ದೈಹಿಕ ಶಿಕ್ಷಕರ ಇಲ್ಲದೆ ಜುಮಲಾಪೂರ ಪಂಚಾಯಿತಿ ಮಟ್ಟದ ಕ್ರೀಡಾಕೂಟದ ಪ್ರತಿ ಆಟದಲ್ಲೂ ಜಯ ಬೇರಿ ಬಾರಿಸಿದ ಜುಮಲಾಪೂರ ಸ. ಮಾ. ಹಿ. ಪ್ರಾ. ಶಾಲಾ ಮಕ್ಕಳು..
ತಾವರಗೇರ ಹೋಬಳಿಯ ಜುಮಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ. ಇಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಎಸ್ ಡಿ ಎಂ ಸಿ ಸರ್ವ ಸದಸ್ಯರಿಗೆ ಗ್ರಾಮದ ಹಿರಿಯರಿಗೆ ಹಾಗೂ ಶಿಕ್ಷಕರಿಗೆ ಬಾಲಕಿಯರಿಂದ ಪುಸ್ಪ ನಿಡುವ ಮುಖಾಂತರ ಸ್ವಾಗತಿಸಿದರು. ಜುಮಲಾಪೂರ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾಕೂಟ ವನ್ನು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಬಡಿಗೇರ ಶಾಲಾ ಕ್ರೀಡೆ ಗುಂಡು ಎಸೆಯುವ ಮುಖಾಂತರ ಉದ್ಘಾಟಿಸಿದರು. ಪಂಚಾಯಿತ ಮಟ್ಟದ ಕ್ರೀಡಾಕೂಟಕ್ಕೆ ಸಾಸ್ವಿಹಾಳ. ಮುದ್ದಲಗುಂದಿ. ಹಾಗಲದಾಳ. ಹಾಗೂ ನಂದಾಪೂರ ಗ್ರಾಮಗಳ. ದೈಹಿಕ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರು ಆಗಮಿಸಿದ್ದರು ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಐದು ಗ್ರಾಮಗಳ ಶಾಲೆಯ ಬಾಲಕ ಬಾಲಕಿಯರನ್ನು ಈ ಕಾರ್ಯಕ್ರಮಕ್ಕೆ ಶ್ರೀ ನಂದ ಬಸಪ್ಪ ಶಿಕ್ಷಕರು ಸ್ವಾಗತ ಮಾಡಿಕೊಂಡರು ಕ್ರೀಡಾಕೂಟದಲ್ಲಿ . ಪಾಲ್ಗೊಂಡು ಅದರಲ್ಲಿ ನಾಲ್ಕು ಗ್ರಾಮಗಳ ಶಾಲಾ ಮಕ್ಕಳ ವಿರುದ್ಧ ಜುಮಲಾಪೂರ ಶಾಲಾ ಬಾಲಕ ಬಾಲಕಿಯರು. ಕಬಡ್ಡಿ. ಖೋಖೋ. ತ್ರೋಬಾಲ. ಕ್ರೀಡೆಯಲ್ಲಿ ಅತ್ಯಂತ ಜಯಭೇರಿ ಬಾರಿಸಿದರು. ಹಾಗೆ ಬಹು ವರ್ಷಗಳಿಂದ ಕನಸಾಗಿಯೇ ಉಳಿದಿದ್ದ ಖೋಖೋ ಪಂದ್ಯವನ್ನು ಗೆದ್ದು ಜುಮಲಾಪೂರ ಶಾಲಾ ಮಕ್ಕಳು ಈ ಬಾರಿ ಸಂಭ್ರಮಿಸಿದರು ಹಾಗೆ ಉಳಿದಂತೆ.
ವ್ಯಯಕ್ತಿಕ ಕ್ರೀಡೆಯಲ್ಲಿ ಹೆಚ್ಚಾನೆಚ್ಚು ಜುಮಲಾಪೂರ ಶಾಲಾ ಮಕ್ಕಳು ಜಯಭೇರಿ ಬಾರಿಸಿ. ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ( ವಿಶೇಷವಾಗಿ ಜುಮಲಾಪೂರ ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆಯಿಂದ “ತಾಯಿ ಇಲ್ಲದೆ ತಬ್ಬಲಿ ಯಂತೆ” ಸಹ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸಿ ಜಯ ಭೇರಿಯಾಗಿ ಜಯ ಸಾಧಿಸಿ ಮಾದರಿಯಾಗಿದ್ದಾರೆ.) ಹಾಗಾಗಿ ಗ್ರಾಮದ ಪಾಲಕರು ಜುಮಲಾಪೂರ ಶಾಲೆಗೆ ದೈಹಿಕ ಶಿಕ್ಷಕರ ಅವಶ್ಯಕತೆ ಇದೆ. ಹಾಗಾಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಮಕ್ಕಳ ಉಜ್ವಲ ಭವಿಷ್ಯಕ್ಕೊಸ್ಕರ ಕೂಡಲೆ ದೈಹಿಕ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಗ್ರಾಮಸ್ಥರು ಪತ್ರಿಕೆಗೆ ಹೆಳಿಕೆ ನಿಡಿದರು. ಆದರೂ ಎಲ್ಲಾ ಕ್ರೀಡೆಯನ್ನು ಸಹ ಶಿಕ್ಷಕರೇ ಮಕ್ಕಳಿಗೆ ಮಾರ್ಗದರ್ಶನ ನಿಡಿ ಮಕ್ಕಳಲ್ಲಿ ಕ್ರೀಡಾಮನೋಬಾವನೆ ಬೆಳೆಸಿ ಕ್ರೀಡೆಯಲ್ಲಿ ಜಯಭೇರಿ ಬಾರಿಸಿರುವದು ಗಮನಿಸಿದರೆ. ಜಯದ ಕಿರ್ತಿ ಸಹ ಶಿಕ್ಷಕರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ 1)ಶ್ರೀ ಪಿಡ್ಡನಗೌಡ ಹಳೆಗೌಡರು. 2)ಪರಸಪ್ಪ ಹೊಸಮನಿ. 3)ಗವಿಸಿದ್ದಪ್ಪ. 4)ಮಲ್ಲಿಕಾರ್ಜುನ ಸೂಡಿ. 5)ಶಾಮೂರ್ತಿ ಭಜಂತ್ರಿ. ದೈಹಿಕ ಶಿಕ್ಷಕರು ಎಲ್ಲರೂ ಕ್ರೀಡೆಯನ್ನು ಸುಗಮವಾಗಿ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗುರುಪಾದಮ್ಮರವರು. ಮತ್ತು ಶಿಕ್ಷಕ ಬಳಗದವರು ಹಾಗೂ ಗ್ರಾಮದ ಸದಸ್ಯರು ಊರಿನ ಸಮಸ್ತ ನಾಗರಿಕರು ಯುವಕರು ಭಾಗಿಯಾಗಿದ್ದರು.
ವರದಿ – ಸಂಪಾದಕೀಯ