ದಶಕಗಳಿಂದ ಸೌಕರ್ಯಗಳ ಕಿಮ್ಮತ್ತಿಲ್ಲದ ಕಿತ್ನೂರು ಗ್ರಾಮ……
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಗಡಿಗ್ರಾಮ ಕಿತ್ನೂರು, ಕಳೆದ ದಶಕಗಳಿಂದ ಕನಿಷ್ಠ ಸೌಲಭ್ಯಗಳಿಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಇಡೀ ಗ್ರಾಮಸ್ಥರೇ ದೂರಿದೆ. ಗ್ರಾಮ ಪಂಚಾಯಿತಿ ಸ್ಥಾನ ಮಾನ ಕಲ್ಪಿಸುವಂತೆ ನಡೆಸಿದ ಕಾನೂನು ಹೋರಾಟ, ಹಾಗೂ ಚುನಾವಣೆ ಬಹಿಷ್ಕಾರದ ಪರಿಣಾಮ ಇದಾಗಿದೆ ಎಂದು ಬಹುತೇಕ ಗ್ರಾಮಸ್ಥರ ಅಭಿಪ್ರಾಯವಾಗಿದೆ. ಕಳೆದ ದಶಕಗಳಿಂದ ಜರುಗಿರುವ ಎಲ್ಲಾ ಹಂತದ ಚುನವಣೆಗಳನ್ನ, ಗ್ರಾಮ ನಿರಂತರ ಭಹಿಷ್ಕರಿಸುವುದರ ಮೂಲಕ ಪ್ರತಿಭಟಿಸುತ್ತಾ ಬಂದಿದೆ. ಗ್ರಾಮ ಪಂಚಾಯ್ತಿ ಕೇಂದ್ರವನ್ನಾಗಿ ಪರಿಗಣಿಸಬಹುದಾದ ಎಲ್ಲಾ ಅರ್ಹತೆ ಗ್ರಾಮಕ್ಕಿದ್ದು, ಕೆಲವೇ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಮಣಿದು ಸರ್ಕಾರ ನೆರೆ ಗ್ರಾಮಕ್ಕೆ ಮಾನ್ಯತೆ ನೀಡಗುತ್ತಿದೆ. ಇದರಿಂದಾಗಿ ಗ್ರಾಮಕ್ಕೆ ಅನ್ಯಾಯ ವಾಗಲಿದೆ ಹಾಗೂ ನಿಯಮ ಉಲ್ಲಂಘಿಸಿದಂತಾಗಿದೆ, ಇದರ ವಿರುದ್ಧ ಕನೂನು ಹೋರಾಟ ನಡೆದಿದ್ದು ಎಲ್ಲಾ ಚುನಾವಣೆಗಳನ್ನು ಭಹಿಷ್ಕರಿಸುತ್ತಿದ್ದು. ರಾಜ್ಯಪಾಲರು ಸಹ ನಮ್ಮ ಗ್ರಾಮಕ್ಕೆ ಗ್ರಾಪಂ ಕೇಂದ್ರ ಸ್ಥಾನ ಮಾನ ನೀಡುವಂತೆ ಸೂಚಿಸಿದ್ದಾರೆ.ಆದರೂ ಅವರ ಸೂಚೆನ ಪಾಲಿಸುತ್ತಿಲ್ಲ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದು ಅದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವುದಾಗಿ ಗ್ರಾಮದ ಪ್ರಮುಖರು ತಿಳಿಸಿದ್ದಾರೆ. ದಶಕಗಳಿಂದ ನಿರ್ಲಕ್ಷ್ಯ- ದಶಕಗಳಿಂದ ಗ್ರಾಮಕ್ಕೆ ಕನಿಷ್ಠ ಸೌಲಭ್ಯಗಳಿಲ್ಲವಾಗಿದೆ, ಹಲವು ವರ್ಷಗಳಿಂದ ಚರಂಡಿಗಳು ತುಂಬಿ ನಾರುತ್ತಿವೆ. ಪರಿಣಾಮ ಇಡೀ ಗ್ರಾಮ ಸೊಳ್ಳೆ ಕ್ರಿಮಿ ಕೀಟಗಳ ಭಾದೆ ಅನುಭವಿಸುತ್ತಿದೆ. ಪರಿಣಾಮ ಸಾಂಕ್ರಾಮಿಕ ರೋಗಗಳು ತಾಂಡವಾಡುತ್ತಿವೆ, ಬಹುತೇಕ ಗ್ರಾಮಸ್ಥರು ಹಲವು ರೋಗ ಋಜನಗಳಿಂದ ನರಳುವಂತಾಗಿದೆ. ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದು, ಆತಂಕದಿಂದ ಜೀವನ ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ರಸ್ತೆಗಳು ಹಾಗೂ ಗಲ್ಲಿಗಳು ಹಲವು ವರ್ಷಗಳಿಂದ ದುರಸ್ತಿ ಕಾಣದೇ ಕೆಸರು ಗದ್ದೆಗಳಾಗಿವೆ, ಗ್ತಾಮದ ಮಧ್ಯದಲ್ಲಿಯೇ ತಿಪ್ಪೆಗುಂಡಿಗಳು ನಿರ್ಮಣವಾಗಿವೆ. ಗ್ರಾಮ ಹತ್ತಾರು ವರ್ಷಗಳಿಂದ ನೈರ್ಮಲ್ಯತೆ ಕಂಡಿಲ್ಲ, ಸ್ಥಳೀಯ ಆಡಳಿತ ಕನಿಷ್ಟ ಸೌಕರ್ಯಗಳನ್ನ ಒದಗಿಸಿಲ್ಲ. ಹತ್ತಾರು ವರ್ಷಗಳಿಂದ ಗ್ರಾಮ ಅಭಿವೃದ್ಧಿ ಕಾಣದೇ, ತಾಲೂಕಾಡಳಿತದಿಂದ ನಿರಂತರ ಶೋಷಣೆಗೊಳಗಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಸಂಬಂಧಿಸಿದಂತೆ ಎಲ್ಲಾ ಹಂತದ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದ್ದು, ಎಲ್ಲಾ ಹಂತದ ಜನಪ್ರತಿನಿಧಿಗಳ ಮೊರೆಹೋಗಿದ್ದು ಯಾವುದೇ ಸ್ಪಂಧನೆ ದೊರೆತಿಲ್ಲ ಎಂದು ಗ್ರಾಮದ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ಅವರು ಮಾಡುತ್ತಿರುವ ಶೋಷಣೆ ವಿರುದ್ಧ, ರಾಜ್ಯಪಾಲರಲ್ಲಿ ದೂರುನೀಡಲಾಗುವುದು ಮತ್ತು ನ್ಯಾಯಾಲಯದ ಮೊರೆ ಹೋಗಲಾಗುವುದು. ಮತ್ತು ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನ ದೊರೆಯುವವರೆಗೂ ಕಾನೂನು ಹೋರಾಟ ಮಾಡಲಾಗುವುದು, ಯಾವುದೇ ಕಾರಣಕ್ಕೆ ರಾಜೀ ಮಾತಿಲ್ಲ ಅದು ನಮ್ಮ ಹಕ್ಕಾಗಿದ್ದು ಅದಕ್ಕಾಗಿ ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ. ದಶಕಗಳಿಂದ ಎಲ್ಲಾ ಹಂತದ ಚುನಾಣೆಗಳನ್ನ ಭಹಿಷ್ಕರಿಸುತ್ತ ಪ್ರತಿಭಟನೆ ನಡೆಸಿದ್ದು, ಮುಂಬರುವ ಎಲ್ಲಾ ಹಂತದ ಚುನಾವಣೆಗಳನ್ನೂ ಕೂಡ ಭಹಿಷ್ಕರಿಸುತ್ತೇವೆ ಹಕ್ಕಿಗಾಗಿ, ಮೂಲಭೂತ ಸೌಕರ್ಯಗಳಿಗಾಗಿ ಕಾನುನು ರೀತ್ಯ ಹೋರಾಟ ನಿಲ್ಲದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಟ್ಟಾರೆ ಯಾಗಿ ಕಿತ್ನೂರು ಗ್ರಾಮ ಹತ್ತಾರು ವರ್ಷಗಳಿಂದ ಕನಿಷ್ಠ ಸೌಕರ್ಯಗಳನ್ನು ಕಾಣದೇ, ತಾಲೂಕಾಡಳಿತದಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಮತ್ತು ಜನಪ್ರತಿನಿಧಿಗಳಿಂದ ಶೋಷಣೆಗೆ ಒಳಗಾಗಿದೆ ಎಂದು ಸಾಬೀತಾಗಿದೆ. ಇಡೀ ಗ್ರಾಮ ಹತ್ತಾರು ವರ್ಷಗಳಿಂದ ಹತ್ತಾರು ಜ್ವಲಂತ ಸಮಸ್ಯೆಗಳಿಂದ ನಿತ್ಯ ನರಳುತ್ತಿದೆ, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದ ಹೋರಾಟಗಾರರು ತಮ್ಮ ಮನವಿಗೆ ಸ್ಪಂಧಿಸದ ಅಧಿಕಾರಿಗಳ ವಿರುದ್ಧ,ಸ್ಥಳೀಯ ಹಾಗೂ ತಾಲೂಕಾಡಳಿತದ ನಿರ್ಲಕ್ಷ್ಯ ವಿರುದ್ಧ ಕಾನೂನಾತ್ಮ ಹೋರಾಟಕ್ಕೆ ಸರ್ವ ಸನ್ನದ್ಧರಾದ್ದಾರೆ. ಸ್ಥಳೀಯ ಶಾಸಕರು ಮಾತ್ರ ತಮಗೂ ಈ ಗ್ರಾಮಕ್ಕೂ ಸಂಬಂಧಿಸಿದವೇ ಇಲ್ಲ ಎನ್ನೋರೀತಿ ವರ್ತಿಸುತ್ತಿದ್ದಾರೆ, ಯಾವುದೇ ಜನಪ್ರತಿನಿಧಿಗಳು ಗ್ರಾಮದ ಕಡೆ ಕಣ್ಣು ಹಾಯಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮುಂಬರುವ ಎಲ್ಲಾ ಹಂತದ ಚುನಾವಣೆಗಳನ್ನ ಭಹಿಷ್ಕರಿಸಲು ನಿರ್ಧರಿಸಿದ್ದು, ಹಾಗೊಮ್ಮೆ ಗ್ರಾಮಕ್ಕೆ ಬರುವ ಮತಯಾಚನೆಗೆ ಬರುವ ಡೋಂಗೀ ಮುಖಂಡರಿಗೆ. ಗ್ರಾಮದಿಂದ ಸಾಮೂಹಿಕವಾಗಿ ಚೀಮಾರಿ ಹಾಕಲಾಗುವುದು ಹಾಗೂ ನಿರ್ಲಕ್ಷ್ಯ ತೋರಿರುವ ಭ್ರಷ್ಟ ಅಧಿಕಾರಿಗಳಿಗೆ ಘೇರಾವು ಹಾಕಲಾಗುದು ಎಂದು ನೊಂದ ಕಿತ್ನೂರು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428