ಗಬ್ಬು ನಾರುತ್ತಿರುವ ಚರಂಡಿಗಳ ವಿರುದ್ಧ ಆಮ್ ಆದ್ಮಿ ಪಕ್ಷದ ಹೋರಾಟ ಕೊಪ್ಪಳ ತಾಲೂಕಿನ ಬೂದುಗುಂಪ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ…….

Spread the love

ಗಬ್ಬು ನಾರುತ್ತಿರುವ ಚರಂಡಿಗಳ ವಿರುದ್ಧ ಆಮ್ ಆದ್ಮಿ ಪಕ್ಷದ ಹೋರಾಟ ಕೊಪ್ಪಳ ತಾಲೂಕಿನ ಬೂದುಗುಂಪ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ…….

ಇಂದು ಅಮಾನ್ಯ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಗೂ ಗ್ರಾಮದ ನಿವಾಸಿಗಳು ಗಬ್ಬು ನಾರುತ್ತಿರುವ ಚರಂಡಿ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು ಗ್ರಾಮದ ಪ್ರತಿ ರಸ್ತೆಯು ಚರಂಡಿಮಯವಾಗಿದ್ದು ಸೊಳ್ಳೆಗಳ ಕಾಟ ಅಧಿಕವಾಗಿರುತ್ತದೆ ಚರಂಡಿ ನೀರು ಸುಗಮವಾಗಿ ಹಾರಿದು ಹೋಗದೆ ಅಲ್ಲಲ್ಲಿ ನಿಂತುಕೊಂಡು ಗಬ್ಬು ನಾರುತ್ತಿದೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೆ ಮನವಿ ಪತ್ರ ಸಲ್ಲಿಸಿ, ಈ ಕೂಡಲೇ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಪಡಿಸಬೇಕು ಮತ್ತು ಊರಿನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಹಾಜರಿದ್ದರು ಈ ಸಂದರ್ಭದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶರಣಪ್ಪ ಸಜ್ಜಿ ಹೊಲ ಮಾತನಾಡಿ ಗ್ರಾಮ ಪಂಚಾಯತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೇರವಾಗಿ ಅನುದಾನ ಹರಿದು ಬರುತ್ತಿದ್ದರು ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಾವತಿ ಆಗುತ್ತಿದ್ದರೂ ಸಹ ಯಾವುದೇ ಸ್ವಚ್ಛತೆ ಗ್ರಾಮದಲ್ಲಿ ಕಾಣುತ್ತಿಲ್ಲ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಗ್ರಾಮ ಪಂಚಾಯಿತಿ ಜನರ ಕಷ್ಟವನ್ನು ದೂರಮಾಡುವ ಬದಲು ಇನ್ನಷ್ಟು ಕಷ್ಟಗಳನ್ನು ನೀಡುತ್ತಿದೆ ಕೂಡಲೇ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗೇಶ್ ಮುತ್ತಾಳ ಮಾತನಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವತ್ತು ಗ್ರಾಮವು ಹಲವು ಸಮಸ್ಯೆಗಳಿಂದ ಬಳಲುತ್ತಿದೆ, ಗಟರ್ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು ಪಂಚಾಯಿತಿಯವರು ಬೇಜವಾಬ್ದಾರಿತನವನ್ನು ತೋರಿಸುತ್ತಿದ್ದಾರೆ ಸಮಸ್ಯೆಗಳನ್ನು ಬಗೆಹರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದರು ಜಿಲ್ಲಾ ಮಾಧ್ಯಮ ವಕ್ತರರಾದ ರಾಘವೇಂದ್ರ ಸಿದ್ದಿಕೇರಿ ಗಂಗಾವತಿ ಅಧ್ಯಕ್ಷರಾದ ಬಸವರಾಜ್ ಮ್ಯಾಗಳ ಮನಿ ಕಾರ್ಮಿಕ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ನಿಸರ್ಗ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಮುತ್ತಾಳ ಎಸ್ ಟಿ ಘಟಕದ ಅಧ್ಯಕ್ಷರಾದ ಚನ್ನು ನಾಯಕ್ ರಾಘವೇಂದ್ರ ಕಡೆ ಬಾಗಿಲು  ತಾಲೂಕು ಮಾಧ್ಯಮ ಪ್ರತಿನಿಧಿ ದೇವರಾಜ್ ಗಣೇಶ ಗಾಳಪ್ಪ ಹರಿಜನ ಲಕ್ಷ್ಮಣ ಹನುಮಂತಪ್ಪ ಲಕ್ಷ್ಮಿ ಪ್ರೇಮ ತಿಮ್ಮಯ್ಯ ದಿನ್ನಿ ಹನುಮಂತಮ್ಮ ಕರಡಿ ಎಲ್ಲಮ್ಮ ಜಬಲಗುಡ್ಡ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ – ಬಾಲರಾಜ ಯಾದವ್

Leave a Reply

Your email address will not be published. Required fields are marked *