಾರ್ಯ ಮಾಡಿದ್ದಾರೆ..
ವರದಿ:ಸಂಪಾದಕೀಯ